‘ಹಿಟ್ಲರ್ ಕಲ್ಯಾಣ’ ಸೀರಿಯಲ್ಗೆ ಮನಸೋಲದವರೇ ಇಲ್ಲ. ಅದ್ಭುತವಾದ ಪರ್ಫಾಮನ್ಸ್ ಮೂಲಕ ಜನರನ್ನ ರಂಜಸುತ್ತಿದ್ದಾರೆ ಕಲಾವಿದರು. ಲೀಲಾ ಮಾಡುವ ಯಡವಟ್ಟು, ಅವಳ ತಮಾಷೆ, ಹುಸಿ ಮುನಿಸಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಮಿಸ್ಟರ್ ಪರ್ಫೆಕ್ಟ್ ವರ್ಸಸ್ ಕ್ರೇಜಿ ಕ್ವೀನ್ನನ್ನ ಮೆಚ್ಚಿಕೊಂಡಿದ್ದಾರೆ.
ಲೀಲಾ ಏನೇ ಒಳ್ಳೆಯದನ್ನ ಮಾಡೋಕೆ ಹೊದರೂ ಅದು ಕೊನೆಗೆ ಅವಳಿಗೆ ಉಲ್ಟಾ ಹೊಡೆಯುತ್ತೆ. ಹಿಟ್ಲರ್ನ ಕೋಪಕ್ಕೆ ಗುರಿಯಾಗ್ತಾನೆ ಇರ್ತಾಳೆ. ಸ್ವಲ್ಪ ಇಬ್ಬರು ರೊಮ್ಯಾಂಟಿಕ್ ಆಗಿ ಇದ್ದಾರೆ ಅಂತಾ ಎಜೆ ಅಮ್ಮ ಖುಷಿ ಪಡೋ ಅಷ್ಟರಲ್ಲಿಯೇ ಹಾವು ಮುಂಗುಸಿ ಆಗಿ ಹೋಗುತ್ತಾರೆ. ಸದ್ಯ ಲೀಲಾ ಹಾಗೂ ಎಜೆ ಇಬ್ಬರ ನಡುವೆ ಒಡವೆ ವಿಚಾರಕ್ಕೆ ಮನಸ್ತಾಪ ಮೂಡಿದೆ.
ಒಡವೆಗಳನ್ನ ಕಳ್ಳತನ ಮಾಡಿಸಿದ್ದು ದುರ್ಗಾನೇ ಅಂತಾ ಪ್ರೂವ್ ಮಾಡಿದ್ದಾಳೆ ಲೀಲಾ. ಎಜೆ ಮುಂದೆ ತಲೆ ಬಾಗಿರುವ ದುರ್ಗಾ ಅಷ್ಟು ಸುಲಭವಾಗಿ ಲೀಲಾಳಿಗೆ ಸೋಲುವಳಲ್ಲ. ಆದರು ತಲೆ ಬಾಗಿದ್ದಾಳೆ ಅಂದರೆ ಅಲ್ಲಿ ಮತ್ತೊಂದು ಪ್ಲಾನ್ ರೆಡಿಯಾಗಿದೆ ಅಂತಾನೇ ಅರ್ಥ. ಲೀಲಾಳನ್ನ ಮನೆಯಿಂದ ಹೊರಗೆ ಕಳಿಸುವವರೆಗೂ ದುರ್ಗಾಗೆ ಸಮಾಧಾನ ಇಲ್ಲ. ದುರ್ಗಾಳ ಕುತಂತ್ರಕ್ಕೆ ಬಲಿಯಾಗೋ ಹುಡುಗಿ ಲೀಲಾ ಅಲ್ಲ. ಇಬ್ಬರ ನಡುವಿನ ಹಗ್ಗ ಜಗ್ಗಾಟಕ್ಕೆ ಎಜೆ ಏನು ತೀರ್ಪು ನೀಡ್ತಾರೆ ಅನ್ನೋದು ಸದ್ಯದ ಪ್ರಶ್ನೆ.
ಲೀಲಾ ಸಹಾಸ ಮಾಡಿ ಕಳ್ಳ ಸ್ವಾಮೀಜಿಯನ್ನ ಹಿಡಿದು ತರುವ ದೃಶ್ಯ ತೆರೆಮೇಲೆ ಎಷ್ಟು ಅದ್ಭುತವಾಗಿ ಮೂಡಿಬಂದಿತ್ತೋ ತೆರೆ ಹಿಂದೆ ಕೂಡ ಅಷ್ಟೇ ಚಂದವಾಗಿ ಶೂಟ್ ಮಾಡಲಾಗಿತ್ತು. ಒಟ್ಟಿನಲ್ಲಿ ಲೀಲಾ ದುರ್ಗಾಳ ಇನ್ನೊಂದು ಮುಖವನ್ನು ಎಜೆ ಎದುರು ಪ್ರೂವ್ ಮಾಡಿದ್ದಾಳೆ. ಈ ಸತ್ಯವನ್ನ ದುರ್ಗಾ ಕೂಡ ಒಪ್ಕೊಂಡಿದ್ದಾಳೆ. ಇದು ಇನ್ನಿಬ್ಬರು ಸೊಸೆಯಂದಿರಿಗೆ ಆಶ್ಚರ್ಯ ತರಿಸಿದೆ. ಆದರೆ ದುರ್ಗಾಳ ಈ ವರ್ತನೆಯ ಹಿಂದಿನ ಮರ್ಮವೇನು ಅನ್ನೋದು ವೀಕ್ಷಕರನ್ನ ಕಾಡ್ತಿದೆ. ಮತ್ತೊಂದು ಟ್ವಿಸ್ಟ್ ಮುಂದಿನ ಸಂಚಿಕೆಗಳಲ್ಲಿ ತೆರೆದುಕೊಳ್ಳಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post