ವೀಕ್ಷಕರು ಧಾರಾವಾಹಿಗಳನ್ನು ಇಷ್ಟಪಟ್ಟು ನೋಡೋದು ಸಹಜ. ಆದ್ರೆ ಆ ಧಾರಾವಾಹಿಯನ್ನ ಅವರ ಜೀವನದ ಭಾಗವಾಗಿ ಮಾಡಿಕೊಳ್ತಾರೆ ಅಂದ್ರೆ ಅದು ಪ್ರಶಂಸನೀಯ. ಅಂತದ್ದೆ ಒಂದು ಧಾರಾವಾಹಿ ಗಟ್ಟಿಮೇಳ. ರೌಡಿ ಬೇಬಿಯನ್ನ ಅಪ್ಪಿ ಮುದ್ದಾಡಿದ್ದಾರೆ. ಸುಳ್ಳೆ ಪುಳ್ಳೆ ವೇದ್ ಸ್ವಾಗ್ಗೆ ಫಿದಾ ಆಗೋಗಿದ್ದಾರೆ. ಒಟ್ಟಿನಲ್ಲಿ ಧಾರಾವಾಹಿಗೆ ಸಖತ್ ಫ್ಯಾನ್ ಬೇಸ್ ಇರೋದಂತೂ ಸತ್ಯ. ವೀಕ್ಷಕರು ಮೆಚ್ಚಿ ಕೊಂಡಿರೋದ್ರಿಂದ ನೆನ್ನೆಗೆ ಗಟ್ಟಿಮೇಳ 800ರ ಎಪಿಸೋಡ್ ಗಡಿ ದಾಟಿದೆ.
ಒಂದು ಧಾರಾವಾಹಿ 200 ಎಪಿಸೋಡ್ ದಾಟೋದು ಈಗಿನ ಕಷ್ಟಕರ ಸಂಗತಿ. ಅಂತದ್ರಲ್ಲಿ ಬರೋಬ್ಬರಿ 800ರ ಎಪಿಸೋಡ್ ದಾಟಿ ಟಾಪ್ 5ರಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡು ವೇಗವಾಗಿ ಮುನ್ನುಗ್ಗುತ್ತಿದೆ. ಕತೆಯನ್ನು ಎಲ್ಲೂ ಬೋರ್ ಹೊಡೆಸದೆ, ಕತೆಯಲ್ಲಿ ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಜನರ ಮನ ಗೆಲ್ತಿರೋ ಗಟ್ಟಿಮೇಳ ಯಾವ ಅಂತದಲ್ಲೂ ಸೋತಿಲ್ಲ.. ತನ್ನ ಅಭಿಮಾನಿ ಬಳಗವನ್ನು ಹಾಗೆಯೇ ಉಳಿಸಿಕೊಂಡು ಮುಂದುವರೆಯುತ್ತಿದೆ. ವೇದ್ ಅಮೂಲ್ಯರ ಕಾಂಬಿನೇಷನ್ ಜನ ಇಷ್ಟ ಪಟ್ಟು ನೋಡುತ್ತಿದ್ದು, ಎಲ್ಲರಿಗೂ ಖುಷಿ ತಂದಿದೆ.
800ರ ಗಡಿ ದಾಟ್ಟಿದ್ದು ನೋಡಿ.. ಧಾರಾವಾಹಿಯ ತಂಡದವರಿಗೂ ಮುನ್ನುಗಿ ಕೆಲಸ ಮಾಡಲು ಹೊಸ ಚೇತನ ಬಂದಂತಾಗಿದೆ. ಒಟ್ಟಿನಲ್ಲಿ 800 ಎಪಿಸೋಡ್ ಮುಗಿಸಿರೋ ಖುಷಿಯಲ್ಲಿ ಗಟ್ಟಿಮೇಳ ತಂಡದವ್ರು ಇದ್ದಾರೆ.. ಹೀಗೆ ಗಟ್ಟಿಮೇಳದ ಆರ್ಭಟ ಮುಂದುವರೆಯಲಿ ಎಂದು ನಾವ್ ಕೂಡ ಆಶಿಸ್ತೀವಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post