ತಾಯ್ತನದ ಜೊತೆಗೆ ವೃತ್ತಿ ಬದುಕನ್ನು ಬ್ಯಾಲೆನ್ಸ್ ಮಾಡೋದು ಅಷ್ಟು ಸುಲಭವಲ್ಲ. ಅದರಲ್ಲೂ ಮೊದಲ ಮಗುವಿನ ಸಂಭ್ರಮದಲ್ಲಿರುವ ಅಮ್ಮಂದಿರಿಗೆ ಎಲ್ಲವೂ ಹೊಸತು. ಮಗುವನ್ನ ನೋಡಿಕೊಳ್ಳುವುದು ವಿಶೇಷ ಅನುಭವ ನೀಡಿದ್ರೇ ಅದರ ಜೊತೆಗೆ ಕೆಲಸ ನಿರ್ವಹಿಸುವುದು ದೊಡ್ಡ ಸವಾಲ್. ಈ ವಿಷಯದಲ್ಲಿ ಮಗುವಿನಷ್ಟೇ ಕಾಳಜಿ ಅಮ್ಮನಿಗೂ ಬೇಕಾಗುತ್ತೆ. ಫಿಸಿಕಲಿ ಮೆಂಟಲಿ ಕುಟುಂಬದ ಸಪೋರ್ಟ್ ತುಂಬಾ ಇಂಪಾರ್ಟೆಂಟ್. ಅದರಲ್ಲೂ ಸೆಲೆಬ್ರೆಟಿಗಳಿಗೆ ತುಸು ಹೆಚ್ಚು ಪ್ರೋತ್ಸಾಹ ಹಾಗೂ ಆಸರೆಯ ಅವಶ್ಯಕತೆ ಇರುತ್ತೆ. ಈ ವಿಷಯದಲ್ಲಿ ನಮ್ಮ ಕಿರುತೆರೆಯ ನಟಿಯರು ಲಕ್ಕಿ ಅಂತಲೇ ಹೇಳಬಹುದು.
ಈ ವಿಷಯದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಮೇಘನಾ ರಾಜ್. ಮೇಘನಾ ಜೀವನದಲ್ಲಿ ಏನೇನೆಲ್ಲ ಆಯ್ತು ಅನ್ನೋದು ನಿಮಗೆಲ್ಲ ಗೊತ್ತಿದೆ. ಜೀವನದ ಹೋರಾಟದಲ್ಲಿ ಮೇಘನಾಗೆ ದೊಡ್ಡ ಸಪೋರ್ಟ್ ನೀಡಿದ್ದು ಅವರ ಕುಟುಂಬ. ಅವರ ಎಲ್ಲಾ ನೋವಿನಿಂದ ಹೊರಬರಲು ಸಹಾಯ ಮಾಡಿದ್ದು ಅವರ ಪುಟ್ಟ ಕಂದ ರಾಯನ್ ರಾಜ್. ಮೇಘನಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡೋದು ಅನಿವಾರ್ಯವಾಗಿತ್ತು. ಡಾನ್ಸಿಂಗ್ ಚಾಂಪಿಯನ್ಗೆ ಜಡ್ಜ್ಗಾಗಿ ಆಫರ್ ಬಂದಾಗ ಒಂದು ವರ್ಷದ ಕಂದನನ್ನ ಬಿಟ್ಟು ಇಡೀ ದಿನ ಅಲ್ಲೇ ಕಳೆಯಬೇಕಿತ್ತು. ಎಮೋಷನಲಿ ಕಷ್ಟ ಆದ್ರೂ ಕೂಡ ಮೇಘನಾ ಈ ಸವಾಲ್ನ್ನ ಸ್ವೀಕರಿಸಿ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಟಿ ಪರಿಮಳಾ ಜೋಸಾಯ್ ಅವರ ಮಗಳು ಮತ್ತು ಮೊಮ್ಮಗನಿಗಾಗಿ ನಟನೆಯಿಂದ ದೂರ ಉಳಿದಿದ್ದಾರೆ.
ಈಗಷ್ಟೇ ತಾಯಿಯಾಗಿರುವ ಖುಷಿಯಲ್ಲಿದ್ದಾರೆ ಅಮೃತಾ ರಾಮಮೂರ್ತಿ. ಅಮೃತಾ ತುಂಬಾನೇ ಸೃಜನಶೀಲ ವ್ಯಕ್ತಿತ್ವದವರು. ಮಗಳು ದೃತಿಯನ್ನ ಸಂಬಾಳಿಸುವುದರ ಜೊತೆಗೆ ಸಾಕಷ್ಟು ಜಾಹಿರಾತುಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡದ್ದಾರೆ ಅಮೃತಾ. ಅಷ್ಟೇ ಅಲ್ಲ ಈಗಾಗಲೇ ಸೀರಿಯಲ್ವೊಂದರ ಶೂಟಿಂಗ್ನಲ್ಲಿ ಕೂಡ ಭಾಗವಹಿಸಿದ್ದು, ಸದ್ಯದಲ್ಲಿಯೇ ವೀಕ್ಷಕರ ಮುಂದೆ ಬರಲಿದ್ದಾರೆ.
ಅದೇ ರೀತಿ ನಟಿ ಶ್ರುತಿ ಹರಿಹರನ್ ಕೂಡ ಸೂಪರ್ ವುಮೆನ್ನಂತೆ ಕೆಲಸ ಮಾಡ್ತಿದ್ದಾರೆ. ಮುದ್ದಾದ ಮಗಳು ಜಾನಕಿಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರುವ ಕಾಮಿಡಿ ಗ್ಯಾಂಗ್ಸ್ನಲ್ಲಿ ಜಡ್ಜ್ ಆಗಿದ್ದಾರೆ ಶೃತಿ. ಮಗಳನ್ನು ಬೆಸ್ಟ್ ಫ್ರೆಂಡ್ ಅಂತಾ ಹೇಳುವ ಶೃತಿ ಅವರು ಎಷ್ಟೇ ಬ್ಯೂಸಿ ಇದ್ರೂ ಮಗಳ ಜೊತೆ ಆಟ ಆಡೋದನ್ನ ಮರೆಯಲ್ಲ.
ಇನ್ನು ನಟಿ ನಯನಾ ಅವರ ಬಗ್ಗೆ ಹೇಳಲೇಬೇಕು. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮಾನ್ಸಿ ಪಾತ್ರದ ಮೂಲಕ ವೀಕ್ಷಕರನ್ನ ರಂಜಿಸುತ್ತಿರುವ ನಯನಾಗೆ ಎರಡುವರೆ ವರ್ಷದ ಮುದ್ದಾದ ಮಗ ಇದ್ದಾನೆ. ಮಗನ ಜೊತೆ ತುಂಬಾ ಅಟ್ಯಾಚ್ ಆಗಿದ್ರು ನಯನಾ. ಆದ್ರೇ ಜೊತೆ ಜೊತೆಯಲಿ ಆಫರ್ ಬಂದಾಗ ನಟನೆ ಅವ್ರನ್ನ ಸೆಳದಿತ್ತು. ತುಂಟ ಮಗನನ್ನ ಸಂಬಾಳಿಸೊದ್ರ ಜೊತೆಗೆ ನಟನೆಯನ್ನ ಬ್ಯಾಲನ್ಸ್ ಮಾಡ್ತಿದ್ದಾರೆ.
ಶ್ವೇತಾ ಚಂಗಪ್ಪ ಅವರು ಕೂಡ ಮಗ ಜಿಯಾನ್ನ್ನ ನೋಡಿಕೊಳ್ಳುವುದರ ಜೊತೆಗೆ ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಶ್ವೇತಾ. ಇತ್ತಿಚೀಗೆ ಶಿವಣ್ಣ ಅಭಿನಯದ ಚಿತ್ರವೊಂದನ್ನ ಒಪ್ಪಿಕೊಂಡಿದ್ದಾರೆ. ಮಗನನ್ನ ಬಿಟ್ಟು ದೂರದ ಊರಿಗೆ ಶೂಟಿಂಗ್ಗಾಗಿ ಹೋಗಿದ್ದರು. ಕಲಾವಿದರಿಗೆ ಇದು ಅನಿವಾರ್ಯ ಅಂತಾರೆ ಶ್ವೇತಾ.
ನಟಿ ಅನು ಪ್ರಭಾಕರ್ ಮುಖರ್ಜಿ. ಮಗಳು ನಂದನಾ ಹುಟ್ಟಿದ ಮೇಲೆ ಕಮ್ಬ್ಯಾಕ್ ಮಾಡಿದ ಶೋ ನನ್ನಮ್ಮ ಸೂಪರ್‌ಸ್ಟಾರ್. ಅನು ನಂದನಾಗೆ ಎಷ್ಟು ಸಾಧ್ಯವೋ ಅಷ್ಟು ಟೈಮ್ ಕೊಡೊಕೆ ಇಷ್ಟ ಪಡ್ತಾರೆ. ಮಕ್ಕಳು ತಾಯಿ ಪ್ರೀತಿಯಿಂದ ವಂಚಿತರಾಗಬಾರದು ಅನ್ನೋದು ಅನು ಅವರ ಅಭಿಪ್ರಾಯ. ಅದಕ್ಕೆ ಅವ್ರು ತಮ್ಮ ಚಿಕ್ಕ ರಾಜಕುಮಾರಿಯೊಂದಿಗೆ ಸಮಯ ಕಳೆಯಲು ಸಂಜೆ 6 ಗಂಟೆಯೊಳಗೆ ಯಾವ್ದೇ ಶೂಟಿಂಗ್ ಇದ್ರೂ ಕಂಪ್ಲೀಟ್ ಮಾಡ್ಕೊಂಡ ಬಿಡ್ತಾರೆ.
ಒಟ್ಟಿನಲ್ಲಿ ಯಾರೇ ಅಮ್ಮ ಆದರೂ ಮಗು ಅಂತಾ ಬಂದ್ರೇ ಆ ಅಟ್ಯಾಚ್ಮೆಂಟ್ ಬಿಟ್ಟು ಕೆಲಸ ಮಾಡೋದು ಸುಲಭವಲ್ಲ. ಇದಕ್ಕೆ ನಟಿಯರೂ ಹೊರತಲ್ಲ. ಅವರು ಕೂಡ ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಆ ತಾಯ್ತನದ ಸುಖ ಅನುಭವಿಸೊಕೆ ಬಯಸ್ತಾರೆ. ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ವೃತ್ತಿ ಬದುಕಿಗಾಗಿ ದುಡಿಯುವುದು ಅನಿವಾರ್ಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post