ಸಚಿವ ಅಶ್ವತ್ಥ್ ನಾರಾಯಣ ಭೇಟಿ ಮಾಡಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಟ್ಟಾಗಿದ್ದರು. ಡಿ.ಕೆ.ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ನಟಿ ರಮ್ಯಾ, ಎಂಬಿ ಪಾಟೀಲ್ ಪರ ಬ್ಯಾಟಿಂಗ್ ಬೀಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರಮ್ಯಾ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಟ್ವಿಟರ್ ವಾರ್ ನಡೆಯಿತು. ಈ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋ ಪ್ರಶ್ನೆ ಉದ್ಭವಗೊಂಡಿತ್ತು. ಮತ್ತು ರಾಜಕೀಯವಾಗಿ ಭಾರೀ ಚರ್ಚೆಗೂ ಕಾರಣವಾಗಿತ್ತು.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ನಮ್ ನಾಯಕರ ಬಗ್ಗೆ ಮಾತನಾಡಬೇಡಿ-ರಮ್ಯಾಗೆ ನಲಪಾಡ್ ವಾರ್ನಿಂಗ್
ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲ ಸಂಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರ ನಡೆಯುತ್ತಿದೆ. ಈ ಶಿಬಿರಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಕೂಡ ಹಾಜರಾಗಿದ್ದಾರೆ. ಈ ಶಿಬಿರದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಇಬ್ಬರು ನಾಯಕರನ್ನ ಸಂಧಾನ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಟ್ವೀಟ್ ಮಾಡಿರುವ ರಮ್ಯಾ, ಗುಡ್ಜಾಬ್ ರಣ್ದೀಪ್ ಸುರ್ಜೇವಾಲ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯ ಕೈ ಪಾಳಯದಲ್ಲಿ ಅಂತರ್ಯುದ್ಧ-ಟ್ವೀಟ್ ಕದನಕ್ಕೆ ತೆರೆ ಎಳೆಯುವಂತೆ ಎಂಬಿ ಪಾಟೀಲ್ ಮನವಿ
ಶಿಬಿರದ ವೇಳೆ ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಆತ್ಮೀಯವಾಗಿ ಇರೋದು ಕಂಡು ಬಂತು. ಒಬ್ಬರಿಗೊಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ತಮಾಷೆ ಮಾಡುತ್ತಿರೋ ಫೋಟೋವನ್ನ ಕೆಪಿಸಿಸಿ ಹಂಚಿಕೊಂಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಸಹಾಯಕತೆ; ರಮ್ಯಾ ವಿಚಾರ ಕೇಳಿದ್ದಕ್ಕೆ ನ್ಯೂಸ್ಫಸ್ಟ್ ಪ್ರತಿನಿಧಿ ಕಾಲಿಗೆ ಬೀಳಲು ಬಂದ ಸುರ್ಜೆವಾಲಾ
Good job @rssurjewala @KBByju 👏🏽 👏🏽 https://t.co/JvzFi5hXnN
— Divya Spandana/Ramya (@divyaspandana) May 13, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post