ಭಾರತೀಯ ಜನತಾ ಯುವ ಮೋರ್ಚಾದ ‘ನ್ಯಾಷನಲ್ ವರ್ಕಿಂಗ್ ಕಮೀಟಿನ್’ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ, ಭಾರತೀಯ ತಂಡದ ಮುಖ್ಯಕೋಚ್ ರಾಹುಲ್ ದ್ರಾವಿಡ್ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ವಿಶಾಲ್ ನಿಹ್ರಿಯಾ ಮಾಹಿತಿ ನೀಡಿದ್ದಾರೆ.
ಮೇ 12 ರಿಂದ 15ವರೆಗೆ ಕಾರ್ಯಕ್ರಮ
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಮೇ 12 ರಿಂದ 15 ವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರು ಹಾಗೂ ಬಿಜೆಪಿಯ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಶಾಸಕ ವಿಶಾಲ್ ತಿಳಿಸಿದ್ದಾರೆ.
ಯಾಕಾಗಿ ಬಿಜೆಪಿ ಕಾರ್ಯಕ್ರಮ ಮಾಡ್ತಿದೆ..?
ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. 68 ಕ್ಷೇತ್ರಗಳನ್ನ ಹೊಂದಿರೋ ಹಿಮಾಚಲ ಪ್ರದೇಶದ ವಿಧಾನಸಭೆಗೆ 2017ರಂದು ಚುನಾವಣೆ ನಡೆದಿತ್ತು. ಆ ವೇಳೆ 44 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳನ್ನ ಕಳೆದುಕೊಂಡಿತ್ತು. ಮತ್ತೆ ಇಲ್ಲಿ ಅಧಿಕಾರಕ್ಕೆ ಏರುವ ಇರಾದೆಯಲ್ಲಿ ಬಿಜೆಪಿ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಿದೆ.
ಚರ್ಚೆಗೆ ಕಾರಣವಾದ ದ್ರಾವಿಡ್..?
ಬಿಜೆಪಿ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಭಾಗಿಯಾಗುತ್ತಿರೋದು ಭಾರೀ ಮಹತ್ವವನ್ನ ಪಡೆದುಕೊಂಡಿದೆ. ಅಲ್ಲದೇ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಮಲದ ಮೇಲೆ ಗೋಡೆಗೆ ಒವಲು ಮೂಡಿದೆಯಾ? ಬಿಜೆಪಿಗೆ ಏನಾದ್ರೂ ದ್ರಾವಿಡ್ ಸೇರ್ಪಡೆಯಾಗಬಹುದಾ? ಮುಂತಾದ ಹಲವು ಪ್ರಶ್ನೆಗಳೂ ಮೂಡಿವೆ.
‘ದಿ ವಾಲ್’ ಎಂದೇ ಖ್ಯಾತಿ ಪಡೆದಿರುವ ರಾಹುಲ್ ದ್ರಾವಿಡ್, 1996ರಲ್ಲಿ ಏಕದಿನ ಅಂತಾರಾಷ್ಟ್ರೀಯ ಹಾಗೂ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು. 164 ಟೆಸ್ಟ್ ಪಂದ್ಯಗಳನ್ನ ಆಡಿರುವ ದ್ರಾವಿಡ್ 52.31 ಸರಾಸರಿಯಲ್ಲಿ 13288 ರನ್ಗಳನ್ನ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 344 ಪಂದ್ಯಗಳನ್ನ ಆಡಿರುವ ದ್ರಾವಿಡ್ 10889 ರನ್ಗಳನ್ನ ಗಳಿಸಿದ್ದಾರೆ. 2012ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಜಗತ್ತಿಗೆ ದ್ರಾವಿಡ್ ವಿದಾಯ ಹೇಳಿದ್ದಾರೆ. ಸದ್ಯ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನ ಅಲಂಕರಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post