ಗಟ್ಟಿಮೇಳ ಧಾರಾವಾಹಿಯಲ್ಲಿ ಏನಾದ್ರೂ ಒಂದು ಟ್ವಿಸ್ಟ್ ಇದ್ದೇ ಇರುತ್ತೆ. ತಮ್ಮಂದಿರಿಗಾಗಿ ಹೋರಾಡುತ್ತಿರುವ ವೇದಾಂತ್ ಕಥೆಗೆ ದೊಡ್ಡ ತಿರುವು ನೀಡಿದ್ದಾನೆ. ದ್ರುವ ಸತ್ತೋದ ಅನ್ಕೊಂಡಿದ್ದ ಕುಟುಂಬಕ್ಕೆ ಅಶ್ಚರ್ಯದ ಸಂಗತಿ ಎದುರಾಗಿದೆ. ದ್ರುವನನ್ನ ಕೋರ್ಟ್ಗೆ ಕರೆತಂದಿದ್ದಾನೆ ಆದಿ. ಹೌದು, ದ್ರುವನನ್ನ ಕಳೆದುಕೊಂಡ್ವಿ ಅಂತಾ ಪರಿತಪಿಸುತ್ತಿದ್ದ ವಶಿಷ್ಟ ಕುಟುಂಬಕ್ಕೆ ಮತ್ತೇ ಜೀವ ಬಂದಂತಾಗಿದೆ. ಕೋರ್ಟ್ನಲ್ಲಿ ಸ್ವತಃ ವೇದಾಂತ್ ವಾದ ಮಾಡುತ್ತಿದ್ದು, ಇಬ್ಬರು ತಮ್ಮಂದಿರ ಜೀವ, ಜೀವನ ಎರಡನ್ನು ಕಾಪಾಡಿದ್ದಾನೆ. ಆದ್ರೇ ಸುಹಾಸಿನಿಯ ಸತ್ಯ ಹೊರಬರಬೇಕಿದೆ. ದ್ರುವ..ಮಾತ್ನಾಡದ ಪರಿಸ್ಥಿತಿಯಲ್ಲಿದ್ದಾನೆ.
ದ್ರುವ ಹಾಗೂ ವಿಕ್ರಾಂತ್ಗೆ ತನ್ನ ರಹಸ್ಯಗಳು ಗೊತ್ತಾಗಿವೆ ಎಂಬ ಭಯ ಸುಹಾಸಿನಿಯನ್ನ ಇನ್ನಿಲ್ಲದಂತೆ ಕಾಡುತ್ತಿದ್ದು, ಅವ್ರ ತಾಯಿಯನ್ನ ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದಾಳೆ. ಆದ್ರೇ ದ್ರುವನನ್ನ ನೋಡಿದ ತಕ್ಷಣ ವೈದೇಹಿ ಅಪ್ಪಿ ಮುದ್ದಾಡಿದ್ದಾಳೆ. ಇದ್ರಿಂದ ವೈದೇಹಿಯೇ ನಿಜವಾದ ಅಮ್ಮ ಅಂತಾ ವೇದಾಂತ್ಗೆ ಗೊತ್ತಾಗೋ ಸೂಚನೆ ಸಿಕ್ತಿದೆ. ಇನ್ನೂ ದ್ರುವ ಕೋರ್ಟ್ಗೆ ಸತ್ಯ ಹೇಳ್ತಾನಾ..? ವಿಕ್ರಾಂತ್ ಹೇಗೆ ರಿಯಾಕ್ಟ್ ಮಾಡ್ತಾನೆ ಅನ್ನೋ ಕುತೂಹಲ ಮೂಡಿಸಿದ್ದು, ಸುಹಾಸಿನಿಯ ಮತ್ತೊಂದು ಪ್ಲಾನ್ ಪ್ಲಾಪ್ ಆಗಿದೆ. ಈಗಲಾದ್ರೂ ವೈದೇಹಿ ಮಕ್ಕಳಿಗೆ ಸತ್ಯಾ ಹೇಳ್ತಾಳ ಅನ್ನೋದು ಮುಂಬುರವ ಎಪಿಸೋಡ್ಗಳಲ್ಲಿ ತಿಳಿಯಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post