ಸತತ ಸೋಲುಗಳಿಂದ ಕಂಗೆಟ್ಟಿರೋ ಕಾಂಗ್ರೆಸ್, ಉದಯಪುರದಿಂದಲೇ ಮರುಹುಟ್ಟು ಪಡೆಯೋಕೆ ಪ್ಲಾನ್ ರೂಪಿಸಿದೆ. ಇಂದಿನಿಂದ ಮೂರು ದಿನಗಳ ಕಾಲ ರಾಜಸ್ಥಾನದ ಉದಯಪುರದಲ್ಲಿ ಚಿಂತನಾ ಶಿಬಿರ ಆಯೋಜಿಸಿದೆ. ಈ ಮೆಗಾ ಮೀಟಿಂಗ್‌ನಲ್ಲಿ ಕಾಂಗ್ರೆಸ್‌ನ 400 ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಉದಯಪುರದಿಂದಲೇ ಮರುಹುಟ್ಟು ಪಡೆಯುತ್ತಾ ಕಾಂಗ್ರೆಸ್?
ಇನ್ನು, ರಾಹುಲ್ ಗಾಂಧಿ ದೆಹಲಿಯಿಂದ ಉದಯಪುರಕ್ಕೆ ರೈಲಿನಲ್ಲೇ ತೆರಳಿದ್ದಾರೆ. ನಿನ್ನೆ ಸಂಜೆ 7.35ಕ್ಕೆ ದೆಹಲಿಯ ಸರಾಯಿ ರೋಹಿಲ್ಲಾ ರೈಲು ನಿಲ್ದಾಣದಿಂದ ಚೇತಕ್ ಎಕ್ಸ್‌ಪ್ರೆಸ್ ಮೂಲಕ ಪ್ರಮಾಣ ಬೆಳೆಸಿದ ರಾಹುಲ್‌ಗೆ ಹಲವು ಕಾಂಗ್ರೆಸ್ ನಾಯಕರು ಸಾಥ್ ಕೊಟ್ಟಿದ್ದಾರೆ.
ನಾಯಕತ್ವ, ಎಲೆಕ್ಷನ್ ಪ್ರಮುಖ ಅಜೆಂಡಾ
ಪಕ್ಷದ ನಾಯಕತ್ವ ವಿವಾದ ಹಾಗೂ ಮುಂದಿನ ಎಲೆಕ್ಷನ್‌ನಲ್ಲಿ ಗೆಲುವು.. ಈ ಎರಡು ಅಂಶಗಳೇ ಶಿಬಿರದ ಪ್ರಮುಖ ಅಜೆಂಡಾ. ಚುನಾವಣಾ ತಂತ್ರಗಾರ ಪ್ರಶಾಂಕ್ ಕಿಶೋರ್, ಕಾಂಗ್ರೆಸ್ ಪುನರುಜ್ಜೀವನಕ್ಕಾಗಿ ಸಮಗ್ರ ಪ್ರಸೆಂಟೇಷನ್ ಮಂಡಿಸಿದ ಕೆಲವೇ ದಿನಗಳಲ್ಲಿ ಈ ಮೆಗಾ ಮೀಟಿಂಗ್ ನಡೀತಿರೋದು ಕುತೂಹಲ ಕೆರಳಿಸಿದೆ.
ಪ್ರಶಾಂತ್ ಮಂಡಿಸಿರೋ ಪ್ಲಾನ್‌ಗಳಲ್ಲಿ ಗಾಂಧಿಯೇತರ ವ್ಯಕ್ತಿಗೆ ಪಕ್ಷದ ಚುಕ್ಕಾಣಿ ನೀಡೋದು ಒಂದು ಪ್ರಮುಖ ಅಂಶ. ಯಾಕಂದ್ರೆ, ಇದೇ ವರ್ಷದಲ್ಲಿ ಕಾಂಗ್ರೆಸ್‌ನ ಆಂತರಿಕ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಪ್ರಮುಖ ನಿರ್ಧಾರ ಕೈಗೊಳ್ಳೋದು ಹಾಗೂ ಪಕ್ಷಕ್ಕೆ ಟಾನಿಕ್ ನೀಡೋದು ಶಿಬಿರದ ಉದ್ದೇಶ. ಆದ್ರೆ, ಗಾಂಧಿ ಕುಟುಂಬದ ನಿಷ್ಠರ ಅಭಿಪ್ರಾಯ ಮಾತ್ರ ರಾಹುಲ್ ಕಡೆ ಇದೆ.
ರಾಹುಲ್‌ಗೆ ಒಲಿಯುತ್ತಾ ಪಕ್ಷದ ಅಧ್ಯಕ್ಷ ಪಟ್ಟ?
Shri @RahulGandhi with the Congress party's top leadership, enroute the 'Nav Sankalp Chintan Shivir – 2022', Udaipur. pic.twitter.com/lb2TAdEkOv
— Congress (@INCIndia) May 13, 2022
ಗಾಂಧಿ ಕುಟುಂಬಕ್ಕೆ ನಿಷ್ಠೆಯುಳ್ಳ ಬಹುತೇಕರು ರಾಹುಲ್ ಗಾಂಧಿಗೇ ಪಟ್ಟು ಕಟ್ಟುವಂತೆ ಗಂಟು ಬಿದ್ರೆ, ಇತ್ತ, ಜಿ-23 ಟೀಂ ಇದಕ್ಕೆ ತದ್ವಿರುದ್ಧ. ಗಾಂಧಿಯೇತರ ವ್ಯಕ್ತಿಗೆ ಪಟ್ಟಾಭಿಷೇಕ ಮಾಡುವಂತೆ ಪಟ್ಟು ಹಿಡಿದಿದೆ. ಈ ಬಗ್ಗೆ 3 ದಿನಗಳ ಚಿಂತನಾ ಶಿಬಿರದಲ್ಲಿ ಗಹನ ಚರ್ಚೆ ನಡೆಯಲಿದ್ದು, ಒಂದು ಒಮ್ಮತದ ತೀರ್ಮಾನ ಹೊರಬೀಳೋ ಸಾಧ್ಯತೆ ಇದೆ.
ಮತ್ತೆ ಒಂದು ಕುಟುಂಬ – ಒಂದು ಟಿಕೆಟ್ ಜಾರಿ?
ಇದು ಕೂಡ ಚಿಂತನಾ ಶಿಬಿರದ ಮತ್ತೊಂದು ಪ್ರಮುಖ ಚರ್ಚಾ ವಿಷಯ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ನೀಡೋದು ಈ ಯೋಜನೆ ಉದ್ದೇಶ. ನಾಯಕರು ನನಗೊಂದು, ನನ್ನ ಮಗನಿಗೊಂದು ಅನ್ನೋ ಹಾಗಿಲ್ಲ. ಒಂದು ವೇಳೆ ಈ ನಿಯಮ ಜಾರಿಯಾದ್ರೆ, ಗಾಂಧಿ ಕುಟುಂಬಕ್ಕೆ ಅನ್ವಯ ಆಗ್ಬೇಕಾ ಅಥವಾ ಬೇಡ್ವಾ ಅನ್ನೋ ವಿಚಾರವೂ ಶಿಬಿರದಲ್ಲಿ ಚರ್ಚೆಗೆ ಬರಲಿದೆ.
देश में लगातार घट रहे सामाजिक सौहार्द, बेकाबू होती महंगाई, निचले स्तर पर जाती अर्थव्यवस्था सहित अन्य कई जनविरोधी एवं विषम घटनाओं पर मंथन हेतु कांग्रेस द्वारा आयोजित तीन दिवसीय 'नव संकल्प चिंतन शिविर' में सम्मिलित होने उदयपुर पहुंचे श्री राहुल गांधी जी। pic.twitter.com/55d0X5MWw9
— Congress (@INCIndia) May 13, 2022
ಪಾರ್ಲಿಮೆಂಟ್ರಿ ಎಲೆಕ್ಷನ್‌ನಲ್ಲಿ ಬಿಜೆಪಿ ಎದುರಿಸೋಕೆ ಕಾಂಗ್ರೆಸ್ ಪ್ಲಾನ್ ಮಾಡ್ತಿದೆ. ಎಲ್ಲಾ ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡ್ಕೊಂಡು ಎಲೆಕ್ಷನ್‌ಗೆ ಹೋಗೋ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈ ಬಗ್ಗೆಯೂ ಶಿಬಿರದಲ್ಲಿ ಚರ್ಚೆ ಆಗೋ ಸಾಧ್ಯತೆಯೂ ಇದೆ. ಸುಮಾರು 400ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗವಹಿಸಲಿದ್ದು, ತಮ್ಮದೇ ಆದಂತಹ ಅಭಿಪ್ರಾಯ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಆರ್ಥಿಕ ವಿಷಯ ಬಗ್ಗೆ ಭಾಷಣ ಮಾಡಲಿದ್ದಾರೆ. ಒಟ್ಟಿನಲ್ಲಿ ಮುಂದಿನ ಎಲೆಕ್ಷನ್‌ಗಳಲ್ಲಿ ಕಾಂಗ್ರೆಸ್ ಮೇಲೆತ್ತುವ ಬಗ್ಗೆ ಚಿಂತನಾ ಶಿಬಿರದಲ್ಲಿ ಚರ್ಚೆ ಆಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post