‘1 ವರ್ಷದೊಳಗೆ ಮೊಮ್ಮಗನನ್ನು ಕೊಡಿ, ಇಲ್ಲದೇ ಹೋದಲ್ಲಿ 5 ಕೋಟಿ ಪರಿಹಾರ ನೀಡಿ’ ಎಂದು ಮಗನ ವಿರುದ್ಧವೇ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಸ್.ಆರ್ ಪ್ರಸಾದ್ ಎಂಬುವರು ಮತ್ತವರ ಹೆಂಡತಿ ಹೀಗೆ ತಮ್ಮ ಮಗ ಮತ್ತು ಸೊಸೆ ವಿರುದ್ಧವೇ ಉತ್ತರಾಖಂಡದ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
ನನ್ನ ಮಗನಿಗೆ ನನ್ನ ಬಳಿಯಿದ್ದ ಎಲ್ಲಾ ನೀಡಿದ್ದೇನೆ. ಆತನಿಗೆ ಅಮೆರಿಕಾದಲ್ಲಿ ಓದಿಸಿ ತರಬೇತಿ ಕೂಡ ಕೊಡಿಸಿದ್ದೇನೆ. ಈಗ ನನ್ನ ಬಳಿ ದುಡ್ಡಿಲ್ಲ. ಮನೆ ಕಟ್ಟೋಕೆ ಬ್ಯಾಂಕ್ನಿಂದ ಸಾಲ ಪಡೆದಿದ್ದೇವೆ. ನಾವು ಆರ್ಥಿಕ ಸಂಕಷ್ಟದಲ್ಲಿದ್ದೇವೆ ಎಂದರು ಪ್ರಸಾದ್.
ಮಗನಿಗೆ 2016ರಲ್ಲಿ ಮದುವೆ ಮಾಡಿಸಿದ್ದೇನೆ. ಮೊಮ್ಮಕ್ಕಳು ನೋಡೋ ಬಯಕೆ ಇದೆ. ನಮಗೆ ಮೊಮ್ಮಗು ಬೇಕು. ಇಲ್ಲದೇ ಹೋದರೆ ಮಗ ಹಾಗೂ ಸೊಸೆ ತಲಾ 2.5 ಕೋಟಿ ರೂ ಪರಿಹಾರ ನೀಡಲಿ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post