ಅಷ್ಟದಿಕ್ಕುಗಳಿಂದಲೂ ಸಮುದ್ರ ಸುತ್ತುವರಿದಿದ್ರೂ ಕುದೀತಿದೆ ಶ್ರೀಲಂಕಾ. ಜನರ ತಾಳ್ಮೆ, ಸಹನೆಗೂ ಒಂದು ಮಿತಿ ಅನ್ನೋದು ಇರುತ್ತೆ. ಆ ತಾಳ್ಮೆಯ ಕಟ್ಟೆ ಒಡೆದ್ರೆ ಏನಾಗುತ್ತೆ ಅನ್ನೋದಕ್ಕೆ ಶ್ರೀಲಂಕಾದ ಇಂದಿನ ಪರಿಸ್ಥಿತಿಯೇ ಜೀವಂತ ಉದಾಹರಣೆ. ಆರ್ಥಿಕವಾಗಿ ಅಕ್ಷರಶಃ ಬೆಂದು ಹೋಗಿರೋ ದ್ವೀಪ ರಾಷ್ಟ್ರ ಈಗ ಜಾನಾಕ್ರೋಶದ ಜ್ವಾಲೆಯಲ್ಲಿ ಧಗಧಗನೆ ಉರಿಯುತ್ತಿದೆ. ಪ್ರತಿಭಟನಾಕಾರರ ಕಿಚ್ಚಿಗೆ ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗ್ತಿದೆ.
ಮನೆಗಳು ಧಗಧಗನೆ ಹೊತ್ತಿ ಉರಿಯುತ್ತಿವೆ. ಬೆಂಕಿಯ ಹೊಗೆ ಆಕಾಶವನ್ನೂ ಮೀರಿ ಮುಂದೋಗ್ತಿದ್ಯಾ ಎನ್ನುವಂತೆ ಭಾಸವಾಗ್ತಿದೆ. ವಾಹನಗಳನ್ನ ಸುಟ್ಟು ಕರಕಲು ಮಾಡಲಾಗ್ತಿದೆ. ಜೆಸಿಬಿಗಳ ಅಬ್ಬರಕ್ಕೆ ಬ್ರೇಕ್ ಹಾಕೋಕ್ ಯಾರೂ ಇಲ್ಲ. ರಸ್ತೆ ಪಕ್ಕ ಇರೋ ವೆಹಿಕಲ್ಸ್ನ ಹಳ್ಳಕ್ಕೆ ನೂಕಲಾಗ್ತಿದೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗಳನ್ನ ಕಾಪಾಡೋರೇ ಇಲ್ಲದಂತಾಗಿದೆ. ಒಬ್ಬರ ಮೇಲೋಬ್ಬರ ಮಾರಾಣಾಂತಿಕ ಹಲ್ಲೆ. ಲಂಕಾ ಅಕ್ಷರಶಃ ದಹನವಾಗ್ತಿದೆ. ಶ್ರೀಲಂಕಾದಲ್ಲಿ ಜನಾಕ್ರೋಶ ಉಗ್ರ ರೂಪ ಪಡೆದುಕೊಳ್ತಿದೆ. ಶ್ರೀಲಂಕಾ ಜನರ ದಂಗೆಯ ಕಿಚ್ಚು ಯಾವ ಮಟ್ಟಿಗಿದೆಯಂದ್ರೆ ಪೊಲೀಸ್ ಸರ್ಪಗಾವಲನ್ನೂ ಭೇದಿಸಿಕೊಂಡು ಪ್ರತಿಭಟನಾಕಾರರು ಜೀವವನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿದ್ದಾರೆ. ಅಂದು ಸೀತೆಯನ್ನು ಕರೆತರಲು ಆಂಜನೇಯ ತನ್ನ ಬಾಲಕ್ಕೆ ಬೆಂಕಿ ಹಚ್ಚಿಕೊಂಡು ಇಡೀ ಲಂಕಾವನ್ನೇ ದಹನ ಮಾಡಿದ್ದ. ಬಟ್ ಇಂದು ಲಂಕಾ ತನ್ನ ಬಾಲಕ್ಕೆ ತಾನೇ ಕಿಡಿ ಹೊತ್ತಿಸಿಕೊಂಡು ಬೆಂದು ಹೋಗ್ತಿದೆ.
ಆರ್ಥಿಕ ಅಧಃಪತನದಿಂದ ಬೆಂದು ಹೋಗ್ತಿದೆ ಶ್ರೀಲಂಕಾ!
ನೆರೆಯ ರಾಷ್ಟ್ರವಾಗಿರೋ ಶ್ರೀಲಂಕಾ ಇಂದು ಯಾರೂ ನಿರೀಕ್ಷೆ ಮಾಡಲು ಸಾಧ್ಯವಾಗದ ಮಟ್ಟಿಗೆ ದಹಿಸಿ ಹೋಗ್ತಿದೆ. ಕಣ್ಣು ಹಾಯಿಸಿದೆಲ್ಲೆಲ್ಲಾ ಬೆಂಕಿ ಕಾಣಿಸ್ತಿದೆ. ಇದಕ್ಕೆಲ್ಲ ಕಾರಣ ಲಂಕಾದ ಆರ್ಥಿಕ ಅಧಃಪತನ. ಹೌದು ಆರ್ಥಿಕವಾಗಿ ಶ್ರೀಲಂಕಾ ದಿವಾಳಿಯಾಗಿ ಬಿಟ್ಟಿದೆ. ಅದು ಯಾವ ಮಟ್ಟಿಗೆ ಅಂದ್ರೆ ವಿದೇಶದಿಂದ ಪೆಟ್ರೋಲ್, ಡೀಸೆಲ್ ಆಮದು ಮಾಡಿಕೊಳ್ಳಲೂ ಸಾಧ್ಯವಾಗ್ತಿಲ್ಲ. ಆಹಾರ ಪದಾರ್ಥಗಳನ್ನು ತರಿಸಿಕೊಳ್ಳಲಾಗ್ತಿಲ್ಲ. ದಿನ ಬಳಕೆಯ ವಸ್ತುಗಳನ್ನ ದೇಶಕ್ಕೆ ತರಲಾಗ್ತಿಲ್ಲ. ಅಲ್ಪ ಸ್ವಲ್ಪ ಇರೋ ಆಹಾರ ಪದಾರ್ಥ, ದಿನಬಳಕೆಯ ವಸ್ತುಗಳು ಹತ್ತಾರು ಪಟ್ಟು ಏರಿಕೆಯಾಗಿ ಬಿಟ್ಟಿವೆ. ನೀವೇ ಹೇಳಿ, ಇಂತಹ ಸಂದರ್ಭದಲ್ಲಿ ಯಾರಿಗೆ ತಾನೇ ಸಹನೆ ಇರುತ್ತೆ? ಆದ್ರೂ ಲಂಕಾ ಜನ ಆರಂಭದಲ್ಲಿ ಸಹನೆಯಿಂದಲೇ ಇದ್ರು. ಅವರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದ್ದೇ ರಾಜಕಾರಣಿಗಳು. ಇದೇ ಕಾರಣಕ್ಕೆ ಈಗ ಎಲ್ಲಾ ಕಡೆ ದಹನವೇ ಕಾಣಿಸ್ತಿದೆ.
ಹೊತ್ತಿ ಉರಿದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ನಿವಾಸ!
ಲಂಕಾ ಜನರ ಆಕ್ರೋಶ ಎಷ್ಟರ ಮಟ್ಟಿಗಿದೆ ಅಂದ್ರೆ, ಒಂದೇ ಬಾರಿಗೆ ನೂರಾರು ಟಿಎಂಸಿ ಸಂಗ್ರವಾಗಿರೋ ಡ್ಯಾಮ್ ಬ್ಲಾಸ್ಟ್ ಆದ ರೀತಿ. ಆರ್ಥಿಕ ಪರಿಸ್ಥಿತಿ ಹದಗೆಡ್ತಾ ಇದ್ದ ಸಂದರ್ಭದಲ್ಲಿಯೇ ಪ್ರತಿಪಕ್ಷಗಳು ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿದ್ರು. ಹಾಗೇ ಪರಿಸ್ಥಿತಿ ಮತ್ತಷ್ಟು ಕೆಟ್ಟು ಹೋಗ್ತಾ ಇದ್ದಂತೆ ಜನ ಪ್ರತಿಭಟನೆಗೆ ಧುಮುಕಿದ್ರು. ದೇಶ ಈ ರೀತಿ ನಾಶವಾಗಲು ಕಾರಣವಾಗಿರೋ ಪ್ರಧಾನಿ ರಾಜೀನಾಮೆ ನೀಡ್ಬೇಕು ಅಂತ ಪ್ರಜಾಪ್ರಭುತ್ವದ ಪ್ರಭುಗಳಾಗಿರೋ ಪ್ರಜೆಗಳೇ ಕೇಳಿಕೊಂಡಿದ್ರು. ಆದ್ರೆ, ಪ್ರತಿಭಟನೆ ಹತ್ತಿಕ್ಕಬೇಕು ಅಂತ ಸರ್ಕಾರ ತುರ್ತು ಪರಿಸ್ಥಿತಿ ಜಾರಿಗೆ ತಂತು, ಕರ್ಫ್ಯೂ ಹೇರಿಕೆ ಮಾಡ್ತು. ಬಟ್, ಜನ ಸುಮ್ಮನೇ ಇರ್ತಾರಾ? ರೊಚ್ಚಿಗೆದ್ರು, ಮಹಿಂದಾ ರಾಜಪಕ್ಸ ಮನೆಗೂ ನುಗ್ಗಿ ಬೆಂಕಿ ಹಚ್ಚಿದ್ರು. ನೋಡ್ತಾ ನೋಡ್ತಾ ಇರುವಂತೆ ಬೆಂಕಿ ಇಡೀ ಮನೆಗೆ ಆವರಿಸಿಕೊಳ್ತು. ಕ್ಷಣಕಾಲದಲ್ಲಿಯೇ ಮನೆ ಪೂರ್ತಿ ಭಸ್ಮವಾಗಿ ಹೋಯ್ತು. ಅದೃಷ್ಟವಶಾತನ್, ಪ್ರಧಾನಿ ಮಹಿಂದಾ ರಾಜಪಕ್ಸ ಆಗ್ಲಿ, ಕುಟುಂಬದವರಾಗ್ಲಿ ಮನೆಯಲ್ಲಿ ಇರಲ್ಲಿಲ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕುಟುಂಬವನ್ನು ಭದ್ರತಾ ಸಿಬ್ಬಂದಿ ಸ್ಥಳಾಂತರ ಮಾಡಿದ್ರು. ಇದೀಗ ರಾಜಪಕ್ಸ ಮತ್ತು ಕುಟುಂಬದವರು ನೌಕಾನೆಲೆಯಲ್ಲಿ ಆಶ್ರಯ ಪಡಿದಿದ್ದಾರೆ ಅನ್ನೋ ಮಾಹಿತಿ ಇದೆ. ಪ್ರತಿಭಟನಾಕಾರರು ಇಲ್ಲಿಗೂ ಬಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ಕಚೇರಿ ಮೇಲೆ ದಾಳಿ!
ಲಂಕಾದಲ್ಲಿ ಜನ ಯಾವ ಪ್ರಮಾಣದಲ್ಲಿ ರೊಚ್ಚಿಗೆದ್ದಿದ್ದಾರೆ ಅಂದ್ರೆ ಅಧ್ಯಕ್ಷ, ಪ್ರಧಾನಿಗಳ ನಿವಾಸವನ್ನೇ ಬಿಡುತ್ತಿಲ್ಲ. ಪೊಲೀಸರ ಲಾಠಿಗೆ, ಮಿಲಿಟರಿಯವರ ಮದ್ದು ಗುಂಡುಗಳ ಸದ್ದಿಗೂ ಕ್ಯಾರೇ ಮಾಡ್ತಿಲ್ಲ. ಸೋಮವಾರ ನೂರಾರು ಜನರಿರೋ ಗುಂಪೊಂದು ಅಧ್ಯಕ್ಷ ಗೊಟಬಯ ರಾಜಪಕ್ಸ ಕಚೇರಿಗೆ ನುಗ್ಗಲು ಯತ್ನಿಸಿತ್ತು. ತಕ್ಷಣವೇ ಅಲ್ಲಿರೋ ಪೊಲೀಸ್ ಮತ್ತು ಮಿಲಿಟರಿ ಪಡೆ ಯತ್ನಿಸಿವೆ. ಆ ಸಂದರ್ಭದಲ್ಲಿ ದೊಡ್ಡ ಸಂಘರ್ಷವೇ ಉಂಟಾಗಿದೆ. ಅಂತೂ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸೈನಿಕರು ಯಶಸ್ವಿಯಾದ್ರು. ಈ ಘರ್ಷಣೆಯಲ್ಲಿ ಸುಮಾರು 130ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಅಂದ್ರೆ ಈ ಘಟನೆಯ ಬೆನ್ನಲ್ಲೇ ಪ್ರಧಾನಿ ಮಹಿಂದಾ ರಾಜಪಕ್ಸ ತನ್ನ ಸಹೋದರ, ಅಧ್ಯಕ್ಷ ಗೊಟಬೊಯಾ ರಾಜಪಕ್ಸಗೆ ರಾಜೀನಾಮೆ ನೀಡಿದ್ದಾರೆ. ಅದು, ಅಂಗೀಕಾರವೂ ಆಗಿದೆ.
‘ಟಾರ್ಗೆಟ್’ ಗವರ್ನಮೆಂಟ್
- ಶ್ರೀಲಂಕಾ ಪೀಪಲ್ಸ್ ಫ್ರೀಡಂ ಅಲಯನ್ಸ್‌ನಿಂದ ಆಡಳಿತ
- ಪ್ರತಿಭಟನಾಕಾರರಿಗೆ ಆಡಳಿತ ಪಕ್ಷದವರೇ ಟಾರ್ಗೆಟ್
- ಸಂಸದ, ಶಾಸಕರ ಮನೆ, ಕಚೇರಿ, ವಾಹನಗಳಿಗೆ ಬೆಂಕಿ
- ಆಡಳಿತ ಪಕ್ಷದ ಮುಖಂಡರನ್ನು ಬಿಡ್ತಾ ಇಲ್ಲ ಉದ್ರಿಕ್ತರು
- ಜನಪ್ರತಿನಿಧಿಗಳಿಗೆ ಸಂಚಾರಕ್ಕೂ ಅವಕಾಶ ಕೊಡ್ತಿಲ್ಲ
- ಹಿಂಸಾಚಾರ, ಕಲ್ಲು ತೂರಾಟದಿಂದ ಪರಿಸ್ಥಿತಿ ಭುಗಿಲು
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ‘ಶ್ರೀಲಂಕಾ ಪೀಪಲ್ಸ್ ಫ್ರೀಡಂ ಅಲಿಯನ್ಸ್ ಪಕ್ಷ ಆಡಳಿತ ನಡೆಸುತ್ತಿದೆ. ಇದೀಗ ಪ್ರತಿಭಟನೆ ಮಾಡ್ತಾ ಇರೋ, ದಂಗೆ ಎದ್ದಿರೋ ಜನರಿಗೆ ಆಡಳಿತ ಪಕ್ಷದವರೇ ಟಾರ್ಗೆಟ್ ಆಗಿದ್ದಾರೆ. ಸಂಸದರ, ಶಾಸಕರ ಮನೆ, ಕಚೇರಿ, ವಾಹನಗಳಿಗೆ ಬೆಂಕಿ ಹಚ್ತಾ ಇದ್ದಾರೆ. ಇನ್ನು, ಸಂಸದರು ಶಾಸಕರು ಅಲ್ಲದಿದ್ರೂ ಆಡಳಿತ ಪಕ್ಷದ ಮುಖಂಡರನ್ನೂ ಉದ್ರಿಕ್ತರು ಬಿಡ್ತಾ ಇಲ್ಲ. ಜನಪ್ರತಿನಿಧಿಗಳಿಗೆ ರಸ್ತೆಯಲ್ಲಿ ಸಂಚಾರ ಮಾಡೋದಕ್ಕೂ ಅವಕಾಶ ನೀಡ್ತಾ ಇಲ್ಲ. ಇಂತಹ ಪರಿಸ್ಥಿತಿ ಸದ್ಯ ಇಡೀ ಲಂಕಾ ತುಂಬಾ ಭುಗಿಲೆದ್ದಿದೆ. ಹಿಂಸಾಚಾರ, ಕಲ್ಲು ತೂರಾಟ, ಬೆಂಕಿ ಸಾವು ನೋವು ಕಾಮನ್ ಆಗಿ ಬಿಟ್ಟಿದೆ.
ನಮ್ಮ ದೇಶದ ಜೊತೆ ಭಾವನಾತ್ಮಕ ಸಂಬಂಧ ಇಟ್ಕೊಂಡಿರೋ ಲಂಕಾದಲ್ಲಿ ಇಂತಹ ಪರಿಸ್ಥಿತಿ ನೋಡ್ಲಾಗದ್ದು. ಒಂದು ಕಡೆ ಜನ ಅನ್ನ ಆಹಾರವಿಲ್ಲದೇ ಹಸಿವಿನಿಂದ ಸಾಯುವ ಪರಿಸ್ಥಿತಿ ಇದ್ರೆ, ಮತ್ತೊಂದು ಕಡೆ ಆಹಾರ ಪದಾರ್ಥ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ಕೈಯಲ್ಲಿ ಕೆಲಸವೂ ಇಲ್ಲ ಕಾಸೂ ಇಲ್ಲ. ಇಂತಹ ಸಂದರ್ಭದಲ್ಲಿಯೇ ಜನ ರೊಚ್ಚಿಗೆದ್ದಿದ್ದಾರೆ. ಇದಕ್ಕೆಲ್ಲಾ ಆಡಳಿತ ನಡೆಸ್ತಿರೋ ಸರ್ಕಾರವೇ ಕಾರಣ ಅಂತಾ ಆ ಪಕ್ಷದ ವಿರುದ್ಧ ದಂಗೆ ಎದ್ದಿದ್ದಾರೆ. ಸದ್ಯ ಶ್ರೀಲಂಕಾ ಸ್ಥಿತಿಯನ್ನು ನೋಡಿದ್ರೆ ತಣ್ಣಗಾಗೋ ಲಕ್ಷಣವಂತೂ ಇಲ್ಲ.
ಜನಾಕ್ರೋಶ ಹತ್ತಿಕ್ಕಲು ದೇಶಾದ್ಯಂತ ಕರ್ಫ್ಯೂ ಜಾರಿ
ಲಂಕಾದಲ್ಲಿ ಕುಸಿಯುತ್ತಿರೋ ಆರ್ಥಿಕ ಪರಿಸ್ಥಿತಿ ಕೈಗೆ ಸಿಗ್ತಾ ಇಲ್ಲ ಅನ್ನೋದು ಆಡಳಿತ ಪಕ್ಷಕ್ಕೆ ಗೊತ್ತಿತ್ತು. ಇದೇ ಕಾರಣಕ್ಕೆ ಜನ ಪ್ರತಿಭಟನೆ ಮಾಡ್ತಾರೆ, ದಂಗೆ ಏಳ್ತಾರೆ ಅಂತ ತುರ್ತುಪರಿಸ್ಥಿತಿ ಜಾರಿಗೆ ತಂದಿತ್ತು. ಬಟ್, ದಿನ ಕಳೆದಂತೆ ಪರಿಸ್ಥಿತಿ ಹದಗೆಡ್ತಾ ಹೋಯ್ತು, ಜನ ತಾಳ್ಮೆ ಕಳೆದುಕೊಂಡ್ರು. ಇದೀಗ ಕಂಡ ಕಂಡದಲ್ಲಿ ಬೆಂಕಿ ಹಚ್ತಾ ಇದ್ದಾರೆ. ಕಲ್ಲು ತೂರಾಟ ಮಾಡ್ತಿದ್ದಾರೆ. ಜನಾಕ್ರೋಶ ನಿಯಂತ್ರಿಸೋದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಬಿಟ್ಟಿದೆ. ಸದ್ಯಕ್ಕೆ ಕರ್ಫ್ಯೂ ಜಾರಿ ಮಾಡ್ಲಾಗಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡ್ಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post