ಕಾಮಿಡಿ ಜಾನರ್ನಲ್ಲಿ ಗಿಚ್ಚಿಗಿಲಿಗಿಲಿ ಸೌಂಡ್ ಮಾಡ್ತಿದೆ. ಪ್ರತಿ ವೀಕೆಂಡ ಪ್ರೇಕ್ಷಕರನ್ನ ರಂಜಿಸಲು ವಿಭಿನ್ನ ರೀತಿಯ ಸ್ಕಿಟ್ಗಳನ್ನ ಪರ್ಫಾಮ್ ಮಾಡುತ್ತಿದ್ದಾರೆ ಕಂಟೆಸ್ಟಂಟ್ಸ್. ಸದ್ಯ ಗಿಚ್ಚಿ ಗಿಲಿಗಿಲಿಯಿಂದ ಬಿಸಿ ಬಿಸಿ ಸುದ್ದಿ ಬಂದಿದೆ. ನಿರೂಪಕರಾದ ಮಂಜು-ರೀನಾ ಪ್ರೊಮೋನಲ್ಲಿ ಕಾಣಸ್ತಿಲ್ಲ. ಹಾಗಿದ್ರೇ ಎಲ್ಲೋದ್ರು.. ಇನ್ಮೊಂದೆ ಶೋನ ಸಾರಥಿ ಯಾರು? ಇದಕ್ಕೆ ಉತ್ತರ ನಿರಂಜನ್ ದೇಶಪಾಂಡೆ.
ಗಿಚ್ಚಿ ಗಿಲಿಗಿಲಿ ಮೂಲಕ ಮೊದಲ ಬಾರಿಗೆ ನಿರೂಪಣೆಯ ಜವಾಬ್ದಾರಿ ಹೊತ್ತಿದವರು ಮಂಜು ಪಾವಗಡ. ಇವರಿಗೆ ಸಾಥ್ ನೀಡಲು ಬಂದವ್ರು ಸ್ಪೋರ್ಟ್ಸ್ ಲೋಕದ ಸುಂದರಿ ರೀನಾ ಡಿಸೋಜಾ. ರೀನಾ ಅವರು ಐಪಿಎಲ್ನ ಸ್ಪೋರ್ಟ್ಸ್ ಹೋಸ್ಟ್ ಮಾಡ್ತಾರೆ. ಗಿಚ್ಚಿ ಗಿಲಿಗಿಲಿ ಅವರ ಮೊದಲ ಎಂಟರ್ಟೈನ್ಮೆಂಟ್ ಶೋವಾಗಿತ್ತು. ಸದ್ಯ ಮಂಜು-ರೀನಾ ಶೋನಿಂದ ಹೊರ ನಡೆದಿದ್ದಾರೆ. ಮೂಲಗಳ ಪ್ರಕಾರ ವೈಯಕ್ತಿಕ ಕಾರಣಕ್ಕೆ ಮಂಜು-ರೀನಾ ಶೋನಿಂದ ಹೊರ ಬಂದಿದ್ದಾರೆ ಅನ್ನೋ ಮಾಹಿತಿಯಿದೆ. ಆದರೆ ಈ ಬಗ್ಗೆ ಸ್ಪಷ್ಟ ಕಾರಣವನ್ನ ಇಬ್ಬರೂ ಎಲ್ಲೂ ಬಹಿರಂಗಪಡೆಸಿಲ್ಲ.
ಇನ್ನೊಂದು ಮೂಲದ ಪ್ರಕಾರ ಟಿಆರ್ಪಿ ಲೆಕ್ಕಾಚಾರದಲ್ಲಿ ಡೌನ್ ಆಗ್ತಿದ್ದ ಕಾರಣ ವೀಕ್ಷಕರನ್ನ ಸೆಳೆಯಲು ಈಗಾಗಲೇ ವೀಕ್ಷಕರ ಮನಸ್ಸು ಗೆದ್ದು ಸ್ಟಾರ್ ಆ್ಯಂಕರ್ ಆಗಿರುವ ನಿರಂಜನ್ ದೇಶಪಾಂಡೆ ಅವರನ್ನ ಕರೆತರಲಾಗಿದೆ ಎಂಬ ಮಾಹಿತಿ ಕೂಡಯಿದೆ. ಆದ್ರೇ ಯಾವುದನ್ನು ಚಾನಲ್ ಅಧಿಕೃತವಾಗಿ ತಿಳಿಸಿಲ್ಲ.
ಇನ್ನೂ ಪ್ರೊಮೋ ನೋಡಿದ ವೀಕ್ಷಕರು ಪರ ವಿರೋಧದ ಅಭಿಪ್ರಾಯಗಳನ್ನ ನೀಡುತ್ತಿದ್ದಾರೆ. ಇದು ಸಹಜ ಕೂಡ ಬಿಡಿ. ಯಾವ್ದೇ ರನ್ನಿಂಗ್ ಶೋನಿಂದ ಲೀಡ್ನಲ್ಲಿರುವವರು ಹೊರಬಂದ್ರೇ ಅಭಿಮಾನಿಗಳಿಗೆ ನಿರಾಸೆಯಾಗೊದು ಸತ್ಯ.
ನಿರಂಜನ್ ಅವರ ಅಭಿಮಾನಿಗಳು ಹರ್ಷವನ್ನ ವ್ಯಕ್ತಪಡೆಸ್ತಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಅಂದ್ರೇ ನಿರಂಜನ್ ಅವರ ಪತ್ನಿ ಯಶಸ್ವಿನಿ ಶೋನಲ್ಲಿ ಕಂಟೆಸ್ಟಂಟ್ ಆಗಿದ್ದಾರೆ. ಪತಿ ಪತ್ನಿ ಒಂದೇ ಶೋನಲ್ಲಿ ಇರೋದ್ರಿಂದ ಮತ್ತಷ್ಟು ಎಂಟರ್ಟೈನ್ಮೆಂಟ್ ಸಿಗೋದು ಪಕ್ಕಾ. ಒಟ್ಟಿನಲ್ಲಿ ಮಂಜು-ರೀನಾ ಅಭಿಮಾನಿಗಳು ಇಬ್ಬರನ್ನ ಮಿಸ್ ಮಾಡಿಕೊಳ್ತಿದ್ದು, ಮತ್ತೇ ಕಮ್ ಬ್ಯಾಕ್ ಮಾಡಿ ಮಂಜಣ್ಣ ಅಂತಾ ಮನವಿ ಮಾಡ್ತಿದ್ದಾರೆ. ಅದು ಏನೇ ಇರ್ಲಿ ನಿರಂಜನ್ ಅವರ ಸಾರಥ್ಯದಲ್ಲಿ ಶೋ ಹೇಗೆ ಮೂಡಿ ಬರಲಿದೆ ಅನ್ನೋ ಕುತೂಹಲ ಅಂತೂ ಇದ್ದೇ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post