ಕಿರುತೆರೆ ಪಂಡಿತರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಟಿಆರ್ಪಿಯಲ್ಲಿ ದೊಡ್ಡ ಬದಲಾವಣೆಗಿದೆ. ಗಟ್ಟಿಮೇಳ ಕಮ್ಬ್ಯಾಕ್ ಮಾಡಿದೆ. ದೊಡ್ಡ ಮೊತ್ತದ ರೇಟಿಂಗ್ ಕಲೆಹಾಕಿದೆ. 10.00 ರೇಟಿಂಗ್ ಪಡೆದು ಸೌಂಡ್ ಮಾಡ್ತಿದೆ. ಗಟ್ಟಿಮೇಳದಲ್ಲಿ ಅಮ್ಮ-ಮಕ್ಕಳ ಸೆಂಟಿಮೆಂಟ್ ವರ್ಕ್ ಆಗ್ತಿದೆ. ಆಕ್ಸಿಡಂಟ್ ಆಗಿದ್ದ ಧ್ರುವ ಮರಳಿರುವುದು ವಶಿಷ್ಟ ಕುಟುಂಬಕ್ಕಷ್ಟೆಯಲ್ಲ ವೀಕ್ಷಕರಿಗೂ ಇಷ್ಟವಾಗಿದೆ. ಕಳೆದವಾರ ನಡೆದ ಕೋರ್ಟ್ ಸೀನ್ಗಳಿಗೆ ಬಹುಪರಾಕ್ ಹೇಳಿದ್ದಾರೆ ಪ್ರೇಕ್ಷಕರು.
ಮತ್ತೊಂದು ವಿಶೇಷತೆ ಅಂದರೆ ಮಧ್ಯಾಹ್ನದ ಸ್ಲಾಟ್ನಲ್ಲಿ ಪ್ರಸಾರವಾಗ್ತಿರುವ ಡಬ್ಬಿಂಗ್ ಧಾರಾವಾಹಿ ನಂಬರ್ ಒನ್ ಸೊಸೆ ಟಾಪ್ 10 ಲಿಸ್ಟ್ನಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. 4.2 ರೇಟಿಂಗ್ ಹೊಂದಿದೆ. ಇನ್ನೂ ಪುಟ್ಟಕ್ಕನ ಮಕ್ಕಳು 9.00 ರೇಟಿಂಗ್ ಪಡೆದು ಎರಡನೇ ಸ್ಥಾನಕ್ಕೆ ಡಿಮೋಟ್ ಆಗಿದೆ. ಇದರ ಹಿಂದೆನೇ ಹಿಟ್ಲರ್ ಕಲ್ಯಾಣಯಿದ್ದು 7.1 ಟಿವಿಆರ್ ಪಡೆದು ಮೂರನೇ ಸ್ಥಾನದಲ್ಲಿದೆ. ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದರೆ 10ನೇ ಸ್ಥಾನವನ್ನ ಬರೋಬ್ಬರಿ 4 ಸೀರಿಯಲ್ಗಳು ಸಮನಾಗಿ ಹಂಚಿಕೊಂಡಿವೆ. 3.8 ರೇಟಿಂಗ್ ಪಡೆದುಕೊಂಡಿರುವ ಕನ್ನಡತಿ, ಪಾರು, ಲಕ್ಷಣ, ಗಿಣಿರಾಮ ಹತ್ತನೇ ಸ್ಥಾನದಲ್ಲಿವೆ.
ಇನ್ನೂ ರಿಯಾಲಿಟಿ ಶೋಗಳಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ 9.0 ರೇಟಿಂಗ್ ಪಡೆದು ವೀಕೆಂಡ್ನಲ್ಲಿ ರಾರಾಜಿಸ್ತಿದೆ. ಹಾಗೂ ಡ್ರಾಮಾ ಜೂನಿಯರ್ಸ್ 7.8 ರೇಟಿಂಗ್ ಪಡೆದು ಎರಡನೇ ಸ್ಥಾನದಲ್ಲಿದೆ. ಗಿಚ್ಚಿಗಿಲಿಗಿಲಿ ಮಹಾ ಸಂಚಿಕೆಗೆ 3.9 ರೇಟಿಂಗ್ ಬಂದಿದೆ. ಒಟ್ಟಿನಲ್ಲಿ ಡಬ್ಬಿಂಗ್ ಸೀರಿಯಲ್ಗಳು ಸಖತ್ ಕಾಂಪಿಟೇಶನ್ ಕೊಡ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೇ ಮರಳಲು ಸೀರಿಯಲ್ಗಳು ಏನೇಲ್ಲಾ ಬದಲಾವಣೆಗಳನ್ನ ಮಾಡಿಕೊಳ್ಳಲಿವೆ ಅನ್ನೋದನ್ನ ಕಾದು ನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post