ಬೆಂಗಳೂರು: ನಗರದಲ್ಲಿಂದು ಜೆಡಿಎಸ್‌ನ ಜನತಾ ಜಲಧಾರೆಯ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸುಮಾರು 5 ಲಕ್ಷ ಜನರು ಆಗಮಿಸೋ ನಿರೀಕ್ಷೆ ಇದೆ. ಬೆಂಗಳೂರಿನ ಎಎಸ್ ಕ್ಯಾಟರಿಂಗ್‌ನವರು ಅಡುಗೆ ಸಿದ್ಧತೆ ಮಾಡ್ತಿದ್ದಾರೆ. 3 ಸಾವಿರ ಬಾಣಸಿಗರು ಅಡುಗೆ ತಯಾರು ಮಾಡ್ತಿದ್ರೆ, 2 ಸಾವಿರ ಜನ ಊಟ ಬಡಿಸಲು ಸಿದ್ಧವಾಗಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ವೆಜಿಟೆಬಲ್ ಪಲಾವ್ ಮತ್ತು ಜಿಲೇಬಿ ವಿತರಣೆ ಮಾಡಲಾಗುತ್ತದೆ. ಸಂಜೆ 4 ಗಂಟೆಗೆ ಉಪ್ಪಿಟ್ಟು ಹಾಗೂ ಕೇಸರಿಬಾತ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮೂಲೆಮೂಲೆಯಿಂದ ಬಾಣಸಿಗರು ಬಂದಿದ್ದಾರೆ.
ಬೆಂಗಳೂರು ಮಹಾನಗರದ ಬಸವನಗುಡಿಯಲ್ಲಿ @JanataDal_S ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ಅವರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಟಿ.ಎ.ಶರವಣ, ಬಿಬಿಎಂಪಿ ಮಾಜಿ ಸದಸ್ಯ ಶ್ರೀ ತಿಮ್ಮೇಗೌಡ ಉಪಸ್ಥಿತರಿದ್ದರು. 1/3 pic.twitter.com/DEX7ZRbZZg
— H D Kumaraswamy (@hd_kumaraswamy) May 11, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post