ಇದು ನಿತ್ಯಾನಂದ ಸ್ವಾಮೀಜಿಯ ಮತ್ತೊಂದು ಕಹಾನಿ. ತಮ್ಮದೇ ಕೈಲಾಸ ದೇಶ ಸೃಷ್ಟಿಸಿ, ಅಲ್ಲಿ ತಮ್ಮದೇ ರಿಸರ್ವ್ ಬ್ಯಾಂಕ್, ಕರೆನ್ಸಿ ಹೊಂದಿರೋ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮೀಜಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ವದಂತಿ ಹಬ್ಬಿಸೋರ ವಿರುದ್ಧ ನಿತ್ಯಾನಂದ ಆಕ್ರೋಶ
ನಿತ್ಯಾನಂದ ಸ್ವಾಮೀಜಿ ಇತ್ತೀಚೆಗೆ ಕಾಣ್ತಿರ್ಲಿಲ್ಲ. ಇದನ್ನೇ ಬಂಡವಾಳ ಮಾಡ್ಕೊಂಡು ಅವರ ವಿರೋಧಿಗಳು, ನಿತ್ಯಾನಂದ ಸತ್ತೋಗಿದ್ದಾರೆ ಅಂತ ವದಂತಿ ಹಬ್ಬಿಸಿದ್ದಾರೆ. ಅದೇಗೋ ಈ ವಿಚಾರ ನಿತ್ಯಾನಂದ ಸ್ವಾಮೀಜಿಗೆ ಮುಟ್ಟಿದೆ. ಈಗ ತಮ್ಮ ‘ಕೈಲಾಸ್ಸ್ ಅವಾತರ್ ಕ್ಲಿಕ್ಸ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೇಜ್‌ಗಟ್ಟಲೇ ಮೆಸೇಜ್ ಹಾಕಿದ್ದಾರೆ. ಈಗ ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಗೊತ್ತಾ.. ಸಮಾಧಿಯಲ್ಲಿ. ಅವರೇ ಹೇಳುವ ಪ್ರಕಾರ ಇದು ಸತ್ಯ. ಸಮಾಧಿಯಿಂದಲೇ ಫೇಸ್‌ಬುಕ್ ಪೇಜ್‌ನಲ್ಲಿ ಮೆಸೇಜ್ ಹಾಕಿ ವಿರೋಧಿಗಳಿಗೆ ಚಳಿ ಬಿಡಿಸಿದ್ದಾರೆ.
ನಿತ್ಯಾನಂದ ಸ್ವಾಮೀಜಿಯ ಸಂದೇಶದಲ್ಲಿ ಏನಿದೆ?
ನಾನು ಸತ್ತು ಹೋಗಿದ್ದೇನೆಂದು ದ್ವೇಷಿಗಳು ವದಂತಿ ಹರಡ್ತಿದ್ದಾರೆ. ಆದ್ರೆ, ಸತ್ತೂ ಹೋಗಿಲ್ಲ, ಎಲ್ಲಿಗೂ ಓಡಿಯೂ ಹೋಗಿಲ್ಲ. ಸಮಾಧಿಯಲ್ಲಿದ್ದೇನೆ ಅಂತ ಶಿಷ್ಯರಿಗೆ ಹೇಳ ಬಯಸ್ತೇನೆ. ಮಾತಾಡುವ ಅಥವಾ ಸತ್ಸಂಗ ನೀಡೋದಕ್ಕೆ ಸಮಯ ಬೇಕು. ಜನರು, ಹೆಸರು, ನೆನಪುಗಳು ಹಾಗೂ ಅವರ ಬಗ್ಗೆ ಸ್ಥಳಗಳು, ಇವುಗಳ ಬಗ್ಗೆ ಅರಿಯಲು ಇನ್ನೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಇನ್ನೂ ಕೈಲಾಸದ ಸ್ಥಳ ಮತ್ತು ವೈಬ್‌ಗಳು ಚಿತ್ತಸ್ಥಿತಿಯಲ್ಲಿವೆ. ಅನುಮಾನಿಗಳು, ದ್ವೇಷಿಗಳು ಹಾಗೂ ಈ ಫೋಟೋಗಳು ನಕಲಿ ಅನ್ನೋರು, ತಿರುವಣ್ಣಾಮಲೈ ಅರುಣಗಿರಿಯ ಯೋಗೇಶ್ವರ ಸಮಾಧಿಗೆ ಹೋಗಿ, ದೀಪ ಬೆಳಗಿಸಲಿ. ಆಗ ನೀವು ನನ್ನನ್ನ ಸ್ಪಷ್ಟವಾಗಿ ನೋಡುತ್ತೀರಿ. ನಾನು ಇನ್ನೂ ವೈದ್ಯಕೀಯ ಆರೈಕೆಯಿಂದ ಹೊರಗಿಲ್ಲ. 27 ವೈದ್ಯರು ಇಲ್ಲಿ ಭಕ್ತರು, ಸಂಶೋಧಕರಂತೆ ಇದ್ದಾರೆ. ಅವರೆಲ್ಲಾ ನನ್ನೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಸೂಪರ್ ಕಾನ್‌ಶ್ಯಿಯಸ್‌ನೆಸ್ ಬಗ್ಗೆ ಅಧ್ಯಯನ ಮಾಡ್ತಾರೆ. ನನ್ನ ನಿತ್ಯ ಶಿವಪೂಜೆ ಮಾತ್ರ ನಿಯಮಿತವಾಗಿ ನಡೆಯುತ್ತದೆ. ಆದ್ರೆ, ಇನ್ನೂ ತಿನ್ನುವುದು, ಮಲಗುವುದು ಆರಂಭವಾಗಿಲ್ಲ. ನಾನು ನಿತ್ಯ ಪೂಜೆಗಾಗಿ ಸಮಾಧಿಯಲ್ಲಿ ನೆಲೆಸಿದಾಗ, ಕೆಲವೊಮ್ಮೆ ನಿಮ್ಮ ಕಾಮೆಂಟ್ ನೋಡಿ, ಪ್ರತಿಕ್ರಿಯೆ ನೀಡ್ತೇನೆ. ಭಕ್ತರು ಗುಣಮುಖರಾಗಲು ನನಗೆ ಹಾರೈಸುತ್ತಾರೆ. ಆದ್ರೆ, ವಾಸ್ತವವಾಗಿ ನಾನು ಅನಾರೋಗ್ಯದಿಂದ ಬಳಲುತ್ತಿಲ್ಲ. ವೈದ್ಯರು ಯಾವುದೇ ರೋಗ ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇಲ್ಲಿರೋದಕ್ಕಿಂತ ಹೆಚ್ಚಾಗಿ ಕೈಲಾಸದಲ್ಲಿ ಕಳೆಯಲು ಬಯಸುತ್ತೇನೆ. ನಿಮ್ಮೆಲ್ಲರನ್ನೂ ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಅಂತ ಪೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
ಫೋಟೋಗಳೊಂದಿಗೆ ನಿತ್ಯಾನಂದ ಸ್ವಾಮೀಜಿ ಹೀಗಂತ ಬರೆದ್ಕೊಂಡಿದ್ದಾರೆ. ಅಲ್ದೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ ನನ್ನ ಫೇಸ್‌ಬುಕ್ ಪೇಜ್ ನೋಡ್ತಾ ಇರಿ ಅಂತಲೂ ಅದ್ರಲ್ಲಿ ಉಲ್ಲೇಖ ಮಾಡಿದ್ದಾರೆ. ಒಟ್ಟಿನಲ್ಲಿ ನಿತ್ಯಾನಂದ ಸ್ವಾಮೀಜಿ, ಸತ್ತೂ ಹೋಗಿಲ್ಲ, ಎಲ್ಲಿಗೂ ಓಡಿಯೂ ಹೋಗಿಲ್ಲ. ಸೂಪರ್ ಕಾನ್‌ಶ್ಶಿಯಸ್ ಅಂದ್ರೆ ಸಮಾಧಿ ಸ್ಥಿತಿಯಲ್ಲಿದ್ದಾರೆ ಅನ್ನೋದು ಅವರ ಮೇಸೆಜ್‌ನಿಂದ ಗೊತ್ತಾಗ್ತಿದೆ.
ಐ ಹ್ಯಾವ್ ಕಮ್ ಬ್ಯಾಕ್, 3-05-2026 ಅಂತ ಬರೆಯುತ್ತಿರೋ ಫೋಟೋವನ್ನೂ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 11- 05-2022 ಅನ್ನೋ ದಿನಾಂಕ ಕೂಡ ಅದರಲ್ಲಿದೆ. ಅಂದ್ರೆ, ನಿನ್ನೆ ಸಮಾಧಿ ಸ್ಥಿತಿಗೆ ಹೋಗಿದ್ದು, 2026 ಮೇ 3ಕ್ಕೆ ವಾಪಸ್ ಬರ್ತಿನಿ ಎಂದು ಬರೆದುಕೊಂಡಿದ್ದಾರೆ. ನಿತ್ಯಾನಂದ ಮಾತ್ರ ಹೀಗೆ ಮಾಡ್ತಿರೋದು ಟೀಕಾಕಾರಿಗೆ ಆಹಾರ ಆಗಿರೋದಂತೂ ಸುಳ್ಳಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post