ಗೆಲ್ಲಲೇಬೇಕೆಂಬ ಛಲದೊಂದಿಗೆ ಅಂಗಳಕ್ಕಿಳಿದಿದ್ದ ಆರ್ಸಿಬಿ. ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಹೋರಾಟದ ಮನೋಭಾವವನ್ನೇ ತೋರದ ರಾಯಲ್ ಚಾಲೆಂಜರ್ಸ್ ಎದುರಾಳಿಗೆ ಗುಜರಾತ್ಗೆ ಸುಲಭದ ತುತ್ತಾಯ್ತು.. ಅಷ್ಟೇ ಅಲ್ಲ..! ಹ್ಯಾಟ್ರಿಕ್ ಸೋಲಿನ ಸುಳಿಗೆ ಸಿಲುಕಿದಲ್ಲದೆ, ತನ್ನ ಪ್ಲೇ-ಆಫ್ಗೆ ಹಾದಿಯನ್ನ ಮತ್ತಷ್ಟು ಜಟಿಲವಾಗಿಸಿಕೊಂಡಿದೆ.
ಮತ್ತೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಗುಜರಾತ್ ಟೈಟನ್ಸ್ನ ಆಲ್ರೌಂಡರ್ ಆಟಕ್ಕೆ ಪ್ರತಿರೋದ ತೋರದ ರಾಯಲ್ ಚಾಲೆಂಜರ್ಸ್, 6 ವಿಕೆಟ್‌ಗಳ ಮುಖಭಂಗ ಅನುಭವಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡ ರಾಯಲ್ ಚಾಲೆಂಜರ್ಸ್, ಈಗ ಪ್ಲೇ-ಆಫ್ ರೇಸ್ನಿಂದ ಹೊರ ಬೀಳೋ ಆತಂಕ್ಕಕೆ ಸಿಲುಕಿದೆ.
ಟಾಸ್ ಗೆದ್ದು ಅಚ್ಚರಿ ನಿರ್ಧಾರ ಕೈಗೊಂಡ ಕ್ಯಾಪ್ಟನ್ ಫಾಫ್..!
ಗುಜರಾತ್ ವಿರುದ್ಧದ ಕ್ಯಾಪ್ಟನ್ ಫಾಫ್, ಕೈಗೊಂಡ ಮೊದಲ ನಿರ್ಧಾರವೇ ಅಚ್ಚರಿಗೆ ಕಾರಣವಾಗಿತ್ತು. ಅದರಲ್ಲೂ ಬ್ಯಾಟಿಂಗ್ಗೆ ಉತ್ತಮವಾಗಿದ್ದ ಪಿಚ್ನಲ್ಲಿ ಟಾಸ್ ಗೆದ್ದ ಆರ್ಸಿಬಿ, ಮೊದಲು ಬ್ಯಾಟಿಂಗ್ ಆಡಲು ನಿರ್ಧರಿಸಿತ್ತು. ಆರಂಭದಲ್ಲಿ ಫಾಫ್ ನಿರ್ಧಾರ ಸರಿ ಎಂಬಂತೆ ಕಂಡರು. ಟಿ20 ಎಂಬ ಚೇಸಿಂಗ್ ಗೇಮ್ನಲ್ಲಿ ಫಾಫ್ ಡುಪ್ಲೆಸಿ ನಿರ್ಧಾರ ಉಲ್ಟಾ ಆಯ್ತು.
ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದ ಕೊಹ್ಲಿ..!
ಪ್ರಸಕ್ತ ಆವೃತ್ತಿಯಲ್ಲಿ ಸತತ ವೈಫಲ್ಯ ಕಂಡಿದ್ದ ಕೊಹ್ಲಿ, ಅಂತೂ ಗುಜರಾತ್ ವಿರುದ್ಧದ ಅರ್ಧಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಫಾಫ್ ಡುಪ್ಲಿಸಿ ವಿಕೆಟ್ ಪತನದ ಬಳಿಕ ಇನ್ನಿಂಗ್ಸ್ ಕಟ್ಟುವ ಹೊಣೆ ಹೊತ್ತ ಕೊಹ್ಲಿ, ಎಚ್ಚರಿಕೆಯ ಆಟವನ್ನಾಡಿದರು. ಅದರಲ್ಲೂ 45 ರನ್ಗಳಿಸಿದ್ದಾಗ ಸಿಕ್ಕ ಜೀವದಾನದಿಂದಾಗಿ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದರು.
ಆದ್ರೆ, ಜೀವದಾನದ ಸಂಪೂರ್ಣ ಲಾಭ ಪಡೆಯುವಲ್ಲಿ ವಿಫಲರಾದ ವಿರಾಟ್, 53 ಎಸೆತಗಳಲ್ಲಿ 58 ರನ್ ಗಳಿಸಿದ್ದಾಗ ಶಮಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ರಜತ್ ಪಾಟಿದರ್ ಫಿಫ್ಟಿ.. ಮಹಿಪಾಲ್ ಲೊಮ್ರಾರ್ ಮಿಂಚು..!
ನಿನ್ನೆಯ ಪಂದ್ಯದಲ್ಲಿ ವಿರಾಟ್ ಜೊತೆ ಅದ್ಬುತ ಇನ್ನಿಂಗ್ಸ್ ಕಟ್ಟಿದ್ದು ರಜತ್ ಪಾಟಿದರ್… ಕೊಹ್ಲಿ ಜೊತೆ 2ನೇ ವಿಕೆಟ್ 99 ರನ್ಗಳ ಜೊತೆಯಾಟವಾಡಿದ ಪಾಟಿದರ್, 32 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಒಳಗೊಂಡ ಸ್ಪೋಟಕ ಅರ್ಧಶತಕ ಸಿಡಿಸಿ ನೆರವಾದರು.
ನಂತರ 18 ಎಸೆತಗಳಲ್ಲಿ ಮ್ಯಾಕ್ಸ್ವೆಲ್, 3 ಬೌಂಡರಿ, 2 ಸಿಕ್ಸರ್ ಒಳಗೊಂಡ 33 ರನ್ ಚಚ್ಚಿದರೆ, ದಿನೇಶ್ ಕಾರ್ತಿಕ್ 2 ರನ್ಗಳಿಗೆ ತಮ್ಮ ಆಟ ಮುಗಿಸಿದರು. ಈ ಇದಾದ ಬಳಿಕ ಅಬ್ಬರಿಸಿದ ಮಹಿಪಾಲ್ ಲೋಮ್ರಾರ್, 8 ಎಸೆತಗಳಲ್ಲಿ 16 ರನ್ ಸಿಡಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಆ ಮೂಲಕ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು.
After yet another thrilling win involving a tight chase, @gujarat_titans' Wriddhiman Saha and Pradeep Sangwan pose for the #IPLselfie 🤳 #TATAIPL | #GTvRCB pic.twitter.com/dyQWJPRRMs
— IndianPremierLeague (@IPL) April 30, 2022
4 ವರ್ಷಗಳ ಬಳಿಕ ಪ್ರದೀಪ್ ಸಂಗ್ವಾನ್ ಗ್ರೇಟ್ ಕಮ್ಬ್ಯಾಕ್..!
2008ರ ಚೊಚ್ಚಲ ಸೀಸನ್ನಿಂದ ಕೇವಲ 8 ಸೀಸನ್ಗಳಲ್ಲಿ ಆಡಿದ್ದ ಪ್ರದೀಪ್, 2018ರ ಸೀಸನ್ನಲ್ಲಿ ಒಂದೇ ಒಂದು ಪಂದ್ಯವನ್ನಾಡಿದ್ದೇ ಕೊನೆಯ ಪಂದ್ಯವಾಗಿತ್ತು. ಆದ್ರೆ, ಇವತ್ತು ಅಚ್ಚರಿ ಎಂಬಂತೆ ಯಶ್ ದಯಾಳ್ ಸ್ಥಾನದಲ್ಲಿ ಆಡೋ ಅವಕಾಶ ಪಡೆದ ಸಂಗ್ವಾನ್, 4 ವರ್ಷಗಳ ಬಳಿಕ ಐಪಿಎಲ್ಗೆ ಗ್ರೇಟ್ಕಮ್ಬ್ಯಾಕ್ ಮಾಡಿದರು.. ಅದರಲ್ಲೂ 4 ಓವರ್ ಬೌಲಿಂಗ್ ಮಾಡಿದ ಪ್ರದೀಪ್ ಸಂಗ್ವಾನ್, 4.80 ಎಕಾನಮಿಯಲ್ಲಿ 19 ರನ್ ನೀಡಿ ಪ್ರಮುಖ 2 ವಿಕೆಟ್ ಉರುಳಿಸಿದ್ದು ವಿಶೇಷ.
ಸವಾಲಿನ ಮೊತ್ತ ಬೆನ್ನತ್ತಿದ್ದ ಗುಜರಾತ್ಗೆ ಸ್ಪಿನ್ನರ್ಗಳ ಶಾಕ್..!
171 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ಗೆ ಆರಂಭಿಕರಾದ ಸಾಹ, ಶುಭ್ಮನ್ ಗಿಲ್ 51 ರನ್ಗಳ ಭದ್ರ ಬುನಾದಿ ಹಾಕಿಕೊಟ್ಟರು. ಆದ್ರೆ, ಈ ವೇಳೆ ದಾಳಿಗಿಳಿದ ಆರ್ಸಿಬಿ ಸ್ಪಿನ್ನರ್ಗಳಾದ ಶಹಬಾಜ್ ಅಹ್ಮದ್ ಆ್ಯಂಡ್ ವನಿಂದು ಹಸರಂಗ ಗುಜರಾತ್ಗೆ ಶಾಕ್ ನೀಡಿದರು. ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಸಾಯಿ ಪ್ರಭುದೇಸಾಯಿಯನ್ನ ಪೆವಿಲಿಯನ್ ಕಳುಹಿಸುವಲ್ಲಿ ಯಶಸ್ವಿಯಾದರು.
ಮಿಲ್ಲರ್-ತೆವಾಟಿಯಾ ಕಮಾಲ್.. ಆರ್ಸಿಬಿಗೆ ಹ್ಯಾಟ್ರಿಕ್ ಸೋಲು..!
12.5 ಓವರ್ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ಗೆ ಮತ್ತೆ ಮಿಲ್ಲರ್ ಹಾಗೂ ತೆವಾಟಿಯಾ ಆಸರೆಯಾದರು. ಮುರಿಯದ 5ನೇ ವಿಕೆಟ್ಗೆ 79 ರನ್ಗಳ ಜೊತೆಯಾಟವಾಡಿದ ಈ ಜೋಡಿ, ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಡೇವಿಡ್ ಮಿಲ್ಲರ್ 24 ಬಾಲ್ಗಳಲ್ಲಿ 34 ರನ್ಗಳಿಸಿದರೆ, ತೆವಾಟಿಯಾ, 25 ಬಾಲ್ಗಳಲ್ಲಿ 43ರನ್ಗಳಿಸಿದರು. ಇದರೊಂದಿಗೆ ಮೂರು ಎಸೆತ ಬಾಕಿ ಇರುವಾಗಲೇ, ಗುಜರಾತ್ ಟೈಟನ್ಸ್ ವಿಜಯಪತಾಕೆ ಹಾರಿಸಿದ್ರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿತು.
ಪ್ಲೇ-ಆಫ್ಗೆ ಗುಜರಾತ್ ಟೈಟನ್ಸ್ ಎಂಟ್ರಿ.. ಸಂಕಷ್ಟದಲ್ಲಿ ಆರ್ಸಿಬಿ..!
ಆರ್ಸಿಬಿ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದ ಗುಜರಾತ್, ಪ್ಲೇ-ಆಫ್ಗೆ ಎಂಟ್ರಿಕೊಟ್ಟಿದೆ. ಇದುವರೆಗೆ 9 ಪಂದ್ಯಗಳನ್ನಾಡಿರುವ ಗುಜರಾತ್, 8 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಪ್ಲೇ-ಆಫ್ಗೆ ಎಂಟ್ರಿಕೊಟ್ಟ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು.
ಅಷ್ಟೇ ಅಲ್ಲ..! ಮೆಗಾ ಹರಾಜಿನ ವೇಳೆ ಗುಜರಾತ್ ಟೈಟನ್ಸ್ ಪ್ಲೇ-ಆಫ್ ಹತ್ತಿರಕ್ಕೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದವರಿಗೆ ಉತ್ತರ ನೀಡಿದ್ದಾರೆ. ಆದ್ರೆ, ಗುಜರಾತ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತನ್ನ ಪ್ಲೇ-ಆಫ್ ಹಾದಿಯನ್ನ ಮತ್ತಷ್ಟು ಜಟಿಲವಾಗಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post