ಜನಮೆಚ್ಚಿದ ಕಿಂಗ್ ವಿರಾಟ್ ಕೊಹ್ಲಿಗೆ ಸಂಬಂಧಿಸಿದ 4 ಆಸಕ್ತಿದಾಯಕ ಫೋಟೋಗಳನ್ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. 4 ಮುದ್ದಾದ ಫೋಟೋಗಳು ಇವಾಗಿದ್ದು, ಒಂದೊಂದು ಫೋಟೋ ಕೂಡ ಒಂದೊಂದು ಕಥೆಯನ್ನ ಹೇಳ್ತಿವೆ.
ಐಪಿಎಲ್ ಬ್ಯುಸಿ ಸೆಡ್ಯೂಲ್ನಲ್ಲಿ ಮುಳುಗಿರುವ ವಿರಾಟ್, ಮೈದಾನದಲ್ಲಿಯೇ ಹೆಚ್ಚಿನ ಸಮಯವನ್ನ ಕಳೆಯುತ್ತಿದ್ದಾರೆ. ಅದರಂತೆ ಮೈದಾನದಲ್ಲಿ ನಾಯಿ ಜೊತೆ ಕೀಟಲೆ ಮಾಡುತ್ತಿರುವ ಫೋಟೋಗಳು ಇವಾಗಿದೆ. ಮೈದಾನದಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದಾಗ ವಿರಾಟ್ ಇದ್ದಲ್ಲಿಗೆ ನಾಯಿಯೊಂದು ಬಂದಿದೆ.
ನಾಯಿಯನ್ನ ಆತ್ಮೀಯವಾಗಿ ಬರಮಾಡಿಕೊಂಡ ಕೊಹ್ಲಿ, ಫ್ರೆಂಡ್ ಮಾಡಿಕೊಂಡು ಶೇಕ್ ಹ್ಯಾಂಡ್ ನೀಡುವಂತೆ ಕೇಳಿದ್ದಾರೆ. ಕೊನೆಗೂ ನಾಯಿಯನ್ನ ಕಂಪರ್ಟ್ ಝೋನ್ಗೆ ಕರೆದುಕೊಂಡು ಬಂದ ಕೊಹ್ಲಿ, ಅದರ ಜೊತೆ ತಮಾಷೆ ಮಾಡಲು ಮುಂದಾಗಿದ್ದಾರೆ. ಅದರ ಕಣ್ಣು, ಮೂಗುಗಳನ್ನ ಮುಟ್ಟಿ, ಮುಟ್ಟಿ ಮಾತನಾಡಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗ್ತಿದೆ.
ಅಂದ್ಹಾಗೆ ವಿರಾಟ್ ಕೊಹ್ಲಿಗೆ ಶ್ವಾನಗಳನ್ನ ಕಂಡ್ರೆ ಎಲ್ಲಿಲ್ಲ ಪ್ರೀತಿ. ಇಂದು ಆರ್ಸಿಬಿ ಕೊಹ್ಲಿ ಅವರ ಸಂದರ್ಶನ ಒಂದನ್ನ ಶೇರ್ ಮಾಡಿದೆ. ಅಲ್ಲಿ, ಪ್ರಾಣಿಗಳ ಬಗ್ಗೆ ಮಾತನಾಡಿರುವ ವಿರಾಟ್.. ನನಗೆ ಶ್ವಾನಗಳು ಅಂದ್ರೆ ತುಂಬಾ ಇಷ್ಟ. ಆದರೆ ಸದ್ಯ ನಾನು ಯಾವುದೇ ಪ್ರಾಣಿಗಳನ್ನ ಸಾಕಿಲ್ಲ. ಯಾಕಂದ್ರೆ ತುಂಬಾ ಬ್ಯೂಸಿ ಸೆಡ್ಯೂಲ್ ಇರೋದ್ರಿಂದ ನನಗೆ ಅವುಗಳಿಗೆ ಸಮಯ ನೀಡಲು ಆಗುತ್ತಿಲ್ಲ ಎಂದು ವಿರಾಟ್ ಹೇಳಿದ್ದಾರೆ.
ಇನ್ನೊಂದು ವಿಶೇಷ ಅಂದ್ರೆ ವಿರಾಟ್ ಕೊಹ್ಲಿ ಮಾತ್ರವಲ್ಲ ಅವರ ಪತ್ನಿ ಅನುಷ್ಕ ಶರ್ಮಾರಿಗೂ ನಾಯಿ ಅಂದ್ರೆ ತುಂಬಾ ಇಷ್ಟ. ಪ್ರಾಣಿಗಳನ್ನ ಆಳವಾಗಿ ಇಷ್ಟಪಡುವ ಈ ಕಪಲ್, ಮುಂಬೈನಲ್ಲಿ ಎರಡು ‘ಅನಿಮಲ್ ಶೆಲ್ಟರ್’ಗಳನ್ನ ತೆರೆದಿದ್ದಾರೆ. ಇದರ ನಿರ್ವಹಣೆಯನ್ನ ಅನುಷ್ಕಾ ಶರ್ಮಾ ನೋಡಿಕೊಳ್ತಿದ್ದಾರೆ. ಬೆಂಗಳೂರಿನ ಜೊತೆ ಭಾರೀ ನಂಟು ಹೊಂದಿರೋ ವಿರುಷ್ಕಾ, ಇಲ್ಲಿಗೆ ಬಂದಾಗೆಲ್ಲಾ ‘ಅನಿಮಲ್ ಶೆಲ್ಟರ್’ಗಳಿಗೆ ಬಿಡುವಿದ್ದಾಗ ಭೇಟಿ ನೀಡ್ತಾರಂತೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post