ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮ ಬಗೆದಷ್ಟು ಆಳವಾಗ್ತಿದೆ. ತನಿಖೆಗೆ ವೇಗ ನೀಡಿರೋ ಸಿಐಡಿ ಆರೋಪಿಗಳ ಬೇಟೆ ಮುಂದುವರೆಸಿದೆ. ಈ ಬೆನ್ನಲ್ಲೇ, ಪಿಎಸ್ಐ ಅಭ್ಯರ್ಥಿಗಳ ವಿಚಾರಣೆ ಮುಂದುವರೆದಿದ್ದು, ಕೋಳ ತೊಡಿಸೋಕೆ ರೆಡಿಯಾಗ್ತಿದ್ದವರ ಕೈಗೇ ಇವತ್ತು ಸಿಐಡಿ ಅಧಿಕಾರಿಗಳು ಕೋಳ ತೊಡಿಸಿಬಿಟ್ಟಿದ್ದಾರೆ.
400 ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ
100ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಚಾರಣೆಗೆ ಗೈರು
ಪಿಎಸ್ಐ ಹಗರಣದ ಬೆನ್ನತ್ತಿರೋ ಪೊಲೀಸರು 545 ಅಭ್ಯರ್ಥಿಗಳಿಗೂ ವಿಚಾರಣೆಗೆ ನೋಟಿಸ್ ನೀಡಿದ್ರು. ಈವರೆಗೂ 400 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗಿದ್ದು, 100ಕ್ಕೂ ಹೆಚ್ಚು ಜನ ಗೈರಾಗಿದ್ದಾರೆ. ಕಾರ್ಬನ್ ಶೀಟ್ ಮಿಸ್ಸಾಗಿದೆ, ಆರೋಗ್ಯ ಸರಿಯಿಲ್ಲ ಅನ್ನೋ ನಾನಾ ಕಾರಣ ನೀಡಿ ವಿಚಾರಣೆಗೆ ಹಾಜರಾಗಿಲ್ಲ.
27 ಅಭ್ಯರ್ಥಿಗಳ ಕಾರ್ಬನ್ ಶೀಟ್ನಲ್ಲಿ ವ್ಯತ್ಯಾಸ
ಬೆಂಗಳೂರಿನ 12 ಮಂದಿ ಅಭ್ಯರ್ಥಿಗಳು ಅರೆಸ್ಟ್
ವಿಚಾರಣೆಗೊಳಪಟ್ಟಿರೋ 400 ಅಭ್ಯರ್ಥಿಗಳ ಪೈಕಿ 27 ಜನರ ಕಾರ್ಬನ್ ಶೀಟ್ನಲ್ಲಿ ವ್ಯತಾಸ್ಯ ಕಂಡು ಬಂದಿದ್ದು, ಸಿಐಡಿ 27 ಜನರ ಲಿಸ್ಟ್ ರೆಡಿ ಮಾಡಿದೆ. ಸದ್ಯ ಬೆಂಗಳೂರಿನ 12 ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, 10 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.
ಪಿಎಸ್ಐ ಅಭ್ಯರ್ಥಿಗಳಿಗೆ ಕೋಳ
400 ಅಭ್ಯರ್ಥಿಗಳ ವಿಚಾರಣೆ ವೇಳೆ 27 ಅಭ್ಯರ್ಥಿಗಳ OMR ಪ್ರತಿಗೂ ಮತ್ತು ಕಾರ್ಬನ್ ಶೀಟ್ಗೂ ವ್ಯತ್ಯಾಸ ಕಂಡು ಬಂದಿದೆ. ವ್ಯತ್ಯಾಸ ಕಂಡು ಬಂದಿರೋ OMR ಶೀಟ್, ಕಾರ್ಬನ್ ಶೀಟ್ಗಳನ್ನ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ. ಬೆಂಗಳೂರಿನ FSL ಕೇಂದ್ರಕ್ಕೆ ಸಂಶಯಾಸ್ಪದ ಪ್ರತಿಗಳನ್ನ ರವಾನಿಸಲಾಗಿದೆ. 27 ಅಭ್ಯರ್ಥಿಗಳ ಪೈಕಿ 22 ಮಂದಿ ಬೆಂಗಳೂರಿನವರು 5 ಮಂದಿ ಕಲಬುರ್ಗಿಯವರು. 22 ಅಭ್ಯರ್ಥಿಗಳು ಬೆಂಗಳೂರಿನ 7 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ರೆ, ಕಲಬುರ್ಗಿಯ ಒಂದೇ ಕೇಂದ್ರದಲ್ಲಿ 5 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ರು. ಇನ್ನೂ 27 ಅಭ್ಯರ್ಥಿಗಳ ಪೈಕಿ ಬೆಂಗಳೂರಿನ 12 ಅಭ್ಯರ್ಥಿಗಳನ್ನ ಅರೆಸ್ಟ್ ಮಾಡಲಾಗಿದೆ. ಹೈಗ್ರೌಂಡ್ಸ್ ಪೊಲೀಸರು 12 ಪಿಎಸ್ಐ ಅಭ್ಯರ್ಥಿಗಳನ್ನ ಬಂಧಿಸಿದ್ದಾರೆ. ಮೊದಲ ಹಂತದಲ್ಲಿ ಸಿಐಡಿ ಅಧಿಕಾರಿಗಳು 27 ಅಭ್ಯರ್ಥಿಗಳಿಗೆ ಬಲೆ ಬೀಸಿದ್ದಾರೆ.
ಪಿಎಸ್ಐ ಆಗಲು ಕಳ್ಳಾಟವಾಡಿದವರು ಸಿಐಡಿ ಬೀಸಿರೋ ಬಲೆಯಲ್ಲಿ ಬಂಧಿಯಾಗ್ತಿದ್ದಾರೆ. ಸದ್ಯ 12 ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, ಮುಂದೆ ಮತ್ತಷ್ಟು ಜನರ ಬಂಧನವಾಗೋ ಸಾಧ್ಯತೆ ಇದೆ. ಇದರ ಮಧ್ಯೆ ಪರೀಕ್ಷೆ ರದ್ದು ಮಾಡಿದ್ದಕ್ಕೆ ಆಯ್ಕೆಯಾಗಿರೋ ಉಳಿದ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸ್ತಿದ್ದಾರೆ. ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post