ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಚೆನ್ನೈ ಫಸ್ಟ್ ಬ್ಯಾಟಿಂಗ್ ಮಾಡಲಿದೆ.
5 ಬಾರಿ ಚಾಂಪಿಯನ್ ಮುಂಬೈ ಆಡಿರೋ 11 ಪಂದ್ಯಗಳಲ್ಲಿ ಕೇವಲ 2 ಮಾತ್ರ ಗೆದ್ದಿದೆ. ಹೀಗಾಗಿ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ. ಇನ್ನೊಂದೆಡೆ ಮೂರಕ್ಕೆ ಮೂರು ಪಂದ್ಯಗಳನ್ನು ಪ್ಲೇ ಆಫ್ಗೆ ಪ್ರವೇಶಿಸಬೇಕು ಎಂದು ಚೆನ್ನೈ ಕಾದು ಕೂತಿದೆ. ಹೀಗಾಗಿ ಎರಡು ತಂಡಗಳಿಗೂ ಇದು ಪ್ರತಿಷ್ಠೆ ಪಂದ್ಯವಾಗಿದೆ.
ತಂಡಗಳು ಹೀಗಿವೆ..
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ರಮನ್‌ದೀಪ್ ಸಿಂಗ್, ಟಿಮ್ ಡೇವಿಡ್, ಕೀರನ್ ಪೊಲ್ಲಾರ್ಡ್, ಡೇನಿಯಲ್ ಸ್ಯಾಮ್ಸ್, ರವಿಚಂದ್ರನ್ ಅಶ್ವಿನ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ರಿಲೇ ಮೆರೆಡಿತ್.
ಚೆನ್ನೈ ಸೂಪರ್ ಕಿಂಗ್ಸ್: ಋುತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ), ಮೋಯಿನ್ ಅಲಿ, ಡ್ವೇನ್ ಬ್ರಾವೋ, ಸಿಮರ್‌ಜೀತ್ ಸಿಂಗ್, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post