ಅತಿ ಹೆಚ್ಚು ಟಿಆರ್ಪಿ ಪಡೆದ ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದರೆಲ್ಲರೂ ಇವತ್ತು ಜೀವನ ಕಟ್ಟಿಕೊಂಡಿದ್ದಾರೆ. ಎಲ್ಲ ಕಲಾವಿದರಿಗೂ ಹೆಸರು ತಂದು ಕೊಟ್ಟಂತ ಸೀರಿಯಲ್ ಇದು. ತನು ಪಾತ್ರದಲ್ಲಿ ನಟಿಸಿ ಎಲ್ಲರ ಮನಗೆದ್ದ ನಟ ಐಶ್ವರ್ಯ ಐಶ್ವರ್ಯ ಸಾಲಿಮಠ ಈಗ ವಿನಯ್ ಅವರ ಮನದರಸಿ ಆಗೋಕೆ ಸಕಲ ಸಿದ್ಧತೆ ಮಾಡಿಕೊಳ್ತಿದ್ದಾರೆ.
ಯೆಸ್, ಇತ್ತೀಚಿಗಷ್ಟೆ ನಟಿ ಐಶ್ವರ್ಯ ಹಾಗೂ ವಿನಯ್ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಮೇ 19ರಂದು ನಟಿ ಐಶ್ವರ್ಯ ತಮ್ಮ ಮನದರಸನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಈಗಿನ ಟ್ರೆಂಡ್ನಂತೆ ಐಶ್ವರ್ಯ ವಿನಯ್ ಸಖತ್ ಪ್ರೀ ವೇಡಿಂಗ್ ಶೂಟ್ ಮಾಡಿಸಿದ್ದಾರೆ. ಬ್ಯೂಟಿಫುಲ್ ಪ್ಲೇಸಸ್ಗಳಲ್ಲಿ ಈ ನವ ಜೋಡಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಐಶ್ವರ್ಯ – ವಿನಯ್ ಇಬ್ಬರು ಸಖತ್ ಹಾಟ್ ಬ್ಯೂಟಿಫುಲ್ ಆಗಿ ಅವರಿಗೆ ಇಷ್ಟ ಆದಂತೆ ಪ್ರೀ ವೇಡಿಂಗ್ ಶೂಟ್ ಮಾಡಿಸಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಬಾಳ ಪಯಣ ಶುರು ಮಾಡೋ ಇವರಿಬ್ಬರು. ಚೆಂದದ ನೆನಪಿನ ಫೋಟೋ ಶೂಟ್ ಬುತ್ತಿಯನ್ನು ಮನಸಾರೆ ಆನಂದಿಸಿದ್ದಾರೆ. ಫೋಟೋಸ್ಗಳಲ್ಲಿ ಇಬ್ಬರ ಅಂದ ಚೆಂದ ಎದ್ದು ಕಾಣ್ತಿದೆ. ಒಟ್ಟಿನಲ್ಲಿ ಕಿರುತೆರೆಯ ಕಲಾವಿದರೆಲ್ಲ ಒಬ್ಬರಾದ ಮೇಲೆ ಒಬ್ಬರು ಹೊಸ ಪಯಣಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಐಶ್ವರ್ಯ ಹಾಗೂ ವಿನಯ್ ಅವರ ಹೊಸ ಜೀವನದ ಪಯಣಕ್ಕೆ ನಮ್ಮ ಕಡೆಯಿಂದಲೂ ಬೆಸ್ಟ್ ವಿಶಸ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post