ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಕೊಲೆಯಾಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಖವಾಜ್‌ಪುರ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ.
ರಾಮ್ ಕುಮಾರ್ ಯಾದವ್ (55), ಅವರ ಪತ್ನಿ ಕುಸುಮ್ ದೇವಿ (52), ಮಗಳು ಮನೀಶಾ (25), ಸೊಸೆ ಸವಿತಾ (27) ಮತ್ತು ಮೊಮ್ಮಗಳು ಮಿನಾಕ್ಷಿ (2) ಕೊಲೆಯಾದ ದುರ್ದೈವಿಗಳು. ಇನ್ನೋರ್ವ ಮೊಮ್ಮಗಳು ಸಾಕ್ಷಿ (5) ಬದುಕುಳಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದವ್ ಅವರ ಮಗ ಸುನೀಲ್ (30) ಈ ವೇಳೆ ಮನೆಯಲ್ಲಿರಲಿಲ್ಲ. ಅವರು ತನಿಖೆಗೆ ಎಲ್ಲಾ ರೀತಿಯ ಸಹಾಯ ಮಾಡೋದಾಗಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐವರ ತಲೆಗೆ ಪೆಟ್ಟಾಗಿದೆ ಎಂದು ಸೂಚಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಾಧದ ತನಿಖೆಗಾಗಿ ಏಳು ತಂಡಗಳನ್ನು ರಚಿಸಲಾಗಿದೆ. ಹಂತಕರ ಸುಳಿವುಗಳನ್ನು ಕಂಡು ಹಿಡಿಯಲು ಶ್ವಾನದಳ ಮತ್ತು ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕೊಲೆ ಮಾಡಿದವರು ಯಾರು ಅನ್ನೋದು ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post