ಕಿರುತೆರೆಯ ಮುದ್ದಾದ ಜೋಡಿ ದೀಪಾ-ಸಾಗರ್. ಮಹಾಸತಿ ಸೀರಿಯಲ್ ಮೂಲಕ ಒಟ್ಟಿಗೆ ಕೇರಿಯರ್ ಶುರುಮಾಡಿತ್ತು ಈ ಜೋಡಿ. ಹಾಯ್ ಹಲೋ ಅಂತಾ ಶುರುವಾದ ಸ್ನೇಹ ಈಗ ಎರಡು ದೇಹ ಒಂದೇ ಜೀವವಾಗಿದ್ದಾರೆ. ನಟ ಸುನೀಲ್ ಪುರಾಣಿಕ್ ಅವರ ಕುಟುಂಬದ ಸೊಸೆಯಾಗ್ತಿದ್ದಾರೆ ದೀಪಾ. ಈಗಾಗಲೇ ಎರಡು ಕುಟುಂಬಗಳು ಮದುವೆ ಸಂಭ್ರಮಕ್ಕೆ ಸಕಲ ತಯಾರಿ ಮಾಡಿಕೊಳ್ತಿದ್ದು, ಇದೇ ಮೇ 18 ರಂದು ಧಾರವಾಡದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಸದ್ಯ ಉತ್ತರ ಕರ್ನಾಟಕದ ಶೈಲಿಯಲ್ಲಿ ಚಂದದ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ..
ಮೂಲತಃ ಇಬ್ಬರೂ ಧಾರವಾಡದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡು ಕುಟುಂಬದ ಸಂಬಂಧಿಕರು ಧಾರವಾಡದಲ್ಲಿಯೇ ಇರೋದ್ರಿಂದ ಮದುವೆ ಅಲ್ಲೇ ನಡೆಯಲಿದೆ. ವಿಶೇಷ ಅಂದ್ರೇ ಫೋಟೋಶೂಟ್ ಕೂಡ ಧಾರವಾಡದಲ್ಲಿಯೇ ಮಾಡಿಸಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಕಾಸ್ಟೂಮ್ನಲ್ಲಿ ಸಾಗರ್-ದೀಪಾ ಮಿಂಚ್ತಿದ್ದಾರೆ.
ಇನ್ನೂ ಸ್ನೇಹಿತರು ದೀಪಾಗೆ ಸರ್ಪ್ರೈಸ್ ಬ್ರೈಡಲ್ ಪಾರ್ಟಿ ಅರೇಂಜ್ ಮಾಡಿದ್ರು. ಗರ್ಲ್ಸ್ ಗ್ಯಾಂಗ್ ನೀಡಿದ ಸರ್ಪ್ರೈಸ್ಯನ್ನ ಸಖತ್ ಎಂಜಾಯ್ ಮಾಡಿದ್ದಾರೆ ದೀಪಾ. ಸಾಗರ್ ಪುರಾಣಿಕ್ ನಿರ್ದೇಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ದೀಪಾ ಬಗ್ಗೆ ನಿಮಗೆಲ್ಲಾ ಗೊತ್ತೆಯಿದೆ.
ಸಾಕಷ್ಟು ಧಾರಾವಾಹಿಗಳಲ್ಲಿ ನಾಯಕಿಯಾಗಿ ಅಭಿನಯಿಸಿ ರಂಜಿಸಿದ್ದಾರೆ. ಸದ್ಯ ದೀಪಾ ತೆಲುಗು ಇಂಡಸ್ಟ್ರಿಯಲ್ಲಿ ಬ್ಯೂಸಿಯಿದ್ದಾರೆ.
ಇಂಡಸ್ಟ್ರಿಯ ಬಹು ನಿರೀಕ್ಷಿತ ಮದುವೆ ಈ ಜೋಡಿಯದ್ದು. ಇನ್ನೇನೂ ಮದುವೆಗೆ ಒಂದೇ ವಾರ ಉಳಿದಿದ್ದು, ತಯಾರಿಗಳು ಭರದಿಂದ ನಡೆತಿವೆ. ಅಂದ್ಹಾಗೆ, ಮೇ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post