ಐಪಿಎಲ್ 15ನೇ ಸೀಸನ್ನ 50ನೇ ಪಂದ್ಯದಲ್ಲಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ದೆಹಲಿ ತಂಡದ ಅನುಭವಿ ಆಟಗಾರ ಡೇವಿಡ್ ವಾರ್ನರ್, ಪ್ರಚಂಡ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರು. 58 ಎಸೆತಗಳಲ್ಲಿ 92 ರನ್‌ಗಳನ್ನ ಸಿಡಿಸಿ ಮಿಂಚಿದರು. ಈ ವೇಳೆ ಅವರ ಬ್ಯಾಟ್‌ನಿಂದ 12 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಬಂದವು.
ಪಂದ್ಯದ ವೇಳೆ ವಾರ್ನರ್ ವಿಶೇಷ ಸಾಧನೆಯನ್ನ ಮಾಡಿದರು. SRH ವಿರುದ್ಧ ಮೊದಲ ಬಾರಿಗೆ ಅರ್ಧಶತಕ ಸಿಡಿಸಿದರು. T20 ಮಾದರಿಯಲ್ಲಿ ಹೆಚ್ಚು ಅರ್ಧಶತಕಗಳಿರುವ ಕೀರ್ತಿ ಕ್ರಿಸ್ ಗೇಲ್ಗೆ ಇತ್ತು. ಆದರೆ ನಿನ್ನೆಯ ಪಂದ್ಯದಲ್ಲಿ 92 ರನ್‌ಗಳನ್ನ ಗಳಿಸಿದ ವಾರ್ನರ್ ಇದೀಗ ಮೊದಲ ಸ್ಥಾನದಲ್ಲಿದ್ದಾರೆ.
ಡೇವಿಡ್ ವಾರ್ನರ್ ಟಿ20 ಮಾದರಿಯಲ್ಲಿ ಒಟ್ಟು 89 ಅರ್ಧಶತಕಗಳನ್ನು ಗಳಿಸಿದ್ದಾರೆ. ಗೇಲ್ ಟಿ20 88 ಅರ್ಧಶತಕಗಳನ್ನು ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನಮ್ಮ ಹೆಮ್ಮೆಯ ವಿರಾಟ್ ಕೊಹ್ಲಿ ಇದ್ದಾರೆ. ಅಂದ್ಹಾಗೆ ವಿರಾಟ್ ಟಿ20ಯಲ್ಲಿ 76 ಅರ್ಧಶತಕಗಳನ್ನು ಸಿಡಿಸಿದ್ದಾರೆ.
IPLನಲ್ಲಿ ಎಷ್ಟು ಅರ್ಧ ಶತಕ
2009ರಿಂದ ಐಪಿಎಲ್ ಆಡುತ್ತಿರುವ ವಾರ್ನರ್ 158 ಪಂದ್ಯಗಳನ್ನ ಆಡಿದ್ದಾರೆ. 42.4 ರನ್ಗಳ ಸರಾಸರಿಯಲ್ಲಿ 5805 ರನ್‌ಗಳನ್ನ ಗಳಿಸಿದ್ದಾರೆ. ಐಪಿಎಲ್ನಲ್ಲಿ 4 ಶತಕ ಮತ್ತು 54 ಅರ್ಧ ಶತಕವನ್ನ ಬಾರಿಸಿದ್ದಾರೆ. T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾಕ್ಕಾಗಿ 88 ಪಂದ್ಯಗಳನ್ನು ಆಡಿದ್ದಾರೆ. 88 ಇನ್ನಿಂಗ್ಸ್‌ಗಳಲ್ಲಿ 32.7 ಸರಾಸರಿಯಲ್ಲಿ 2554 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಶತಕ ಮತ್ತು 21 ಅರ್ಧ ಶತಕಗಳನ್ನು ಹೊಡೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post