ಕೊಪ್ಪಳ: ಸಾರ್ವಜನಿಕರಿಗಾಗಿ ಕೆಲಸ ಮಾಡ್ತೀವಿ ಎಂದು ಸರ್ಕಾರದಿಂದ ಹಣ ಪಡೆದು ಜನರಿಗೆ ಮಕ್ಮಲ್ ಟೋಪಿ ಹಾಕುವ ದಂಧೆ ರಾಜ್ಯದಲ್ಲಿ ಮತ್ತಷ್ಟು ಜೋರಾದಂತೆ ಕಾಣ್ತಿದೆ. ಇದಕ್ಕೆ ಇನ್ನೊಂದು ನಿದರ್ಶನ, ಡಾಂಬರು ಹಾಕಿದ ಎರಡೇ ದಿನಕ್ಕೆ ರಸ್ತೆ ಕಿತ್ತು ಹೋಗಿರೋದು..!!
25 ಲಕ್ಷ ರೂಪಾಯಿ ನೀರಲ್ಲಿ ಹೋಮ
ಕುಷ್ಟಗಿ ತಾಲೂಕಿನ ಯರಗೇರಾ, ಗೋರಿಬಿಹಾಳ ಮಧ್ಯೆಯಿರುವ ರಸ್ತೆಗೆ ಡಾಂಬರೀಕರಣ ವರ್ಷವಿರಲಿ, ತಿಂಗಳುಗಳೇನೂ ಕಳೆದಿಲ್ಲ. ಟಾರ್ ಹಾಕಿದ ಎರಡೇ ದಿನಕ್ಕೆ ರಸ್ತೆ ತೋಪೆದ್ದು ಹೋಗ್ತಿದೆ. ಸರ್ಕಾರದಿಂದ ಬರೋಬ್ಬರಿ 25 ಲಕ್ಷ ರೂಪಾಯಿ ಪಡೆದುಕೊಂಡು ಡಾಂಬರೀಕರಣ ಮಾಡಲಾಗಿತ್ತು.
ಜಲ್ಲಿ ಹಾಕದೇ ಕಾಮಗಾರಿ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಐದು ಕಿಮೀವರೆಗೆ ರಸ್ತೆ ಕಾಮಗಾರಿ ನಡೆದಿದೆ. ಕೇವಲ ದುಡ್ಡಿಗೆ ಮಾಡಿದಂತೆ ಕಾಣುವ ಈ ಕಾಮಗಾರಿಯನ್ನ ಜಲ್ಲಿ ಹಾಕದೇ ಡಾಂಬರೀಕರಣ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡಿರೋ ಸ್ಥಳೀಯರು ಡಾಂಬರು ಕಿತ್ತು ಸ್ಥಳೀಯ ಆಡಳಿತ ಮತ್ತು ಗುತ್ತಿಗೆದಾರರ ವಿರುದ್ಧ ಕೆಂಡ ಕಾರಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post