ವಾರಣಸಿ: ಕಾಶಿ ವಿಶ್ವನಾಥ ಮಂದಿರದ ಮೂಲಸ್ಥಾನ ಎನ್ನಲಾಗಿರೋ ಗ್ಯಾನವಾಪಿ ಮಸೀದಿ ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೇ 17 ನೇ ತಾರೀಖಿನ ಒಳಗೆ ಸರ್ವೇ ಕಾರ್ಯ ಮುಗಿಸುವಂತೆ ಕೋರ್ಟ್ ಸೂಚಿಸಿದೆ. ಅಲ್ಲದೇ, ಸರ್ವೇ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲ್ಲ. ಬದಲಿಗೆ ಇನ್ನೊಬ್ಬ ಸರ್ವೇ ಅಧಿಕಾರಿ ಕೂಡ ಸಾಥ್ ನೀಡಲಿದ್ದಾರೆ ಎಂದು ಕೋರ್ಟ್ ತಿಳಿಸಿದೆ. ಅಲ್ಲದೇ ಮಸೀದಿಯ ನೆಲಮಾಳಿಗೆಯನ್ನು ಕೂಡ ಓಪನ್ ಮಾಡಿ ಸರ್ವೇ ನಡೆಸುವಂತೆ ಕೋರ್ಟ್ ಸೂಚಿಸಿದೆ.
ಈ ಹಿಂದೆ ಕೂಡ ವಿಡಿಯೋ ಸರ್ವೇ ನಡೆಸುವಂತೆ ಕೋರ್ಟ್ ಆದೇಶಿಸಿದ್ದರೂ, ಸ್ಥಳೀಯ ಮುಸ್ಲಿಮರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಗ್ಯಾನವ್ಯಾಪಿ ಮಸೀದಿ ಸರ್ವೇ ಕಾರ್ಯ ಸಾಧ್ಯವಾಗಿರಲಿಲ್ಲ.
ಏನಿದು ಕೇಸ್ ವಾದ-ಪ್ರತಿವಾದವೇನು?
ಹಿಂದೂಪರ ವಾದ
1. ಗ್ಯಾನವಾಪಿ ಮಸೀದಿಯಲ್ಲಿ ಹಿಂದೂ ದೇವರುಗಳಿವೆ
2. ದೇವರುಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು
3. ಇಡೀ ಸಂಕೀರ್ಣದ ಸರ್ವೇಕ್ಷಣೆ ನಡೆಯಬೇಕೆಂಬ ಬೇಡಿಕೆ
4. ಶೃಂಗಾರ್ ಗೌರಿ ವಿಗ್ರಹ ಇರುವುದು ಸಾಬೀತಾಗಬೇಕಿದೆ
5. ಸಾಬೀತುಪಡಿಸಲು ಮಸೀದಿಯೊಳಗೆ ಪ್ರವೇಶ ಮಾಡಬೇಕು
6. ಮಸೀದಿಗೆ ಹೋಗಿ ವಿಡಿಯೋ ಶೂಟ್ ಮಾಡಲು ಅನುಮತಿ
7. ಸರ್ವೇಕ್ಷಣಾ ತಂಡಕ್ಕೆ ಅನುವು ಮಾಡಿಕೊಡಬೇಕೆಂಬ ವಾದ
ಮುಸ್ಲಿಮ್ ಪರ ವಾದ
1. ಗ್ಯಾನವಾಪಿ ಮಸೀದಿಯ ಪಶ್ಚಿಮ ಭಾಗದ ಗೋಡೆ ಹೊರಗಿದೆ
2. ಗೋಡೆಯ ಹೊರಗಡೆ ಶೃಂಗಾರ್ ಗೌರಿ ವಿಗ್ರಹ ಇರುವುದು
3. ಮಸೀದಿಯೊಳಗೆ ವಿಡಿಯೋ ಶೂಟ್ಗೆ ಕೋರ್ಟ್ ಆದೇಶಿಸಿಲ್ಲ
4. ಬ್ಯಾರಿಕೇಡ್ ಆಚೆ ಇರುವ ಮಿತಿವರೆಗೆ ರೆಕಾರ್ಡಿಂಗ್ ಮಾಡಲಿ
5. ಗ್ಯಾನವಾಪಿ ಮಸೀದಿಯ ನಿರ್ವಹಣಾ ಸಮಿತಿಯಿಂದ ಸ್ಪಷ್ಟನೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post