ನಾಗಿಣಿ 2 ಧಾರಾವಾಹಿಯಲ್ಲಿ ಮೇನ್ ಅಟ್ರ್ಯಾಕ್ಷನ್ ಅಂದರೆ ನಮ್ರತಾ. ಅವ್ರ ಹಾವಾ ಭಾವಕ್ಕೆ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸೀರಿಯಲ್ಕ್ಕಿಂತ ಹೆಚ್ಚು ಇಷ್ಟಪಡೊದು ನಮ್ರತಾ ಅವರನ್ನು. ಅವರ ಸ್ಟೈಲ್ ಲುಕ್ಗೆ ಹುಡುಗರು ಕ್ಲೀನ್ ಬೋಲ್ಡ್. ಹುಡುಗರಿಗಿಂತ ಹೆಚ್ಚು ಹುಡುಗಿಯರೇ ನಮ್ರತಾಗೆ ಫ್ಯಾನ್ಸ್.
ನಮ್ರತಾ ಕೂಡ ಅಷ್ಟೇ ಫ್ಯಾನ್ಸ್ಗೆ ನಿರಾಸೆ ಮಾಡಲ್ಲ. ಅವರು ಎಲ್ಲಿಗೆ ಹೋಗ್ಲಿ ಏನೇ ಮಾಡ್ಲಿ ಎಲ್ಲದ್ರ ಅಪ್ಡೇಟ್ಸ್ ಕೊಡ್ತಾನೆ ಇರ್ತಾರೆ. ಮೊನ್ನೆಯಷ್ಟೇ ಥೈಲೆಂಡ್ಗೆ ಹಾರಿದ್ದ ಈ ಬ್ಯೂಟಿ ಈಗ ಕಾಶ್ಮೀರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹಿಮಾಲಯದ ಪರ್ವತಗಳ ನಡುವೆ ಶಿಲಾ ಬಾಲಕಿಯಂತೆ ಕಾಣ್ತಿದ್ದಾರೆ.
ಸ್ನೇಹಿತೆ ಜೊತೆ ಕಾಶ್ಮೀರದ ಕಣಿವೆ ಸುತ್ತುತ್ತಿದ್ದಾರೆ ನಮ್ರತಾ. ಕಾಶ್ಮೀರದ ಫೇಮಸ್ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಜಮ್ಮು ಕಾಶ್ಮೀರ ಅನಂತ್ನಾಗ್ ಜಿಲ್ಲೆ ಪಹಲಗಮ್ ಟೌನ್ಗೆ ಭೇಟಿ ನೀಡಿದ್ದು, ಸ್ವಿಜರ್ಲ್ಯಾಂಡ್ ನೋಡ್ಬೇಕು ಅನ್ಕೊಂಡವ್ರು ಇಲ್ಲಿಗೆ ಭೇಟಿ ನೀಡಿದ್ರೇ ಸಾಕು ಆ ಅನುಭವ ಸಿಗುತ್ತೆ ಅಂತಾ ತಮ್ಮ ಇನ್ಸ್ಟಾ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಲೈಫ್ ಈಸ್ ಬ್ಯೂಟಿಫುಲ್ ಅಂತಾ ಹೇಳ್ತಾನೆ ಹಾಗೇ ಬದುಕುತ್ತಿದ್ದಾರೆ ನಮ್ರತಾ. ಟ್ರಾವೆಲ್ ಮಾಡೊದಂದ್ರೇ ಸಖತ್ ಕ್ರೇಜ್ . ಹೀಗಾಗಿನೇ ಶೂಟಿಂಗ್ನಿಂದ ಸ್ವಲ್ಪ ಬಿಡುವು ಸಿಕ್ರೆ ಸಾಕು ಹೊಸ ಹೊಸ ಸ್ಥಳಗಳಿಗೆ ಹೊರಟು ಬಿಡ್ತಾರೆ. ಇದಕ್ಕೆ ಈ ಫೋಟೋಸ್ಗಳೇ ಸಾಕ್ಷಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post