ಟ್ವಿಟರ್ ಖರೀದಿ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ತಮ್ಮ ನಿರ್ಧಾರವನ್ನ ಪ್ರಕಟಿಸಿರುವ ಮಸ್ಕ್, ಟ್ವಿಟರ್ನಲ್ಲಿ ನಕಲಿ ಖಾತೆಗಳು ಹಾಗೂ ಸ್ಕ್ಯಾಮ್ ಖಾತೆಗಳಿಗೆ ಸಂಬಂಧಿಸಿದ ವಿವರಗಳು ಹಾಗೆಯೇ ಉಳಿದಿವೆ. ಹೀಗಾಗಿ ಖರೀದಿ ಪ್ರಕ್ರಿಯೆಯನ್ನ ಹೋಲ್ಡ್ನಲ್ಲಿ ಇರಿಸಲಾಗಿದೆ ಎಂದು ಮಸ್ಕ್ ತಿಳಿಸಿದ್ದಾರೆ.
ಕುಸಿದ ಷೇರು ಮೌಲ್ಯ
ಈ ಬೆನ್ನಲ್ಲೇ ಟ್ವಿಟರ್ನ ಷೇರು ಬೆಲೆ ಶೇಕಡಾ 17ರಷ್ಟು ಕುಸಿತಕಂಡಿದೆ ಎಂದು ವರದಿಯಾಗಿದೆ. ನಿತ್ಯದ ಟ್ವಿಟರ್ ಬಳಕೆದಾರರ ಪೈಕೆ ಶೇಕಡಾ 5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಕ್ಯಾಮ್ ಅಕೌಂಟ್ಗಳು ಎಂದು ಟ್ವಿಟರ್ ಸಂಸ್ಥೆ ಹೇಳಿತ್ತು. ಇದಕ್ಕೆ ಪ್ರತಿಯಾಗಿ ನಕಲಿ ಖಾತೆಗಳ ಮೂಲಕ ಟ್ವೀಟ್ಗಳನ್ನ ಹಂಚುವ ತಾಂತ್ರಿಕ ವ್ಯವಸ್ಥೆಯನ್ನ ತೆರವುಗೊಳಿಸುವುದು ಮೊದಲ ಆದ್ಯತೆಯಾಗಿದೆ ಎಂದು ಮಸ್ಕ್ ಹೇಳಿದ್ದರು.
ಟ್ವಿಟರ್ ಕಂಪನಿಯನ್ನ ಸುಮಾರು 44 ಬಿಲಿಯನ್ ಡಾಲರ್ ಅಂದರೆ 3.36 ಲಕ್ಷ ಕೋಟಿಗೆ ಖರೀದಿಸಲು ಮಸ್ಕ್ ಮುಂದಾಗಿದ್ದರು. ಅದರಂತೆ 52.3 ಲಕ್ಷ ಷೇರನ್ನ ಈಗಾಗಲೇ ಟ್ವಿಟರ್ನಲ್ಲಿ ಹೂಡಿಕೆ ಮಾಡಿದ್ದಾರೆ.
Twitter deal temporarily on hold pending details supporting calculation that spam/fake accounts do indeed represent less than 5% of usershttps://t.co/Y2t0QMuuyn
— Elon Musk (@elonmusk) May 13, 2022
ಹಾಗೆಯೇ ಇನ್ನೊಂದು ಟ್ವೀಟ್ ಮಾಡಿರುವ ಮಸ್ಕ್ ಇದು ಕೇವಲ ತಾತ್ಕಾಲಿಕ ತಡೆಯಷ್ಟೇ ನಾವು ಟ್ವಿಟರ್ ಖರೀದಿಗೆ ಬದ್ಧರಿದ್ದೇವೆ ಎಂದಿದ್ದಾರೆ.
Still committed to acquisition
— Elon Musk (@elonmusk) May 13, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post