ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಈ ಹಿಂದೆಯೇ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ನಡುವೆ 1 ರಿಂದ 5ನೇ ತರಗತಿಯ ಮಕ್ಕಳಿಗೂ ವ್ಯಾಕ್ಸಿನ್ ನೀಡುವ ದಾರಿ ಸುಗಮಾವಾಗಿದ್ದು, ಇಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
6 ರಿಂದ 12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಎಮರ್ಜೆನ್ಸಿ ಬಳಕೆಗೆ ಅನುಮತಿಯನ್ನು ಇಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನೀಡಿದೆ. ಹಾಗೆ ನೋಡಿದ್ರೆ ಡಿಸೆಂಬರ್ 2, 2021ರಿಂದಲೇ 12-18 ವರ್ಷದ ಮಕ್ಕಳಿಗೆ ಝೈಕೋವ್-ಡಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ನಡುವೆ ಈಗ 6-12 ವರ್ಷದ ಮಕ್ಕಳಿಗೆ ಯಾವಾಗ ವ್ಯಾಕ್ಸಿನ್? ಅನ್ನೋ ಪ್ರಶ್ನೆ ಎಲ್ಲ ಪಾಲಕರಲ್ಲೂ ಇತ್ತು. ಅದಕ್ಕೆ ಉತ್ತರವಾಗಿ ಇಂದು ಕೇಂದ್ರ ಸರ್ಕಾರ ಈ ವಯೋಮಾನದ ಮಕ್ಕಳಿಗೂ ವ್ಯಾಕ್ಸಿನ್ ನೀಡಲು ನಿರ್ಧಾರ ಮಾಡಿದೆ. ಇನ್ನು ದೇಶದಲ್ಲಿ ಒಟ್ಟಾರೆ 1,87,96,34,000 ಡೋಸ್ಗೂ ಅಧಿಕ ವ್ಯಾಕ್ಸಿನ್ ನೀಡಲಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post