ಕೊರೊನಾ ಹೊಗೆ ಬಿಡ್ತು ಅಂತ ನಿಟ್ಟುಸಿರು ಬಿಟ್ಟು ಆರಾಮಾಗಿ ಓಡಾಡ್ಕೊಂಡಿದ್ದ ಜನರಿಗೆ ಮತ್ತೆ ಹೆಮ್ಮಾರಿ ಕಾಟ ಶುರುವಾಗಿದೆ. ದೇಶದಲ್ಲಿ ಸೈಲೆಂಟ್ ಆಗಿದ್ದ ವೈರಸ್ ವೈಲೆಂಟ್ ಆಗಿದ್ದು, ಸದ್ದಿಲ್ಲದೇ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗೋ ಎಚ್ಚರಿಕೆಯನ್ನು ತಜ್ಞರು ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆರಂಭದಲ್ಲೇ ಕೊರೊನಾ ಕಟ್ಟಿಹಾಕಲು ಸರ್ಕಾರ ಮುಂದಾಗಿದೆ. ಕೊರೊನಾ ಒಂದನೇ ಅಲೆ ಹಾಗೂ ಎರಡನೇ ಬಂದಾಗ ದೇಶದ ಜನರು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಾಗಿ ಕೇಂದ್ರದಗಳ ಮುಂದೆ ಸಾಲು ಸಾಲು ನಿಂತು ವಾಕ್ಸಿನೇಷನ್ ತೆಗೆದುಕೊಂಡಿದ್ದರು. ನಾಲ್ಕನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಸರ್ಕಾರ ಬೂಸ್ಟರ್ ನೀಡಲು ಮುಂದಾದರೂ ಕೂಡ ಜನರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬೂಸ್ಟರ್ ಡೋಸ್ ಕಡ್ಡಾಯ ವ್ಯಾಕ್ಸಿನೇಷನ್ಗೆ ಬಿಬಿಎಂಪಿ ಜಾಸ್ತಿ ಒತ್ತು ನೀಡುತ್ತಿದ್ದು, ಕಡ್ಡಾಯವಾಗಿ ಬೂಸ್ಟರ್ ಡೋಸ್ ನೀಡಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಪ್ರತಿಯೊಬ್ಬ ಅರ್ಹರಿಗೂ ಬೂಸ್ಟರ್ ಡೋಸ್ ನೀಡುವಂತೆ ಪಾಲಿಕೆ ಕಸರತ್ತು ಮಾಡುತ್ತಿದೆ. ನಾಲ್ಕನೇ ಅಲೆ ಉಲ್ಬಣಕ್ಕೂ ಮುನ್ನ ಬೂಸ್ಟರ್ ಡೋಸ್ಗೆ ವೇಗವಾಗಿ ಪಾಲಿಕೆ ನೀಡಲು ಸಿದ್ಧವಾಗಿದೆ.
ಅರ್ಹರಿಗೆ ಬೂಸ್ಟರ್ ಡೋಸ್ ನೀಡಲು ಬಿಬಿಎಂಪಿ ತಯಾರಿ ಏನು..?
- ಬಿಬಿಎಂಪಿಯ ಪ್ರತಿಯೊಂದು UPHC ಸೆಂಟರ್ಗಳಲ್ಲಿ ಬೂಸ್ಟರ್ ಡೋಸ್ ಸಿಗುವಂತೆ ಮಾಡೋದು
- ನಗರದ ಸರ್ಕಾರಿ ಆಸ್ಪತ್ರೆಗಳಲ್ಲೂ ಮುನ್ನೆಚ್ಚರಿಕಾ ಡೋಸ್ ನೀಡಲು ತಯಾರಿ
- ಮೂರನೇ ಅಲೆ ಬಳಿಕ ತೆಗೆಯಲಾಗಿದ್ದ ಆರೋಗ್ಯ ಸಿಬ್ಬಂದಿ ಮರು ನೇಮಕ
- ಮತ್ತೆ ವಲಯವಾರು ಕಂಟ್ರೋಲ್ ರೂಮ್ಗಳು ಓಪನ್
- ಕಂಟ್ರೋಲ್ ರೂಮ್ಗಳಿಗೂ ವೈದ್ಯಾಧಿಕಾರಿ, ಸಿಬ್ಬಂದಿ ಮರುನೇಮಕ
- ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಜಾಗೃತಿ
- ಸಂಘಸಂಸ್ಥೆಗಳು, ಅಸೋಸಿಯೇಶನ್, ಅಪಾರ್ಟ್ಮೆಂಟ್ ಗಳ ಬಳಿ ವ್ಯಾಕ್ಸಿನೇಷನ್ ಕ್ಯಾಂಪ್ ಗೆ ಚಿಂತನೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post