ಕುಣಿಯೋರಿಗೆ ಸಜ್ಜಾಯ್ತು ಈ ಡ್ಯಾನ್ಸ್ ವೇದಿಕೆ. ಎರಡು ವಾರ ಭರ್ಜರಿ ಮೆಗಾ ಆಡಿಷನ್ ಮಾಡಿ ಕಡಕ್ ಕಂಟೆಸ್ಟೆಟ್ಸ್ಗಳನ್ನು ಬರಮಾಡಿಕೊಂಡ್ರು ಜಡ್ಜಸ್ಗಳು. ಇನ್ಮೇಲಿಂದ ಶುರುವಾಗಲಿದೆ ಶೋನಾ ಅಸಲಿ ಆಟ. ಮೊದಲೆರೆಡು ವಾರ ನೆಡೆದ ಮೆಗಾ ಆಡಿಷನ್ ಬರೀ ಟ್ರೈಲರ್ ಅಷ್ಟೆ.. ಇನ್ಮುಂದೆ ಡ್ಯಾನ್ಸ್ ವೇದಿಕೆಯಲ್ಲಿ ಕಾಣಸಿಗೋದು ಸಿನಿಮಾ ಲೆವೆಲ್ ಪರ್ಫಾಮೆನ್ಸ್ಗಳು ಅಷ್ಟೆ.. ಡ್ಯಾನ್ಸ್ ಅಂದ್ರೆ ಹುಚ್ಚು ಅನ್ನುವಷ್ಟು ಇಷ್ಟ ಪಡೋ ಡ್ಯಾನ್ಸರ್ಗಳು ತಮ್ಮ ಕನಸುಗಳನ್ನು ಈಡೇರಿಸಲುಕೊಳ್ಳಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದಾರೆ.
ಇನ್ಮುಂದೆ ನಿಜಾವಾದ ಬೆಂಕಿ ಆಟ ಶುರುವಾಲಿದೆ ಗಟಾನುಗಟಿ ಕಂಟೆಸ್ಟೆಟ್ಸ್ಗಳ ಮಧ್ಯೆ ವಾರ್ ನೆಡೆಯೋದು ಪಕ್ಕಾ. ಬಂದಿರೋ ಎಲ್ಲಾ ಕಂಟೆಸ್ಟೆಟ್ಸ್ಗಳನ್ನು 14 ಜೋಡಿಯನ್ನಾಗಿ ಮಾಡಿ. ಸೂಪರ್ ಇಟ್ರಡಕ್ಷನ್ ರೌಂಡ್ನೊಂದಿಗೆ ಶುರುವಾಗಲಿದೆ ಜಬರ್ದಸ್ತ್ ಡ್ಯಾನ್ಸ್ ಶೋ. ಇನ್ನೂ ಏನೆ ಇದ್ರು, ನೆಕ್ಸ್ಟ್ ಲೆವಲ್ ಪರ್ಫಾಮೆನ್ಸ್ ಮಾಡಿ ಗೋಲ್ಡನ್ ಬಜರ್ ಗಿಟ್ಟಿಸಿಕೊಳ್ಳೊದಷ್ಟೆ ಬಾಕಿ. ಡಬಲ್ ಜೋಶ್ನೊಂದಿಗೆ ಬರಲಿದ್ದಾರೆ ಡ್ಯಾನ್ಸ್ ಕಂಟೆಸ್ಟೆಂಟ್ಸ್ಗಳು.
ವೀಕ್ಷಕರು ಕೂಡ ಹೈವೋಲ್ಟೇಜ್ ಪರ್ಫಾಮೆನ್ಸ್ಗಳನ್ನು ನೋಡಲು ಎಲ್ಲ ರೀತಿಯ ಕಾತುರತೆಯಿಂದ ಕಾಯ್ತಿದ್ದಾರೆ.. ಮುಂದಿನ ವಾರದಿಂದ ವಾರ್ ಶುರುವಾಗ್ತಿರೋದಂತೂ ಪಕ್ಕಾ.. ಒಟ್ಟಿನಲ್ಲಿ ಎಲ್ಲಾ ಕಂಟೆಸ್ಟೆಟ್ಸ್ಗಳು ತಮ್ಮದೆ ಆದ ಸ್ಟ್ಯಾರ್ಟಜಿ ಮಾಡ್ಕೊಂಡು ಫುಲ್ ಫೈಟ್ ಕೊಡೋಕೆ ಬಿಂದಾಸ್ ಆಗಿ ರೆಡಿಯಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post