ನಕ್ಕು ನಲಿಯಲು ಸಿದ್ಧರಾಗಿ ಅಧ್ಯಕ್ಷರು ಬರ್ತಿದ್ದಾರೆ ಅವತಾರ ಪುರುಷನಾಗಿ. ಅವತಾರ ಪುರುಷ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಚಮತ್ಕಾರದ ಹಾಡುಗಳು ಘಳನೆ ನಕ್ಕು ನಲಿಸೋ ಟೀಸರ್ಗಳು ಈಗಾಗಲೇ ಇಂಪ್ರೆಸಿವ್ ಆಗಿವೆ. ಇನ್ನೇನಿದ್ರು ಸಿನಿಮಾ ನೋಡೋದೊಂದೆ ಬಾಕಿ. ಆದ್ರೆ ಈ ಸಿನಿಮಾ ಇಷ್ಟು ಅದ್ಧೂರಿಯಾಗಿ ಮೂಡಿಬರಲು ಚಿತ್ರತಂಡ ಎಷ್ಟೆಲ್ಲ ಕಷ್ಟ ಪಟ್ಟಿದೆ. ಆರ್ಟಿಸ್ಟ್ಗಳು ಒಂದೊಂದು ಶಾಟ್ಗಳಿಗೆ ಜೀವ ತುಂಬಲು ಎಷ್ಟು ಸೈಕಲ್ ಹೊಡೆದಿದ್ದಾರೆ.
ಸಿನಿಮಾದೊಳಗೆ ಒಂದು ಕಥೆ ಇದ್ದರೆ ಸಿನಿಮಾ ನಿರ್ಮಾಣದಲ್ಲಿ ನೂರಾರು ಕಥೆಗಳಿರುತ್ತವೆ. ಆ ನೂರಾರು ಕಥೆಗಳನ್ನು ಹೇಳಲಿವೆ ಈ ಮೇಕಿಂಗ್ ವಿಶ್ಯುವಲ್ಸ್. ಸಿಂಪಲ್ ಸುನಿ ನಿರ್ದೇಶನದಲ್ಲಿ ಎರಡೆರಡು ಭಾಗಗಳಾಗಿ ಮೂಡಿ ಬರುತ್ತಿದೆ ಅವತಾರ ಪುರುಷ. ಕಳೆದ ನಾಲ್ಕು ವರ್ಷದಿಂದ ಕೆಲಸ ಕಾರ್ಯಗಳಲ್ಲೇ ಬ್ಯುಸಿಯಾಗಿದ್ದ ಅವತಾರ ಪುರುಷ ಕೊರೊನಾ ಲಾಕ್ ಡೌನ್ಗಳು ಆದ ಕಾರಣ ರಿಲೀಸ್ ಆಗೋದು ತಡವಾಯ್ತು.. ತಡವಾದ್ರು ಹದಮುದವಾಗಿ ಬರ್ತಿದೆ ಅವತಾರ ಪುರುಷ.. ‘‘ಅಧ್ಯಕ್ಷ’’ ಶರಣ್ ಅವರ ಅವತಾರ ಪುರುಷ ಇಷ್ಟು ಬ್ಯುಟಿಫುಲ್ ಆಗಿ ಮೂಡಿಬರಲು ಕಾರಣ ಲೋಕೇಷನ್.
ಕೇರಳದ ಆ ಹಳೆ ಮನೆ ‘ಅವತಾರ ಪುರುಷ’ ಬಿಡಾರ..
ಕಾಡು ಮೇಡುಗಳಲ್ಲಿ ‘ಅವತಾರ ಪುರುಷ’ ಶೂಟಿಂಗ್..
ಕೇರಳದಲ್ಲಿರುವ ನೂರು ವರ್ಷ ಹಳೆದಾದಾ ಒಂದು ಸುಂದರ ಮನೆಯಲ್ಲಿ ಅವತಾರ ಪುರುಷ ಚಿತ್ರದ ಅರ್ಧಭಾಗ ಶೂಟಿಂಗ್ ಆಗಿದೆ. ಸ್ಯಾಂಡಲ್ವುಡ್ನ ಱಂಬೋ ಹೀರೋ, ಚಂದನವನದ ಅಧ್ಯಕ್ಷ ಅಂತೆಲ್ಲ ಮಲ್ಟಿಟ್ಯಾಲೆಂಟೆಡ್ ಶರಣ್ ಅವರನ್ನ ಕನ್ನಡ ಚಿತ್ರ ಪ್ರೇಮಿಗಳು ಕರಿಯೊದುಂಟು. ಆದರೆ ಸಿಂಪಲ್ ಸುನಿ ನಿರ್ದೇಶನದ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘‘ಅವತಾರ ಪುರುಷ’’ ಸಿನಿಮಾ ತೆರೆಗೆ ಬಂದ ನಂತರ ಅವತಾರ ಪುರುಷ ಶರಣ್ ಅಂತ ಕರೆದ್ರು ಜನ ಮನ ಅಚ್ಚರಿ ಪಡಬೇಕಿಲ್ಲ. ಕೇರಳ ಸುತ್ತಾ ಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಸುಂದರ ಜಲಪಾತಗಳು ಇರೋ ಜಾಗದಲ್ಲಿ ಅವತಾರ ಪುರುಷ ಟೀಮ್ ಅನೇಕ ದಿನಗಳಲ್ಲಿ ಬೀಡು ಬಿಟ್ಟು ಶೂಟಿಂಗ್ ಮಾಡಿದೆ.
ಶರಣ್ ಅವರ ಡ್ಯಾನ್ಸ್ ಬಗ್ಗೆ ಈಗಾಗಲೇ ಎಲ್ರೂ ಮಾತನಾಡ್ತಿದ್ದಾರೆ.. ಆದ್ರೆ ಶರಣ್ ಇಷ್ಟು ಅದ್ಭುತವಾಗಿ ಡ್ಯಾನ್ಸ್ ಮಾಡಲು ಅದೆಷ್ಟು ತಾಲಿಮು ಮಾಡಿದ್ದಾರೆ ಅನ್ನೋದು ಈ ಮೇಕಿಂಗ್ನಲ್ಲಿ ಗೊತ್ತಾಗುತ್ತೆ. ಕಾಮಿಡಿ ಕಚಗುಳಿಯನ್ನ ಜೋರಾಗಿಯೇ ನೀಡಲು ಶರಣ್ ಅವರು ಬೇಜಾನ್ ಕಸರತ್ತು ಮಾಡಿದ್ದಾರೆ. ಶರಣ್ ಅವರ ಜೊತೆ ‘ಚುಟು ಚುಟು’ ಬೆಡಗಿ ಆಶಿಕಾ ರಂಗನಾಥ್ ಕಂಗೊಳಿಸಿದ್ದಾರೆ.. ಶರಣ್ ಮತ್ತು ಆಶಿಕಾ ಮುಖ್ಯ ಭೂಮಿಕೆಯ ‘ಅವತಾರ ಪುರುಷ’ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್, ಅಯ್ಯಪ್ಪ , ಸಾಧು ಕೋಕಿಲಾ ಮುಂತಾದ ಅನೇಕ ಅದ್ಭುತ ಕಲಾವಿದರ ದಂಡೇ ಇದೆ.. ಸಿಂಪಲ್ ಸುನಿ ಡೈಲಾಗ್ಸ್ಗಳು ಈ ಎಲ್ಲಾ ಕಲಾವಿದರ ಬಾಯಲ್ಲಿ ಹೊರಬಂದ್ರೆ ಕೇಳೋಕು ನೋಡೋಕು ಚೆಂದ ಚೆಂದ ಕಾಮಿಡಿ ಆನಂದ..
ಬಿಡುಗಡೆಯಾಗಿ ಸದ್ದು ಮಾಡತ್ತಿರುವ ‘‘ಹೀರೋ ಹೊಂಡ’’ ಸಾಂಗ್ನಲ್ಲಿ ಶರಣ್ ಮತ್ತು ಆಶಿಕಾ ಮನೋಜ್ಞವಾಗಿ ಡ್ಯಾನ್ಸ್ ಮಾಡಿದ್ದಾರೆ.. ‘‘ಚುಟು ಚುಟು ಅಂತೈತಿ’’ ಹಾಡಿನಂತೆ ಈ ‘‘ಹೀರೋ ಹೊಂಡ’’ ಹಾಡಿನಲ್ಲೂ ಶರಣ್ ಮತ್ತು ಆಶಿಕಾ ರಂಗನಾಥ್ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದಾರೆ.. ಈ ಒಂದು ಹಾಡಿಗೆ ಬರೋಬ್ಬರಿ ಒಂದುವಾರ ಪ್ರಾಕ್ಟಿಸ್ ಮಾಡಿರೋದನ್ನ ನೀವು ನೋಡಿ ಮೆಚ್ಚಲೇಬೇಕು.. ಅರ್ಜುನ್ ಜನ್ಯ ಮ್ಯೂಸಿಕ್ ಈ ಚಿತ್ರಕ್ಕಿದ್ದು, ಹೊರ ಬಂದಿರೋ ಹಾಡುಗಳು ಕೇಳುಗರ ಕಿವಿ ತಟ್ಟಿ ಮನ ಮುಟ್ಟಿವೆ.. ಒಂದೊಳ್ಳೆ ಎಂಟರ್ಟೈನರ್ ಸಿನಿಮಾಗೆ ಏನ್ ಏನು ಬೇಕೋ ಅದೆಲ್ಲವೂ ಅವತಾರ ಪುರುಷನಲ್ಲಿ ಅಡಗಿರೋದು ಸ್ಪಷ್ಟವಾಗಿ ಕಾಣುತ್ತಿದೆ.. ಭಾಗ ಒಂದು ಭಾಗ ಎರಡು ಎಂದುಕೊಂಡು ಸಿಕ್ವೇಲ್ ಸಿನಿಮಾಗಳು ಅಬ್ಬರಿಸುತ್ತಿರುವ ಈ ಟೈಮ್ನಲ್ಲಿ ಅವತಾರ ಪುರುಷ ಸಿನಿಮಾ ಕೂಡ ಎರಡೇರಡು ಭಾಗಗಳಲ್ಲಿ ಮೂಡಿಬರುತ್ತಿರೋದು ವಿಶೇಷ..
ವೆಬ್ ಸೀರಿಸ್ ಮಾಡಿ ನೋಡೋಣ ಅಂತ ಮುಂದಾದ ಸಿಂಪಲ್ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಫ್ಯೂಚರ್ ಸಿನಿಮಾ ಮಾಡಿರೋದು ವಿಶೇಷ.. ನಿರೀಕ್ಷೆಯ ಬೆಟ್ಟವನ್ನ ತನ್ನ ಮೇಲೆ ಎತ್ತುಕೊಂಡು ಬರುತ್ತಿರುವ ಅವತಾರ ಪುರುಷ ನಾಳೆ ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರಲಿದ್ದಾನೆ.. ನಿಮ್ಮ ಹಾರೈಕೆ ಆಶೀರ್ವಾದ ಅವತಾರ ಪುರುಷನ ಮೇಲೆ ಇರಲಿ ಚಿತ್ರಪ್ರೇಮಿಗಳೇ..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post