ಸಾಮಾಜಿಕ ಜಾಲತಾಣ ಟ್ವಿಟರ್ ಖರೀದಿ ಮಾಡಿರೋ ಉದ್ಯಮಿ ಎಲಾನ್ ಮಾಸ್ಕ್ ಹಲವು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಟ್ವಿಟರ್ ಬಳಕೆ ಮಾಡುವ ಗ್ರಾಹಕರಿಗೆ ಚಾರ್ಜ್ ಮಾಡಲಾಗುತ್ತಾ..? ಎಂಬ ಪ್ರಶ್ನೆಗೆ ಅವರಿಂದ ಹೌದು ಎಂಬ ಉತ್ತರ ಲಭ್ಯವಾಗಿದೆ. ಆದರೆ ಎಲ್ಲರಿಂದಲೂ ಹಣ ಪಡೆಯುವುದಿಲ್ಲ ಅಂತ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಬಳಕೆದಾರರಿಂದ ಯಾವುದೇ ರೀತಿಯ ಶುಲ್ಕವನ್ನು ವಸೂಲಿ ಮಾಡೋದಿಲ್ಲ ಎಂದು ಬುಧವಾರ ಟ್ವಿಟರ್ನಲ್ಲಿ ಎಲಾನ್ ಮಸ್ಕ್ ಮಾಹಿತಿ ನೀಡಿದ್ದಾರೆ. ಸರ್ಕಾರಿ ಬಳಕೆದಾರರಿಗೆ ಮಾತ್ರ ಅಲ್ಪ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದು ಎಂದಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಸ್ತುತ ಟ್ವಿಟರ್ ಮಾಲೀಕರು ನಿರಾಕರಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಟ್ವಿಟರ್ನಲ್ಲಿ ಬದಲಾವಣೆಗಳನ್ನು ತರಬೇಕಿದೆ ಎಂದು ಪದೇ ಪದೆ ಎಲಾನ್ ಮಾಸ್ಕ್ ಪ್ರಸ್ತಾಪ ಮಾಡುತ್ತಿದ್ದಾರೆ. ಹೊಸ ಫಿಚರ್ಗಳೊಂದಿಗೆ, ಅಲ್ಗಾರಿದಮ್ ಅನ್ನು ಮುಕ್ತವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ಬ್ಲೂ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ನಿಯಮಗಳಲ್ಲೂ ಬದಲಾವಣೆ ಮಾಡಬೇಕಿದೆ ಎಂದು ಹೇಳಿದ್ದರು.
ಇತ್ತ ಸೋಮವಾರ ನ್ಯೂಯಾರ್ಕ್ನಲ್ಲಿ ನಡೆದ ಮೆಟ್ಗಾಲಾದಲ್ಲಿ ತಮ್ಮ ತಾಯಿಯೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಟ್ವಿಟರ್ ಖರೀದಿ ಒಪ್ಪಂದ ಖಚಿತವಾದ ಬಳಿಕ ಮೊದಲ ಬಾರಿಗೆ ಎಲಾನ್ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಟ್ವಿಟರ್ ಮೇಲೆ ತಮ್ಮ ಮುಂದಿನ ಯೋಜನೆಗಳನ್ನು ವಿವರಿಸಿದ್ದರು. ಅಲ್ಲದೇ ತಾವು ವಿಮರ್ಶೆಗಳಿಂದ ದೂರ ಅಲ್ಲ. ಮಾಧ್ಯಮಗಳಲ್ಲಿ ಹಾಗೂ ಇಂಟರ್ನೆಟ್ನಲ್ಲಿ ತಮ್ಮದ ಮೇಲೆ ಕೇಳಿ ಬರುತ್ತಿರುವ ವಿಮರ್ಶೆಗಳನ್ನು ಗಮನಿಸಿದ್ದೇನೆ. ಕೆಲವು ಬಾರಿ ಇಂತಹ ವಿಮರ್ಶೆಗಳು ದುಃಖವನ್ನು ತರಿಸುತ್ತವೆ. ನನಗೂ ಭಾವನೆಗಳು ಇರುತ್ತದೆ. ನಾನೇನು ಆಂಡ್ರಾಯ್ಡ್ ಅಲ್ಲ. ಆದರೆ ಅಂತಹ ಭಾವನೆಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ನಾನು ಮಾಡೋ ಕೆಲಸಗಳು ಕೆಟ್ಟದಕ್ಕೆ ಮಾತ್ರ ದಾರಿ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post