ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-15ರಲ್ಲಿ, ಮೊದಲ ತಂಡವಾಗಿ ಗುಜರಾತ್ ಟೈಟನ್ಸ್ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಚೊಚ್ಚಲ ಐಪಿಎಲ್ನಲ್ಲೇ ಗುಜರಾತ್ ಸಕ್ಸಸ್ ಹಿಂದೆ, ಈ ಕನ್ನಡಿಗನ ಕೊಡುಗೆ ಅಪಾರ. ಅದು ಅಭಿನವ್ ಮನೋಹರ್ ಅಲ್ಲ.
ಗುಜರಾತ್ ಟೈಟನ್ಸ್.. ಐಪಿಎಲ್ಗೆ ಎಂಟ್ರಿ ಕೊಟ್ಟ ವರ್ಷದಲ್ಲೇ, ಸಕ್ಸಸ್ ಪೀಕ್ನಲ್ಲಿದೆ. ಚೊಚ್ಚಲ ಆವೃತ್ತಿಯಲ್ಲೇ ಬಲಿಷ್ಟ ತಂಡಗಳಿಗೆ ಚಳ್ಳೆ ಹಣ್ಣು ತಿನ್ನಿಸಿ, ಮೊದಲ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಈ ಯಶಸ್ಸಿನ ಹಿಂದೆ ತಂಡದ ಆಟಗಾರರು, ಸಪೋರ್ಟಿಂಗ್ ಸ್ಟಾಫ್ ಶ್ರಮ ಅಪಾರ. ಇದರ ಜೊತೆಗೆ ಕನ್ನಡದ ಒಬ್ಬ ಸ್ಪೆಷಲ್ ಪ್ಲೇಯರ್ ಕೂಡ, ಗುಜರಾತ್ ಸಕ್ಸಸ್ಗೆ ಕಾರಣರಾಗಿದ್ದಾರೆ.
ಟೈಟನ್ಸ್ ಯಶಸ್ಸಿನ ಹಿಂದಿರೋದು ಜೂನಿಯರ್ ಬೂಮ್ರಾ
ಥೇಟ್ ಜಸ್ಪ್ರಿತ್ ಬೂಮ್ರಾರಂತಹ ಆ್ಯಕ್ಷನ್. ಬೂಮ್ರಾರಷ್ಟೇ ಸ್ಪೀಡ್, ಬೂಮ್ರಾ ರೀತಿಯಲ್ಲೇ ನಿಖರ‘ ಯಾರ್ಕರ್..! ಇದು ನಮ್ಮ ಬೆಂಗಳೂರು ಗ್ರಾಮಾಂತರ ದೊಡ್ಡ ಬಳ್ಳಾಪುರ ತಾಲೂಕಿನ ಪ್ರತಿಭೆ ಮಹೇಶ್ ಕುಮಾರ್. ನೋಡೋಕೆ ಸಿಂಪಲ್ ಆಗಿದ್ರೂ, ಟ್ಯಾಲೆಂಟ್ಗೆ ಕೊರತೆಯೇ ಇಲ್ಲ. ಇವರೇ ನೋಡಿ ಗುಜರಾತ್ ಟೈಟನ್ಸ್ನ ಸಕ್ಸಸ್ ಸಿಕ್ರೇಟ್ ವೆಪನ್.
ಟೈಟನ್ಸ್ ಬ್ಯಾಟ್ಸ್ಮನ್ಗಳ ಸಕ್ಸಸ್ ಸೀಕ್ರೆಟ್ ಇದೇ ಮಹೇಶ್
ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ಬ್ಯಾಟ್ಸ್ಮನ್ಗಳೆಷ್ಟು ಅಪಾಯಕಾರಿಯಾಗಿದ್ದಾರೆ ಅನ್ನೋದನ್ನ ನಾವು ನೋಡಿದ್ದೇವೆ. ಇದಕ್ಕೆ ಟೈಟನ್ಸ್ ಬ್ಯಾಟ್ಸ್ಮನ್ಗಳ ಕಠಿಣ ಅಭ್ಯಾಸ ಕಾರಣ ಅನ್ನೋದನ್ನ ಮರೆಯುವಂತಿಲ್ಲ. ಅದರ ಜೊತೆ, ಇದೇ ಅಭ್ಯಾಸದ ವೇಳೆ ಬೌಲಿಂಗ್ ಮಾಡಿದ ನೆಟ್ ಬೌಲರ್ಸ್ ಬೆವರಿಗೂ, ಬೆಲೆಯಿದೆ ಅನ್ನೋದನ್ನ ಮರೆಯುವಂತಿಲ್ಲ. ಮುಖ್ಯವಾಗಿ ಜೂನಿಯರ್ ಬೂಮ್ರಾ ಮಹೇಶ್ ಕುಮಾರ್, ಪ್ರತಿ ಸೆಷನ್ ವೇಳೆಯೂ ಗಂಟೆಗಟ್ಟಲೇ ನೆಟ್ಸ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡ್ತಾರೆ. ಇದೇ ನೋಡಿ ಗುಜರಾತ್ ಬ್ಯಾಟ್ಸ್ಮನ್ಗಳ ಸಕ್ಸಸ್ಗೆ, ಅತಿ ಹೆಚ್ಚು ಸಹಾಯ ಮಾಡಿದ ಅಂಶ.
ಈ ಜೂನಿಯರ್ ಬೂಮ್ರಾಗೆ ಆಶಿಶ್ ನೆಹ್ರಾ ಗುರು
ಸದ್ಯ ನೆಟ್ ಬೌಲರ್ ಆಗಿ ಗುಜರಾತ್ ಟೈಟನ್ಸ್ನಲ್ಲಿರೋ ಮಹೇಶ್ ಕುಮಾರ್ ಪ್ರತಿಭೆಯನ್ನ ಮೊದಲು ಗುರುತಿಸಿದ್ದು, ಕೋಚ್ ಆಶಿಶ್ ನೆಹ್ರಾ. ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಆಗಿದ್ದ ನೆಹ್ರಾ, ನೆಟ್ಸ್ನಲ್ಲಿ ಮಹೇಶ್ ಬೌಲಿಂಗ್ ಮಾಡೋದು ನೋಡಿ, ಇಂಪ್ರೆಸ್ ಆಗಿದ್ರಂತೆ. ಅದರ ಬೆನ್ನಲ್ಲೇ ನೆಟ್ ಬೌಲರ್ ಆಗಿ, ಆರ್ಸಿಬಿ ಕ್ಯಾಂಪ್ಗೆ ಸೇರಿಸಿಕೊಂಡಿದ್ರಂತೆ.
ಮಹೇಶ್ ಬೌಲಿಂಗ್ಗೆ ವಿರಾಟ್ ಕೊಹ್ಲಿ ಕ್ಲೀನ್ ಬೋಲ್ಡ್
ಆರ್ಸಿಬಿ ನೆಟ್ ಬೌಲರ್ ಆಗಿ ಸೇರಿಕೊಂಡ ಮಹೇಶ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ರಂಥಹ ದಿಗ್ಗಜರಿಗೆ ಬೌಲಿಂಗ್ ಮಾಡಿದ್ದಾರೆ. ಇನ್ಫ್ಯಾಕ್ಟ್. ನೆಟ್ಸ್ನಲ್ಲಿ ವಿರಾಟ್ ಕೊಹ್ಲಿಯನ್ನ ಬೋಲ್ಡ್ ಮಾಡಿದ ಸಾಧನೆಯನ್ನೂ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬೈ ವಿರುದ್ಧದ ಪಂದ್ಯದ ವೇಳೆ ಜಸ್ಪ್ರಿತ್ ಬೂಮ್ರಾರಿಂದ ಟಿಪ್ಸ್ ಕೂಡ ಪಡೆದಿದ್ರು. ಮಹೇಶ್ರಲ್ಲಿದ್ದ ಬೌಲಿಂಗ್ ಹಾಗೂ ಕಲಿಕೆಯ ಹಸಿವೇ ನೋಡಿ ಆಶಿಶ್ ನೆಹ್ರಾರನ್ನ ಇಂಪ್ರೆಸ್ ಮಾಡಿದ್ದು. ಹೀಗಾಗಿಯೇ ನೆಹ್ರಾ ಗುಜರಾತ್ ಕೋಚ್ ಆದ ಬೆನ್ನಲ್ಲೇ ಮಹೇಶ್ಗೆ ಬುಲಾವ್ ನೀಡಿದ್ದಾರೆ.
ಸದ್ಯ ಗುಜರಾತ್ ಟೈಟನ್ಸ್ನ ಸಕ್ಸಸ್ಗೆ, ನಮ್ಮ ಹೆಮ್ಮೆಯ ಕನ್ನಡಿಗ ಮಹೇಶ್ ಕಾಣಿಕೆಯೂ ಇದೆ. ಮಹೇಶ್ ಕುಮಾರ್ ಹಾರ್ಡ್ವರ್ಕ್, ಡೆಡಿಕೇಶನ್ಗೆ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಸಪೋರ್ಟ್ ಸ್ಪಾಫ್ ಫಿದಾ ಆಗಿದ್ದಾರೆ. ಹೀಗಾಗಿ ಮಹೇಶ್ಗೆ ಮುಂದೆ ಯಾವುದಾದ್ರೂ ಒಂದು ಫ್ರಾಂಚೈಸಿ ಪರ ಆಡುವಂತಾಗ್ಲಿ. ಮಹೇಶ್ ಬಹು ವರ್ಷಗಳ ಕನಸು, ನನಸಾಗ್ಲಿ ಅಂತ ಆಶಿಸೋಣ.
ವಿಶೇಷ ವರದಿ: ಗಂಗಾಧರ್, ಸ್ಪೋರ್ಟ್ಸ್ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post