ಕೋಲಾರ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಜಿಲ್ಲೆಯ ಬಂಗಾರಪೇಟೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಬೈಕ್ ಱಲಿ ಮೂಲಕ ಕೆಜಿಎಫ್ಗೆ ತೆರಳಿದ್ದಾರೆ. ಇಂದು ಕೆಜಿಎಫ್ನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅಣ್ಣಾಮಲೈ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೋಲಾರದಲ್ಲಿ ಜಯಗಳಿಸಲಿದೆ. ನಮ್ಮ ಸಂಸದರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೋಲಾರದಲ್ಲಿ ಸಭೆ ಮಾಡುವುದಕ್ಕೆ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಕೋಲಾರದಲ್ಲಿ ಹೆಚ್ಚು ತಮಿಳು ಮಾತನಾಡುವ ಜನರಿದ್ದಾರೆ. ಅವರೆಲ್ಲ ಒಳ್ಳೆಯ ಬಾಂಧವ್ಯವನ್ನ ಇಟ್ಟುಕೊಂಡಿದ್ದಾರೆ. ಅವರನೆಲ್ಲ ನೋಡುವುದಕ್ಕೆ ತುಂಬಾ ಖುಷಿ ಆಗುತ್ತೆ ಎಂದರು.
ಮೇಕೆದಾಟು ವಿಚಾರ..
ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತಮಿಳುನಾಡು ಮತ್ತು ಕರ್ನಾಟಕಕ್ಕೆ ಹಲವು ಬಾಂಧವ್ಯಗಳ ವಿಚಾರಗಳಿವೆ. ತಮಿಳುನಾಡಿನ ಎಷ್ಟೋ ಮಂದಿ ಬೆಂಗಳೂರಿನ ಐಟಿಯಲ್ಲಿದ್ದಾರೆ. ಮೇಕೆದಾಟು ವಿಚಾರ ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಆಗಲಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಗಳು ಇದನ್ನೇ ಹೇಳಿದ್ದಾರೆ. ನಾನು ಯೋಜನೆ ಪರವೋ ವಿರುದ್ಧವೋ ಅನ್ನೋದು ಮುಖ್ಯವಲ್ಲ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post