ಕುಣಿಯೋರಿಗೆ ಗೆಜ್ಜೆ ಕಟ್ಟಿ ಕೊಟ್ಟ ವೇದಿಕೆ ಇದು.. ಸೆಲೆಬ್ರಿಟಿ ಹಾಗೂ ನಾನ್ ಸೆಲೆಬ್ರಿಟಿಯನ್ನ ಜೋಡಿ ಮಾಡಿ ಮೋಡಿ ಮಾಡಲು ಹೊರಟ ವೇದಿಕೆ ಇದು.. ಆದರೆ ಈಗ ಈ ವೇದಿಕೆ ಈಗ ವಿದಾಯ ಹೇಳಲು ಸಜ್ಜಾಗಿದೆ. ಅಂದರೆ ಡ್ಯಾನ್ಸಿಂಗ್ ಚಾಂಪಿಯನ್ ವೈಂಡ್ ಅಪ್ ಆಗ್ತಿದೆ.. ಈ ರಿಯಾಲಿಟಿ ಶೋನ ಕೊನೆಯ ವಾರದ ಫೈನಲ್ಸ್ ಶೂಟ್ನ ಈ ವಾರ ಮಾಡಲಾಗುತ್ತಿದೆ.. ಮುಂದಿನ ವಾರಕ್ಕೆ ಈ ಶೋಗೆ ತೆರೆ ಬೀಳಲಿದೆ ಅನ್ನೊ ಸುದ್ದಿ ಕೇಳಿ ಬರ್ತಿದೆ.
ಪ್ರತಿ ದಿನ ವೀಕ್ಷಕರು ಹೊಸತನವನ್ನು ಬಯಸ್ತಾನೆ ಇರ್ತಾರೆ.. ರೇಟಿಂಗ್ನಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಕೊನೆ ಸ್ಥಾನದಲ್ಲಿ ಇದ್ದ ಕಾರಣನೋ ಅಥವಾ ಶೋ ತಂಡದವರು ಬೇರೆ ಯಾವುದಾದರು ಹೊಸ ರಿಯಾಲಿಟಿ ಶೋ ತರೋ ಯೋಜನೆ ಮಾಡಿದ್ದರೋ ಗೊತ್ತಿಲ್ಲ.. ಡ್ಯಾನ್ಸಿಂಗ್ ಚಾಂಪಿಯನ್ ಮುಕ್ತಾಯವಾಗ್ತಿದೆ.. ಆದರೂ ಈ ಶೋ ಚೆನ್ನಾಗಿಯೇ ಕಾಂಪಿಟೇಷನ್ ಕೊಡ್ತು.. ಆದ್ರೆ ವೀಕ್ಷಕರಿಗೆ ಈ ಕಾರ್ಯಕ್ರಮದ ಮೇಲೆ ಅಷ್ಟು ಒಲವು ಮೂಡಲಿಲ್ಲ. ಇದೇ ಕಾರಣಕ್ಕೆ ಶೋ ತುಂಬಾ ಬೇಗ ವೈಂಡ್ ಅಪ್ ಆಗ್ತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬಂದಿವೆ. .
ಒಟ್ಟಿನಲ್ಲಿ.. ಅಂದುಕೊಂಡಂತೆ ಆಗಿಲ್ಲ ಅಂದ್ರು ವೀಕ್ಷಕರನ್ನು ಒಂದು ಮಟ್ಟಿಗೆ ತೃಪ್ತಿ ಪಡಿಸಿದೆ.. ಆದರೆ ಈ ಶೋ ಮುಗಿದ ನಂತರ ನೆಕ್ಸ್ಟ್ ಏನು ಅನ್ನೋದಕ್ಕೆ ಕಲರ್ಸ್ ಕನ್ನಡ ವಾಹಿನಿ ಯಾವುದೇ ಸುಳಿವು ಕೂಡ ಬಿಟ್ಟು ಕೊಟ್ಟಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post