ಸ್ಯಾಂಡಲ್ವುಡ್ನ ರಾಕಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಅವರನ್ನು ನೋಡೋಕೆ ಇಡೀ ಕರ್ನಾಟಕವೇ ಮುಗಿ ಬಿಳುತ್ತೆ. ಈಗ ಪ್ರತಿ ವೀಕೆಂಡ್ ಶಿವಣ್ಣರನ್ನ ನೋಡೋ ಭಾಗ್ಯ ಮಾಡಿ ಕೊಟ್ಟಿದೆ ಜೀ ಕನ್ನಡದ ಡಿಕೆಡಿ ವೇದಿಕೆ. ಸದ್ಯ ಶಿವಣ್ಣಗೆ ಹ್ಯಾಂಡ್ ಶೇಕ್ ಮಾಡೋ ಚಾನ್ಸ್ ಸಿಕ್ಕಿದ್ರೆ ಸಾಕಪ್ಪ ಅನ್ನೋ ಎಷ್ಟೋ ಜನ ಇದ್ದಾರೆ. ಆದರೆ ಈ ಸೀಸನ್ನ ಸ್ಪರ್ಧಿಗಳು ನಿಜಕ್ಕೂ ಪುಣ್ಯ ಮಾಡಿದ್ದಾರೆ ಕಂಡ್ರಿ. ಅವರ ಡ್ಯಾನ್ಸ್ಗೆ ಶಿವಣ್ಣ ಸರ್ ಕಡೆ ಜಡ್ಜ್ಮೆಂಟ್ ಪಡೆಯೋದು.
ಡ್ಯಾನ್ಸರ್ಗಳ ಕುಣಿತಕ್ಕೆ ಶಿವಣ್ಣ ಕಡೆಯಿಂದ ಚಪ್ಪಾಳೆ ತೆಗೆದುಕೊಳ್ಳೋದು ಖುಷಿಯ ವಿಚಾರ. ಈ ಬಾರಿ ಡಿಕೆಡಿಗೆ ಶಿವಣ್ಣನ ಎಂಟ್ರಿ ಇಂದ ಒಂದು ತೂಕ ಹೆಚ್ಚಿದೆ. ಈ ಬಾರಿ ಡಿಕೆಡಿ ವೇದಿಕೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ನಿಜಕ್ಕೂ ಶಿವಣ್ಣ ಎನರ್ಜಿಗೆ ಯಾರು ಮ್ಯಾಚ್ ಮಾಡೋಕೆ ಸಾಧ್ಯನೇ ಇಲ್ಲ. ಡಿಕೆಡಿಯಲ್ಲಂತೂ ಮಕ್ಕಳ ಜೊತೆ ಶಿವಣ್ಣ ಕೂಡ ಮಗುವಾಗಿ ಬಿಟ್ಟಿದ್ದಾರೆ.
ಕಂಟೆಸ್ಟೆಂಟ್ಗಳ ಪರ್ಫಾಮೆನ್ಸ್ ಇಷ್ಟ ಆದರೆ ಮನ ತುಂಬಿ ಅಪ್ರೀಷಿಯೇಟ್ ಮಾಡ್ತಾರೆ. ಅವರ ಜೊತೆ ವೇದಿಕೆ ಮೇಲೆ ಹೋಗಿ ಸಖತ್ ಎನರ್ಜಿಯಲ್ಲಿ ಎರಡು ಸ್ಟೆಪ್ ಹಾಕ್ತಾರೆ. ಅವರನ್ನು ಹಗ್ ಮಾಡಿ ಗೋಲ್ಡನ್ ಹ್ಯಾಟ್ ತೊಡಿಸಿ. ಉತ್ಸಾಹದ ನಗೆ ಬಿರ್ತಾರೆ ನಮ್ಮ ಶಿವಣ್ಣ. ಪರ್ಫಾಮೆನ್ಸ್ಗಳು ಇಷ್ಟ ಆದರೆ ಫೈರ್ ಬ್ರ್ಯಾಂಡ್ ಕೊಟ್ಟು ಪ್ರತಿ ಭಾರಿ ವೇದಿಕೆ ಮೇಲೋಗಿ ಅವರೊಟ್ಟಿಗೆ ಎನರ್ಜಿಯಲ್ಲಿ ಡ್ಯಾನ್ಸ ಮಾಡ್ತಾರೆ.. ಶಿವಣ್ಣ ಸರ್ಗೆ ಅಷ್ಟು ಎಜ್ ಆಗಿದ್ರು. ಸುಸ್ತೆ ಆಗದಂತೆ ಮನಸಾರೆ ಕುಣಿದು ಕುಪ್ಪಳಿಸುತ್ತಾರೆ. ಇವರೆಲ್ಲರ ಜೊತೆ ಮುಗ್ಧ ಮನಸ್ಸಿನ ಶಿವಣ್ಣ ಕೆಲವೊಮ್ಮೆ ಬಾವುಕರಗ್ತಾರೆ. ಅಮ್ಮನನ್ನು ನೆನೆದು ಶಿವಣ್ಣ ಅಕ್ಷರ ಸಹ ಕಣ್ಣಿರಿಟ್ಟರು.
ಒಟ್ಟಿನಲ್ಲಿ ಖುಷಿ-ದು:ಖದ ಜೊತೆಗೆ ವೇದಿಕೆಯ ಮೇಲೆ ರಂಗು ಮೂಡಿಸ್ತಾಯಿದ್ದಾರೆ ನಮ್ಮ ಸೆಂಚುರಿ ಸ್ಟಾರ್ ಶಿವಣ್ಣ. ಶಿವಣ್ಣ ಇರೋದ್ರಿಂದ ಡಿಕೆಡಿ ವೇದಿಕೆಯ ಕಳೆ ನೂರು ಪಟ್ಟು ಹೆಚ್ಚಿರೋದಂತೂ ಸುಳ್ಳಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post