ಬೆಂಗಳೂರು: ಕೋರ್ಟ್ಗೆ ಹೋಗಲು ಹಣವಿಲ್ಲದ ಕಾರಣ ವಜಾಗೊಂಡಿದ್ದ ಬಿಎಂಟಿಸಿ ನೌಕರ ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರು ಜಿಲ್ಲೆ ವಿರಾಪುರ ಗ್ರಾಮದಲ್ಲಿ ನಡೆದಿದೆ.
ವಿನೋದ್ ಕುಮಾರ್ ಆತ್ಮಹತ್ಯೆಗೆ ಶರಣಾದ ಬಿಎಂಟಿಸಿ ನೌಕರ. ಬಿಎಂಟಿಸಿ ಡಿಪೋ 18ರಲ್ಲಿ ಚಾಲಕ/ನಿರ್ವಾಹಕನಾಗಿ ವಿನೋದ್ ಕೆಲಸ ಮಾಡುತ್ತಿದ್ದರು. ತಮ್ಮನ್ನ ಕೆಲಸದಿಂದ ವಜಾ ಮಾಡಿರುವ ಆದೇಶವನ್ನು ಪ್ರಶ್ನಿಸಿ ಲೇಬರ್ಕೋರ್ಟ್ನಲ್ಲಿ ಕೇಸ್ ಹಾಕಿದ್ದರು ಎನ್ನಲಾಗಿದೆ.
ಅದರಂತೆ ವಿಚಾರಣೆಗೆ ನಿನ್ನೆ ವಿನೋದ್ ಕೋರ್ಟ್ಗೆ ಬರಬೇಕಿತ್ತು. ಆದರೆ ಹಣವಿಲ್ಲದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಷ್ಕರದ ವೇಳೆ ವಜಾಗೊಂಡ ಹಲವು ಬಿಎಂಟಿಸಿ ನೌಕರರು ಆತ್ಮಹತ್ಯೆ, ಹೃದಯಾಘಾತ ಸಾವಿನ ಮನೆ ಸೇರುತ್ತಿದ್ದಾರೆ.
ಸಾರಿಗೆ ನೌಕರರನ್ನ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಇಲ್ಲ ಸಲ್ಲದ ಕಾನೂನುಗಳನ್ನ ಅಡ್ಡ ತಂದು ವಜಾಗೊಂಡಿರುವ ಸಿಬ್ಬಂದಿ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಸಾರಿಗೆ ಮುಖಂಡರು ಆರೋಪ ಮಾಡಿದ್ದಾರೆ. ನಾಲ್ಕು ನಿಗಮಗಳಿಂದ ಇಲ್ಲಿಯವರೆಗೆ ವಜಾಗೊಂಡಿದ್ದ 28ಕ್ಕೂ ಹೆಚ್ಚು ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post