ಚಂಡಿಘಡ: ‘ಕಲಿಕೆಗೆ ವಯಸ್ಸಿನ ಮಿತಿಯಿಲ್ಲ’ ಅನ್ನೋ ಮಾತಿದೆ. ಇದನ್ನ ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲ ಖರೆ ಮಾಡಿದ್ದಾರೆ. ತಮ್ಮ 87ನೇ ವರ್ಷಕ್ಕೆ 10 ಮತ್ತು 12ನೇ ತರಗತಿಯನ್ನ ಮೊದಲ ಡಿವಿಸನ್ನಲ್ಲೇ ಪಾಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹರಿಯಾಣ ಶಿಕ್ಷಣ ಇಲಾಖೆ ಚೌಟಾಲಗೆ ಸೋಮವಾರ ಮಾರ್ಕ್ಸ್ ಕಾರ್ಡ್ ವಿತರಿಸಿದೆ. ಇಂಡಿಯನ್ ನ್ಯಾಷನಲ್ ಲೋಕ್ ದಳದ ಮುಖ್ಯಸ್ಥರಾಗಿರುವ ಅವರು, ಸೋಮವಾರ ವೀರ ಶಿರೋಮಣಿ ಮಹರಾಣರ 428ನೇ ಜನ್ಮೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಲ್ಲಿಗೆ ಆಗಮಿಸಿದ್ದ ಹರಿಯಾಣ ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಕಪಟ್ಟಿಯನ್ನ ನೀಡಿ ಗೌರವಿಸಿದ್ದಾರೆ.
ಅಂದ್ಹಾಗೆ ಚೌಟಾಲಾ 2019ರಲ್ಲಿಯೇ 10ನೇ ತರಗತಿಯ ಪರೀಕ್ಷೆಯನ್ನ ತೆಗೆದುಕೊಂಡಿದ್ದರು. ಆದರೆ ಇಂಗ್ಲಿಷ್ ಪರೀಕ್ಷೆಯನ್ನ ಅವರು ಬರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹರಿಯಾಣ ಸ್ಕೂಲ್ ಎಜುಕೇಷನ್ ಬೋರ್ಡ್ 12ನೇ ತರಗತಿ ಪರೀಕ್ಷೆ ಫಲಿತಾಂಶವನ್ನ ತಡೆಹಿಡಿದಿತ್ತು. ಹೀಗಾಗಿ ಕಳೆದ ಆಗಸ್ಟ್ನಲ್ಲಿ ಔಟಾಲಾ ಇಂಗ್ಲಿಷ್ ಪರೀಕ್ಷೆ ಬರೆದಿದ್ದರು. ಇದೀಗ 88 ಪರ್ಸೆಂಟ್ ಮಾರ್ಕ್ಸ್ ತೆಗೆದುಕೊಂಡು ತೇರ್ಗಡೆಯಾಗಿದ್ದಾರೆ.
ಬಚ್ಚನ್ ಟ್ವೀಟ್ ಮಾಡಿ ಏನಂದ್ರು..?
ಅಂದ್ಹಾಗೆ ಇವರಿಗೆ ಪರೀಕ್ಷೆ ಬರೆಯಲು ಸ್ಫೂರ್ತಿ ನೀಡಿದ್ದು ‘ದಸ್ವಿ’ ಅನ್ನೋ ಸಿನಿಮಾ. ನೇಮಕಾತಿ ಹಗರಣದಲ್ಲಿ ಇವರು ತಿಹಾರ ಜೈಲು ಸೇರಿದ್ದರು. ಈ ವೇಳೆ ಅಭಿಷೇಕ್ ಬಚ್ಚನ್ ಮತ್ತು ನಮೃತಾ ಕೌರ್ ಅಭಿನಯ ದಸ್ವಿ ಚಿತ್ರವನ್ನ ಜೈಲಿನಲ್ಲಿ ತೋರಿಸಲಾಗಿತ್ತಂತೆ. ಈ ಚಿತ್ರವನ್ನ ನೋಡಿದ ಬಳಿಕ 10ನೇ ತರಗತಿ ಪರೀಕ್ಷೆ ಬರೆಯುವ ನಿರ್ಧಾರವನ್ನ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ಇದೀಗ ಪರೀಕ್ಷೆ ಪಾಸ್ ಮಾಡಿರುವ ಸುದ್ದಿಯನ್ನ ಕೇಳಿದ ಕೂಡಲೇ ಇಬ್ಬರು ತಾರೆಯರು ಟ್ವೀಟ್ ಮಾಡಿ ಚೌಟಾಲರಿಗೆ ವಿಶ್ ಮಾಡಿದ್ದಾರೆ.
Badhai!!! #Dasvi https://t.co/ATarQf0AfD
— Abhishek 𝐁𝐚𝐜𝐡𝐜𝐡𝐚𝐧 (@juniorbachchan) May 10, 2022
Absolutely marvellous!! Age is truly only a digit or two. 🙏🏼🥳👏🏼 https://t.co/3oQ74vfnHH
— Nimrat Kaur (@NimratOfficial) May 10, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post