ನಿನ್ನೆ ನಡೆದ ಐಪಿಎಲ್ನ 53ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಎಲ್ಸಿಜಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಎಲ್ಎಸ್ಜಿ 176 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು.
ಈ ಗುರಿಯನ್ನ ಬೆನ್ನು ಹತ್ತಿದ್ದ ಕೋಲ್ಕತ್ತ ನೈಟ್ ರೈಡರ್ಸ್, 14.3 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯ್ತು. ರಸೇಲ್ ಐದು ಸಿಕ್ಸರ್ಗಳೊಂದಿಂಗೆ 45 ರನ್ ಬಾರಿಸಿದ್ದು ಬಿಟ್ಟರೆ ಬೇರೆ ಯಾವುದೇ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಪರಿಣಾಮ ಕೋಲ್ಕತ್ತ ತಂಡ ಆಲೌಟ್ ಆಯ್ತು.
ಗೆಲುವು ತಂದ್ಕೊಟ್ಟ ಬೌಲರ್ಸ್..!
ಎಲ್ಎಸ್ಜಿ ಗೆಲುವಿನ ಹಿಂದೆ ಆವೇಶ್ ಖಾನ್ ಹಾಗೂ ಜಸೋನ್ ಹೋಲ್ಡರ್ ಪ್ರಮುಖ ಪಾತ್ರ ವಹಿಸಿದರು. ಇಬ್ಬರು ತಲಾ ಮೂರು ವಿಕೆಟ್ ಪಡೆದು ಮಿಂಚಿದರು, ಇನ್ನು ಮೊಹ್ಸಿನ್ ಖಾನ್, ಚಮೀರಾ, ರವಿ ತಲಾ ಒಂದು ವಿಕೆಟ್ ಪಡೆದುಕೊಂಡರು. 75 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಎಲ್ಎಸ್ಜಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post