ಹೈದರಾಬಾದ್: 1989ರಲ್ಲಿ ನರ್ಗೀಸ್ ದತ್ ಪ್ರಶಸ್ತಿ ಸ್ವೀಕರಿಸಲು ದೆಹಲಿಯಲ್ಲಿ ಕೇಂದ್ರ ಸರ್ಕಾರ ನಡೆಸಿದ ಕಾರ್ಯಕ್ರಮದಲ್ಲಿ ತಮಗೇ ಆದ ಅವಮಾನ ಕುರಿತು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. ಚಿರಂಜೀವಿ, ರಾಮ್ಚರಣ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಆಚಾರ್ಯ’ ಇದೇ ಏಪ್ರಿಲ್ 29 ರಂದು ರಿಲೀಸ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್ನಲ್ಲಿ ಚಿರಂಜೀವಿ ಅವರು ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಡಾ.ರಾಜ್ಕುಮಾರ್, ವಿಷ್ಣು ವರ್ಧನ್ ಅವರನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಚಿರಂಜೀವಿ ಭಾವನಾತ್ಮಕ ಮಾತು..
1989 ರಲ್ಲಿ ರುದ್ರವೀಣೆ ಚಿತ್ರಕ್ಕೆ ನರ್ಗೀಸ್ ದತ್ ಪ್ರಶಸ್ತಿ ದೊರೆತಾಗ ದೆಹಲಿಗೆ ಕರೆಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನ ಸರ್ಕಾರವು ಚಹಾ ಕೂಟ ಆಯೋಜಿಸಿತ್ತು. ಈ ವೇಳೆ ಭಾರತೀಯ ಚಿತ್ರರಂಗದ ಇತಿಹಾಸವನ್ನು ಬಿಂಬಿಸುವ ಚಿತ್ರಗಳನ್ನು ಗೋಡೆ ಮೇಲೆ ಪ್ರದರ್ಶನ ಮಾಡಲಾಗಿತ್ತು. ಅಲ್ಲಿ ಅಮಿತ್ ಬಚ್ಚನ್ ಸೇರಿದಂತೆ ಹಲವು ನಟರ ಫೋಟೋಗಳನ್ನು ಹಾಕಿದ್ದರು. ಅವುಗಳನ್ನು ನೋಡುತ್ತಾ ಸಾಗುತ್ತಿದ್ದ ನನಗೆ ನಮ್ಮ ಸಿನಿಮಾಗಳ ಬಗ್ಗೆ ನೋಡೋ ಆಸ್ತೆ ಆಯ್ತು..
ನನಗೆ ತುಂಬಾ ದುಃಖ, ಅವಮಾನ ಆಯ್ತು..
ಸೌತ್ ಸಿನಿಮಾಗಳ ಕುರಿತು ಕೂಡ ಇರುತ್ತೆ ಅಂತ ನೋಡುತ್ತಾ ಹೋದರೆ ಅಲ್ಲಿ ಎಂಜಿಆರ್ ಹಾಗೂ ಜಯಲಲಿತಾ ಅವರು ಡ್ಯಾನ್ಸ್ ಮಾಡುತ್ತಿರೋ ಕೆಲ ಸ್ಟಿಲ್ಗಳನ್ನು ದಕ್ಷಿಣ ಸಿನಿಮಾ ಅಂತ ಬರೆದಿದ್ದರು. ಆ ಬಳಿಕ ಭಾರತದಲ್ಲೇ ಅತೀ ಹೆಚ್ಚು ಸಿನಿಮಾಗಳನ್ನು ಮಾಡಿರೋ ಪ್ರೇಮ್ ನಜೀರ್ ಅವರ ಫೋಟೋ ಹಾಕಿದ್ದರು ಅಷ್ಟೇ. ಕನ್ನಡದ ಕಂಠೀರವ ಡಾ. ರಾಜ್ಕುಮಾರ್, ವಿಷ್ಣು ವರ್ಧನ್ ಅವರ ಫೋಟೋ ಆಗಲಿ.. ನಾವು ದೇವರ ಸ್ವರೂಪ ಎಂದೇ ತಿಳಿದಿರೋ ಎನ್ಟಿರ್, ನಾಗೇಶ್ವರ್ ರಾವ್ ರಂತಹ ಮಹಾನ್ ನಟರ ಫೋಟೋ ಕೂಡ ಹಾಕಿರಲಿಲ್ಲ. ಈ ಸಾಲಿನಲ್ಲಿ ಶಿವಾಜಿ ಗಣೇಶನ್ ಅವರ ಫೋಟೋ ಕೂಡ ಹಾಕಿರಲಿಲ್ಲ. ಇದನ್ನು ನೋಡಿ ನನಗೆ ತುಂಬಾ ದುಃಖ, ಅವಮಾನ ಆಯ್ತು..
ಇದನ್ನೂ ಓದಿ: ವೇದಿಕೆ ಮೇಲೆಯೇ ಪೂಜಾ ಹೆಗ್ಡೆ ಜೊತೆ ಮೆಗಾಸ್ಟಾರ್ ರೊಮ್ಯಾನ್ಸ್.. ಎಲ್ಲರನ್ನು ನಗಿಸಿದ ನಟ ಚಿರಂಜೀವಿ
ಭಾರತೀಯ ಸಿನಿಮಾಗಳು ಎಂದು ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ಮಾಡಿದೆ..
ನಾನು ಅಲ್ಲಿಂದ ಚೆನ್ನೈಗೆ ಬಂದ ಕೂಡಲೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದೆ. ಇಂಡಿಯನ್ ಸಿನಿಮಾ ಎಂದರೇ ಹಿಂದಿ ಸಿನಿಮಾ ಅಷ್ಟೇ ಅಂತ ಅವರು ಪ್ರೊಜೆಕ್ಟ್ ಮಾಡಿದ್ದರು. ದಕ್ಷಿಣ ಭಾರತದ ಸಿನಿಮಾಗಳನ್ನು ಪ್ರಾಂತೀಯ ಸಿನಿಮಾಗಳು ಅಂತ ಮೀಸಲು ಮಾಡಿ ನೀಡಬೇಕಾದ ಗೌರವವನ್ನು ನೀಡಿರಲಿಲ್ಲ. ಆದರೆ ನನ್ನ ಪತ್ರಿಕಾಗೋಷ್ಠಿ ಯಾರು ಉತ್ತರ ನೀಡಲಿಲ್ಲ. ಆದರೆ ಈಗ ನನಗೆ ಹೆಮ್ಮೆ ಪಟ್ಟು, ಎದೆ ಉಬ್ಬಿಸಿ ನಡೆಯುವಂತೆ, ದಕ್ಷಿಣ ಭಾರತದ ಸಿನಿಮಾಗಳು ಎಂದರೇ ಪ್ರಾಂತೀಯ ಸಿನಿಮಾಗಳು ಮಾತ್ರ ಅಲ್ಲ.. ಅವು ಭಾರತದ ಸಿನಿಮಾಗಳು ಎಂದು ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ಬಾಹುಬಲಿ, ಬಾಹುಬಲಿ, ಆರ್ಆರ್ಆರ್ ಸಿನಿಮಾಗಲು ಮಾಡಿದ್ದವು. ಇಂತಹ ಸಿನಿಮಾಗಳನ್ನು ಕೊಟ್ಟಂತಹ ನಿರ್ದೇಶಕ ಎಸ್ಎಸ್ ರಾಜಮೌಳಿ, ಅವರು ತೆಲುಗಿನವರು ಎಂಬುವುದು ನಮ್ಮ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಚಿರಂಜೀವಿ ಧನ್ಯವಾದ ಸಲ್ಲಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post