ಕೊಪ್ಪಳ: ಆಶಾ ಕಾರ್ಯಕರ್ತೆ ಎಂದು ಹೇಳಿಕೊಂಡು ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ದೋಚಿದ ಘಟನೆ ಜಿಲ್ಲೆಯ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಗರ್ಭಿಣಿ ಮಹಿಳೆಯೊಬ್ಬಳು ಚಿಕಿತ್ಸೆ ಪಡೆಯಲು ಗಂಗಾವತಿ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರ ಹೆಸರಲ್ಲಿ ಬಂದ ಕಳ್ಳಿ, ಸ್ಕ್ಯಾನಿಂಗ್ ಮಾಡಿಸೋಣ ಬನ್ನಿ ಎಂದು ಆಸ್ಪತ್ರೆಯ ರೂಮ್ವೊಂದಕ್ಕೆ ಕರೆದುಕೊಂಡು ಹೋಗುವ ನಾಟಕ ಮಾಡಿದ್ದಾಳೆ. ಇದನ್ನ ನಂಬಿದ ಗರ್ಭಿಣಿ ಮಹಿಳೆ, ಕೊರಳಲ್ಲಿದ್ದ ಒಂದೂವರೆ ತೊಲೆ ಚಿನ್ನವನ್ನ ಆಕೆಯ ಬಳಿ ನೀಡಿದ್ದಾಳೆ.
ಇತ್ತ ಚಿನ್ನದ ಸರವನ್ನ ಕೈಗೆ ನೀಡುತ್ತಿದ್ದಂತೆ ಆಕೆಯ ಕಣ್ಣು ತಪ್ಪಿಸಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ನಂತರ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ಸಂತ್ರಸ್ತ ಮಹಿಳೆ ಸಿಸಿಟಿವಿಯನ್ನ ಆಧರಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ. ನಕಲಿ ಆಶಾ ಕಾರ್ಯಕರ್ತೆ ರಾಯಚೂರು ಜಿಲ್ಲೆಯ ಹಂಚಿನಾಳ ಗ್ರಾಮದ ನಿವಾಸಿ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post