ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ತಮ್ಮ ಮಗ ಯಶ್ನ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಯಶ್ ಚಿಕ್ಕವರಿದ್ದಾಗ ಹೇಗಿದ್ದರು? ಏನೆಲ್ಲಾ ತರ್ಲೆ ಮಾಡುತ್ತಿದ್ದ ಅನ್ನೊದನ್ನ ಹೇಳಿದ್ದಾರೆ. ಯಾವ ರೀತಿ ಅಮ್ಮನ ಮಾತನ್ನ ಕೇಳುತ್ತಿದ್ದ ಅಂತ ನ್ಯೂಸ್ ಫಸ್ಟ್ನೊಂದಿಗೆ ಹಂಚಿಕೊಂಡಿದ್ದಾರೆ.
ಜನವರಿ 8 ನೇ ತಾರೀಖು ಡಾಕ್ಟ್ರ ಬಂದು ಗಂಡು ಮಗು ಎಂದು ಹೇಳಿದಾಗ ಎಲ್ಲರಿಗೂ ತುಂಬಾನೆ ಖುಷಿ ಆಯ್ತು. ಅದರಲ್ಲಿ ನಮ್ಮ ಯಜಮಾನ್ರಿಗೆ ಎಲ್ಲಿಲ್ಲದ ಖುಷಿ. ಇವನು ಹುಟ್ಟಿದ್ದು ಹಾಸದಲ್ಲಿ ತುಂಬಾನೇ ಚಳಿ ಇತ್ತು ಹಾಗಾಗಿ ನಾನೂ ನಮ್ಮ ಅಮ್ಮನಿಗೆ ಬಟ್ಟೆ ಸುತ್ತು ಅಂತ ಹೇಳುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಹಾಸನದಲ್ಲಿ ಎಲ್ಲರಿಗೂ ಯಶ್ ಅಂದರೆ ಇಷ್ಟ. ಈಗ ನಮ್ಮ ಮೊಮ್ಮಗಳು ಐರಾ ಅದೇ ಥರ ಇದ್ದಾಳೆ. ಒಂದೊಂದು ಸಾರಿ ಯಶ್ ಥರಾನೇ ಕಾಣಿಸುತ್ತಾಳೆ ನಮ್ಮ ಐರಾ ಎಂದು ಯಶ್ ಅಮ್ಮ ಪುಷ್ಪ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post