ಕಲಬುರಗಿ: ಪಿಎಸ್‌ಐ ಅಕ್ರಮದ ಬಗ್ಗೆ ತನಿಖೆ ಮಾಡ್ತಿರೋ ಸಿಐಡಿ, ಹತ್ತಾರು ಕಳ್ಳಾಟ ಮಾರ್ಗಗಳನ್ನ ಬಯಲಿಗೆಳೆದಿದೆ. ಕಾಸು ಇದ್ದೋರಿಗಷ್ಟೇ ಸರ್ಕಾರಿ ಕೆಲ್ಸ ಅನ್ನೋ ಹಾಗಾಗಿದೆ. ಅಕ್ರಮದ ಮಾರ್ಗಗಳನ್ನ ಕಂಡು ಸಿಐಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ದಾರಿ ಯಾವುದಯ್ಯ ಪಿಎಸ್‌ಐ ಆಗೋದಕ್ಕೆ?
ಪಿಎಸ್‌ಐ ಪರೀಕ್ಷಾ ಅಕ್ರಮದ ಬಗ್ಗೆ ಸಿಐಡಿ ತನಿಖೆ ಮಾಡಿದಂತೆಲ್ಲಾ ಹೊಸ ಹೊಸ ಕಳ್ಳಾಟದ ಮಾರ್ಗಗಳು ಬಯಲಿಗೆ ಬರ್ತಿವೆ. ಇವರೆಗೆ ತನಿಖೆ ನಡೆಸಿರೋ ಸಿಐಡಿಗೆ ಕಂಡುಬಂದಿರೋ ಕಳ್ಳ ಮಾರ್ಗಗಳ ಡಿಟೇಲ್ಸ್ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.
ಕಳ್ಳಾಟದ ದಾರಿ
- ಬ್ಲೂಟೂತ್ ಬಳಕೆ ಮಾಡಿಕೊಂಡು ಅಕ್ರಮ
- ಎಕ್ಸಾಂ ಸೆಂಟರ್‌ನಲ್ಲಿ ಒಎಂಆರ್ ತಿದ್ದುಪಡಿ
- ನೇಮಕಾತಿ ವಿಭಾಗದಲ್ಲಿ ಒಎಂಆರ್ ತಿದ್ದುಪಡಿ
- ಸಿಟ್ಟಿಂಗ್ ವ್ಯವಸ್ಥೆ ಮಾಡಿ ಅಕ್ರಮ ಎಸಗಿ ಪರೀಕ್ಷೆ
- ಫಿಸಿಕಲ್ ವೇಳೆ ಹಣ ನೀಡಿ ಅಕ್ರಮವಾಗಿ ಪಾಸ್
- ಪ್ರಶ್ನೆಪತ್ರಿಕೆಗಳನ್ನ ಡೀಲ್ ಮಾಡಿಕೊಂಡು ಪರೀಕ್ಷೆ
- ಪರೀಕ್ಷಾ ಕೇಂದ್ರ ಬುಕ್ ಮಾಡಿಕೊಂಡು ಅಕ್ರಮ
- ಸಂಪೂರ್ಣ ಪ್ಯಾಕೇಜ್ ಡೀಲ್ ಮಾಡಲಾಗಿದೆ
ನೇಮಕಾತಿ ವಿಭಾಗಕ್ಕೂ ಅಕ್ರಮಕ್ಕೂ ಲಿಂಕ್?
ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗಕ್ಕೂ ಅಕ್ರಮಕ್ಕೂ ಲಿಂಕ್ ಇರೋ ಬಗ್ಗೆ ಸಿಐಡಿಗೆ ಸುಳಿವು ಸಿಕ್ಕಿದೆ. ಇಡೀ ನೇಮಕಾತಿ ವಿಭಾಗವನ್ನೇ ವಿಚಾರಣೆ ಮಾಡೋದಕ್ಕಾಗಿ ಸಿಐಡಿ, ಸೂಕ್ತ ಸಾಕ್ಷಾಧಾರ ಕಲೆ ಹಾಕ್ತಿದೆ.
‘ನೇಮಕಾತಿ’ ಮೇಲೆ ಶಂಕೆ
- ಪರೀಕ್ಷಾ ಕೇಂದ್ರ ಹಾಕಿಸಿಕೊಳ್ಳುವಲ್ಲೇ ಅಕ್ರಮ
- ಪ್ರಶ್ನೆಪತ್ರಿಕೆ ತಯಾರಿಕೆ ಗುಟ್ಟು ರಟ್ಟು ಮಾಡಿದ್ದಾರೆ
- ಇನ್ವಿಸಿಲೇಟರ್ ಆಗಿದ್ದ ಡಿವೈಎಸ್ಪಿಗಳ ಬುಕಿಂಗ್
- ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರ ಬುಕಿಂಗ್
- ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆಗಳು ಓಪನ್
- ಪರೀಕ್ಷಾ ಕೇಂದ್ರಗಳ ಮಾಲೀಕರ ಜೊತೆ ಸಂಪರ್ಕ
- ಬ್ಲೂಟೂತ್‌ನಲ್ಲಿ ಉತ್ತರ ನೀಡಲು ನೆರವು
- ಟಾಬ್ಲೇಷನ್ ವೇಳೆ ಅಕ್ರಮ ಎಸಗಿರೋ ಸಾಧ್ಯತೆ
- ಉತ್ತರ ತುಂಬಿ ರಿಸ್ಕ್ಯಾನ್ ಮಾಡಿರುವ ಶಂಕೆ ಇದೆ
ಹೈಗ್ರೌಂಡ್ಸ್
ಒರಿಜಿನಲ್ ಓಎಂಆರ್ ಹಾಗೂ ಕಾರ್ಬನ್ ಕಾಪಿ ಪರಿಶೀಲನೆ ವೇಳೆ 22 ಅಭ್ಯರ್ಥಿಗಳು ಕಳ್ಳಾಟ ಆಡಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ 22 ಎಫ್‌ಐಆರ್ ದಾಖಲಾಗಿದ್ದು, ಈವರೆಗೆ 13 ಅಭ್ಯರ್ಥಿಗಳನ್ನ ಬಂಧಿಸಲಾಗಿದೆ.
13 ಅಭ್ಯರ್ಥಿಗಳು ಅರೆಸ್ಟ್
- ರಘುವೀರ್ ಹೆಚ್. ಯು
- ಚೇತನ್ ಕುಮಾರ್.ಎಂ ಸಿ
- ವೆಂಕಟೇಶ್ ಗೌಡ ಸಿ
- ಮಮತೇಸ್ ಗೌಡ
- ಮಧು ಆರ್
- ದಿಲೀಪ್ ಕುಮಾರ್ ಸಿ.ಕೆ
- ಪ್ರವೀಣ್ ಕುಮಾರ್ ಹೆಚ್.ಆರ್
- ಸೂರ್ಯನಾರಾಯಣ
- ನಾಗರಾಜ ಸಿ.ಎಂ
- ಗಜೇಂದ್ರ
- ಯಶವಂತ್ ದೀಪ್
- ಮನುಕುಮಾರ್
- ರಾಘವೇಂದ್ರ ಜಿ.ಸಿ
ಇವರನ್ನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನೂ 9 ಅಭ್ಯರ್ಥಿಗಳ ಬಂಧನ ಆಗ್ಬೇಕಿದೆ. ಅದ್ರಲ್ಲಿ ಕೆಲವು ಎಸ್ಕೇಪ್ ಆಗಿರೋ ಶಂಕೆ ಇದೆ. ತಾವು ಯಾವ ಡಿರ್ಪಾಮೆಂಟ್ ಸೇರಿ, ಜನಸೇವೆ ಮಾಡುತ್ತಾ, ಜನರ ದೃಷ್ಟಿಯಲ್ಲಿ ಹೀರೋ ಆಗ್ಬೇಕಿತ್ತೋ ಈಗ ಅದೇ ಡಿರ್ಪಾಮೆಂಟ್‌ಗಳ ವಿಲನ್‌ಗಳ ಆಗಿದ್ದಾರೆ. ಕೊಳ ತೋಡಿಸಬೇಕಿದ್ದ ಕೈಗಳೇ ಈಗ ಕೊಳ ತೊಟ್ಟಿರೋದು ದುರಾದೃಷ್ಟಕರ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post