ಈತ ಡೆತ್ ಓವರ್ ಸ್ಪೆಷಲಿಸ್ಟ್. ಟೀಮ್ ಇಂಡಿಯಾ ಗೇಮ್ ಚೇಂಜರ್ ಆ್ಯಂಡ್ ಮೋಸ್ಟ್ ಡೇಂಜರಸ್ ಬೌಲರ್. ಅಂತಹ ಗ್ರೇಟ್ ಬೌಲರ್ ಈಗ ವಿಕೆಟ್ಗಾಗಿ ತೀರಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದೇ ಒಂದು ವಿಕೆಟ್ ಪಡೆಯೋದಕ್ಕೆ ಹೆಣಗಾಡ್ತಿದ್ದಾರೆ. ಇದು ಭವಿಷ್ಯಕ್ಕೂ ಕೊಳ್ಳಿ ಇಡುತ್ತಾ ಅನ್ನೋ ಅನುಮಾನ ಮೂಡಿಸಿದೆ.
ಜಸ್ಪ್ರಿತ್ ಬೂಮ್ರಾ, ಟೀಮ್ ಇಂಡಿಯಾದ ಗೇಮ್ ಚೇಂಜಿಂಗ್ ಆ್ಯಂಡ್ ಡೇಂಜರಸ್ ಬೌಲರ್. ಪವರ್ ಪ್ಲೇ, ಡೆತ್ ಓವರ್ಗಳ ಸ್ಪೆಷಲಿಸ್ಟ್ ಕೂಡ, ಬೂಮ್ರಾನೇ ಆಗಿದ್ದಾರೆ. ಒನ್ ಆಫ್ ದ ಬೆಸ್ಟ್ ಫಾಸ್ಟ್ ಬೌಲರ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಏಕೆಂದ್ರೆ ಅದನ್ನ ಅವರು ಮಾಡಿದ ರೆಕಾರ್ಡ್ಗಳೇ ಸಾರಿ ಹೇಳ್ತೀವೆ. ದೇಶ-ವಿದೇಶಗಳಲ್ಲಿ ದರ್ಬಾರ್ ನಡೆಸಿರೋ ಬೂಮ್ರಾ, ವಿಶ್ವದ ಗ್ರೇಟ್ ಬ್ಯಾಟರ್ಗಳನ್ನೇ ಬುಲೆಟ್ ವೇಗದ ಯಾರ್ಕರ್ಗಳ ಮೂಲಕ ಬೆಚ್ಚಿಬೀಳಿಸುವಂತೆ ಮಾಡಿದ್ದಾರೆ.
ಚಿಂತೆಗೀಡು ಮಾಡಿದೆ ಱರ್ಕರ್ ಸ್ಪೆಷಲಿಸ್ಟ್ ಬೂಮ್ರಾ ಫಾರ್ಮ್
ಗೇಮ್ ಚೇಂಜಿಂಗ್ ಬೌಲರ್ ಬೂಮ್ರಾ ಈಗ ಫಾರ್ಮ್ ಕಂಡುಕೊಳ್ಳಲು ಹೆಣಗಾಡ್ತಿದ್ದಾರೆ. ಬೌನ್ಸರ್, ಯಾರ್ಕರ್ಗಳನ್ನೇ ತನ್ನ ಅಸ್ತ್ರಗಳನ್ನಾಗಿಸಿಕೊಂಡು ಸಿಡಿಮದ್ದು ತುಂಬಿದ ಫಿರಂಗಿ ಗುಂಡು ಆಗಿದ್ದ ಬೂಮ್ರಾ ಪ್ರದರ್ಶನ, ಅತ್ಯಂತ ಕಳಪೆಯಾಗಿದೆ. ಯಾರ್ಕರ್ ಸ್ಪೆಷಲಿಸ್ಟ್, ಪ್ರಸ್ತುತ IPLನಲ್ಲಿ ನೀಡ್ತಿರೋ ಪ್ರದರ್ಶನ, ಬೂಮ್ರಾ ಆಟ ಇದೇನಾ ಅನ್ನೋ ಅನುಮಾನ ಮೂಡಿಸ್ತಿದೆ. ಒಂದೆಡೆ ಯುವ ಬೌಲರ್ಗಳ ಘರ್ಜನೆ ಜೋರಾಗಿದ್ರೆ ಎಕ್ಸ್ಪೀರಿಯನ್ಸ್ ಬೌಲರ್ ಬೂಮ್ರಾ ಪ್ರದರ್ಶನ ಕಳೆಗುಂದಿರೋದು ಚಿಂತೆಗೀಡು ಮಾಡಿದೆ.
ವಿಶ್ವ ಶ್ರೇಷ್ಠ ಬೌಲರ್ ಬೂಮ್ರಾಗೆ IPLನಲ್ಲಿ ಅನಾನುಭವಿ ಬ್ಯಾಟರ್ಗಳೇ ದಂಡಿಸ್ತಿದ್ದಾರೆ. ವಿಶ್ವದ ದಿಗ್ಗಜ ಬ್ಯಾಟರ್ಗಳೇ ಹೆದರ್ತಿದ್ದ ಬೌಲರ್ಗೇ, ಈಗ ಸಣ್ಣ ಬ್ಯಾಟರ್ ಕೂಡ ಹಿಗ್ಗಾಮುಗ್ಗಾ ಬಾರಿಸ್ತಿರೋದು ನಿಜಕ್ಕೂ ಶಾಕಿಂಗ್ ಅನಿಸ್ತಿದೆ. ಅದರಲ್ಲೂ ಟಿ20 ವಿಶ್ವಕಪ್ ಸಮೀಪಿಸ್ತಿರೋವಾಗ್ಲೇ, ಬೂಮ್ರಾ ಈ ರೀತಿ ಫೇಲ್ ಆಗಿರೋದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ, ತಲೆನೋವು ಮತ್ತಷ್ಟು ಹೆಚ್ಚಾಗಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಒಂದೂ ವಿಕೆಟ್ ಇಲ್ಲ
ಟೂರ್ನಿಯುದ್ದಕ್ಕೂ ತೀವ್ರ ವೈಫಲ್ಯ ಅನುಭವಿಸಿದ್ದ ಬೂಮ್ರಾ, ಗುಜರಾತ್ ವಿರುದ್ಧ ಕಂಬ್ಯಾಕ್ ಮಾಡ್ತಾರೆ ಅಂತಾನೆ ಹೇಳಲಾಗಿತ್ತು. ಮ್ಯಾನೇಜ್ಮೆಂಟ್ ಕೂಡ ಇದನ್ನೇ ಹೇಳಿತ್ತು. ಆದ್ರೆ ತನ್ನ ಮೇಲಿದ್ದ ನಿರೀಕ್ಷೆಯನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಕೆಟ್ ಪಡೆಯುವುದಿರಲಿ, ಅಟ್ಲೀಸ್ಟ್ ಚೆಂಡನ್ನ ಬೀಟ್ ಮಾಡಿಸಲು ಕೂಡ ಬೂಮ್ರಾ ಹೆಣಗಾಡಿದ್ದು ಅಚ್ಚರಿ ಮೂಡಿಸ್ತು. ಈ ಪಂದ್ಯದಲ್ಲಿ 4 ಓವರ್ಗಳಲ್ಲಿ ಎಕಾನಮಿ 12 ರಂತೆ ಬೂಮ್ರಾ ಬಿಟ್ಟುಕೊಟ್ಟಿದ್ದು ಬರೋಬ್ಬರಿ 48 ರನ್.
ಡೆತ್ ಓವರ್ಗಳಲ್ಲೂ ಬೂಮ್ರಾ ಎಫೆಕ್ಟೀವ್ ಇಲ್ಲ
ಬೂಮ್ರಾರನ್ನ ಕರೆಯೋದೇ ಡೆತ್ ಓವರ್ಗಳ ಸ್ಪೆಷಲಿಸ್ಟ್ ಎಂದು. ಆದ್ರೆ IPLನಲ್ಲಿ ಬೂಮ್ರಾ ಪರ್ಫಾಮೆನ್ಸ್ ನೋಡ್ತಿದ್ರೆ, ಡೆತ್ ಓವರ್ ಸ್ಪೆಷಲಿಸ್ಟ್ ಅಂತ ಕರೆಯೋದಕ್ಕೂ ಸಂಬಂಧವೇ ಇಲ್ಲ ಅಂತ ಅನಿಸ್ತಿದೆ. ಏಕೆಂದ್ರೆ ಅಷ್ಟು ಕೆಟ್ಟದಾಗಿದೆ ಡೆತ್ ಓವರ್ಗಳಲ್ಲಿ ಅವರ ರೆಕಾರ್ಡ್. ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಬೂಮ್ರಾ ಬೌಲಿಂಗ್ಗೆ ಬಂದ್ರೆ ಎದುರಾಳಿ ತಂಡಕ್ಕೆ ರನ್ಗಳೇ ಬರೋದಿಲ್ಲ. ಆದ್ರೆ ಐಪಿಎಲ್ನಲ್ಲಿ ಮಾತ್ರ ಸಿಕ್ಕಾಪಟ್ಟೆ ರನ್ ಬಿಟ್ಟು ಕೊಟ್ಟು ಟೀಕೆಗೆ ಒಳಗಾಗ್ತಿದ್ದಾರೆ.
ಡೆತ್ ಓವರ್ನಲ್ಲಿ ಬೂಮ್ರಾ
ಪ್ರಸ್ತುತ ಐಪಿಎಲ್ನಲ್ಲಿ ಡೆತ್ ಓವರ್ಗಳಲ್ಲಿ ಅಂದ್ರೆ ಕೊನೆಯ 4 ಓವರ್ಗಳಲ್ಲಿ ಒಟ್ಟು 62 ಎಸೆತ ಎಸೆದಿದ್ದು, 84 ರನ್ ಬಿಟ್ಟುಕೊಟ್ಟಿದ್ದಾರೆ. ಡೆತ್ ಓವರ್ಗಳಲ್ಲಿ ವಿಕೆಟ್ ಬೇಟೆ ಆಡ್ತಿದ್ದ ಬೂಮ್ರಾ ಪ್ರಸ್ತುತ IPLನಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರಷ್ಟೇ. ಇನ್ನು 8.12 ರಷ್ಟು ಎಕಾನಮಿ ಹೊಂದಿದ್ದಾರೆ.
ಈ ಐಪಿಎಲ್ ಟೂರ್ನಿಯಲ್ಲೂ ಬೂಮ್ರಾ ಫುಲ್ ಸೈಲೆಂಟ್
ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರವಲ್ಲ, ಒಟ್ಟಾರೆ ಐಪಿಎಲ್ ಟೂರ್ನಿಯಲ್ಲಿ ಫುಲ್ ಸೈಲೆಂಟ್ ಆಗಿದ್ದಾರೆ. ಟೂರ್ನಿ ಆರಂಭದಿಂದಲೇ ಇಂಪ್ಯಾಕ್ಟ್ಫುಲ್ ಪ್ರದರ್ಶನ ನೀಡದ ಬೂಮ್ರಾ, ಇದೀಗ ಲೀಗ್ ಮುಗಿಯೋ ಹಂತಕ್ಕೆ ಬಂದಿದ್ರೂ ಫಾರ್ಮ್ಗೆ ಮರಳಿಲ್ಲ. ಇದು ಮುಂಬೈ ಇಂಡಿಯನ್ಸ್ಗೆ ದೊಡ್ಡ ಹೊಡೆತ ನೀಡಿತು. ಹಾಗಾಗಿ ಮುಂಬೈ ಸತತ ಸೋಲಿಗೆ ಇದು ಒಂದು ಕಾರಣ ಎಂದು ಹೇಳಲಾಗ್ತಿದೆ.
ಪ್ರಸ್ತುತ ಐಪಿಎಲ್ನಲ್ಲಿ ಬೂಮ್ರಾ
ಪ್ರಸ್ತುತ ಐಪಿಎಲ್ನಲ್ಲಿ ಬೂಮ್ರಾ ಸಾಧನೆ ನೋಡೋದಾದ್ರೆ, 10 ಪಂದ್ಯಗಳಲ್ಲಿ 38.2 ಓವರ್ಗಳನ್ನ ಎಸೆದಿರುವ ಬೂಮ್ರಾ 7.93 ರ ಎಕಾನಮಿಯಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ.
‘ಬೂಮ್ರಾ ವಿಕೆಟ್ ಪಡೆಯದಿರೋದು ತುಂಬ ದುಃಖವಾಗ್ತಿದೆ’
ಸದ್ಯ ಬೂಮ್ರಾ ಕಳಪೆ ಫಾರ್ಮ್ಗೆ ಬಗ್ಗೆ ಮಾಜಿ ಕ್ರಿಕೆಟರ್ಗಳು ಕಳವಳ ವ್ಯಕ್ತಪಡಿಸ್ತಿದ್ದಾರೆ. ಜೊತೆಗೆ ಒಂದಷ್ಟು ಸಲಹೆಗಳನ್ನೂ ನೀಡ್ತಿದ್ದಾರೆ. ಇದೀಗ ಈ ಸರದಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸೇರಿದ್ದಾರೆ. ಬೂಮ್ರಾ ವಿಕೆಟ್ಲೆಸ್ ಆಗ್ತಿರೋದು ನೋಡಲು ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಮಾಜಿ ಕ್ರಿಕೆಟಿಗ!
‘ಬೂಮ್ರಾ ವಿಕೆಟ್ಲೆಸ್ ಆಗ್ತಿರೋದು ನೋಡಲಾಗ್ತಿಲ್ಲ’
‘ಬೂಮ್ರಾ ಕೆಲ ಪಂದ್ಯಗಳಿಂದ ವಿಕೆಟ್ಲೆಸ್ ಆಗ್ತಿರೋದನ್ನ ನೋಡಲು ಆಗ್ತಿಲ್ಲ. ಆದರಿದು ಬದಲಾಗಬೇಕು. ಮುಂಬೈ ತಂಡದಲ್ಲಿ ಇತರರು ಸರಿಯಾಗಿ ಬೌಲಿಂಗ್ ಮಾಡದ ಕಾರಣ ಬೂಮ್ರಾ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ವಿಮರ್ಶಕರು ಹೇಳ್ತಿದ್ದಾರೆ. ಅದರಂತೆ ಬೂಮ್ರಾ ರನ್ ಬಿಟ್ಟುಕೊಡ್ತಿದ್ದಾರೆ. ಬೂಮ್ರಾ ವಿಕೆಟ್ ಕಬಳಿಸದಿರುವುದು ಕೊಹ್ಲಿ ಗಳಿಸಲು ಪರದಾಡಿದಂತೆ. ಇದು ಅತ್ಯಂತ ದುಃಖದ ವಿಷಯ
ಆಕಾಶ್ ಚೋಪ್ರಾ, ಮಾಜಿ ಕ್ರಿಕೆಟಿಗ
ಅದೇನೇ ಇರಲಿ, ಒಬ್ಬ ವಿಶ್ವ ಶ್ರೇಷ್ಠ ಬೌಲರ್ ಈ ರೀತಿ ವಿಕೆಟ್ ಇಲ್ಲದೇ ಪಂದ್ಯ ಮುಗಿಸ್ತಿರೋದು ಬೇಸರ ಸಂಗತಿಯೇ ಆಗಿದೆ. ಆದ್ರೆ ಇದನ್ನ ಬೂಮ್ರಾ ಮನವರಿಕೆ ಮಾಡಿಕೊಳ್ಳಬೇಕು. ತಪ್ಪು ಎಲ್ಲಿ ಆಗ್ತಿದೆ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಏಕೆಂದ್ರೆ ವಿಶ್ವಕಪ್ ಹತ್ತಿರವಾಗ್ತಿದೆ. ಹೀಗಾಗಿ ಆದಷ್ಟು ಬೇಗನೇ ಫಾರ್ಮ್ಗೆ ಮರಳಲಿ, ತಂಡಕ್ಕೆ ವಿಶ್ವಕಪ್ ಗೆದ್ದುಕೊಡಲು ಪ್ರಮುಖ ಪಾತ್ರವಹಿಸಲಿ ಅನ್ನೋದೇ ನಮ್ಮೆಲ್ಲರ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post