ಮಹೇಂದ್ರ ಸಿಂಗ್ ಧೋನಿ.., ವರ್ಸಟೈಲ್ ಕ್ರಿಕೆಟರ್, ಕ್ವಿಕೆಸ್ಟ್ ವಿಕೆಟ್ ಕೀಪರ್, ಟಾಪ್ ಕ್ಲಾಸ್ ಫಿನಿಷರ್, ಟ್ಯಾಕ್ಟಿಕಲ್ ಮಾಸ್ಟರ್ ಮೈಂಡ್ ಕ್ಯಾಪ್ಟನ್..! ಒಂದರ್ಥದಲ್ಲಿ ಕ್ರಿಕೆಟ್ ಲೋಕದ ಮಾಸ್ಟರ್ ಪೀಸ್..!
ಕ್ರಿಕೆಟ್ನಿಂದ ಮಾತ್ರವಲ್ಲ, ಜಾಹೀರಾತು ಲೋಕಕ್ಕೂ ಮಹೇಂದ್ರನೆ ಅಧಿಪತಿ. ಇನ್ನು, ಕೃಷಿ ಅಂದ್ರೂ ಮಾಹಿಗೆ ಎಲ್ಲಿಲ್ಲದ ಪ್ರೀತಿ. ಬೈಕ್ ಅಂಡ್ ಕಾರ್ ಕ್ರೇಜ್ ಬಗ್ಗೆ ಹೇಳೋದೆ ಬೇಡ. ಅಪ್ರತಿಮ ದೇಶ ಪ್ರೇಮಿ ಅನ್ನೋದನ್ನ ಬಿಡಿಸಿ ಹೇಳೋದೆ ಬೇಡ., ಭಾರತೀಯ ಸೇನೆಗೆ ಸಲ್ಲಿಸ್ತಾ ಇರೋ ಸೇವೆಯೇ ಅದನ್ನ ಹೇಳುತ್ತೆ.
ಸದ್ಯ ಐಪಿಎಲ್ನಲ್ಲಿ ಬ್ಯೂಸಿಯಾಗಿರೋ ಧೋನಿ ಮತ್ತೊಂದು ವಿಚಾರದಿಂದ ಕೂಲ್ ಕ್ಯಾಪ್ಟನ್ ಸುದ್ದಿಯಲ್ಲಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿರೋ ಮಾಹಿ ಇದೀಗ ಸಿನೆಮಾ ಫೀಲ್ಡ್ಗೂ ಎಂಟ್ರಿ ಕೊಡ್ತಿದ್ದಾರೆ. ಅದು ಕೂಡ ಕಾಲಿವುಡ್ಗೆ.! ಗ್ರೌಂಡ್ನಲ್ಲಿ ಸಿಕ್ಸ್, ಬೌಂಡರಿ ಸಿಡಿಸಿ ಬೌಲರ್ಗಳಿಗೆ ಬೆಂಡೆತ್ತುತ್ತಿದ್ದ ಧೋನಿ, ಇದೀಗ ಬಣ್ಣ ಹಚ್ಚಿ ರೌಡಿಗಳನ್ನ ಬೆಂಡೆತ್ತಾರಾ.? ಖಂಡಿತಾ ಅಲ್ಲ, ಧೋನಿ ಎಂಟ್ರಿ ಕೊಡ್ತಿರೋದು ನಟನಾಗಿ ಅಲ್ಲ, ನಿರ್ಮಾಪಕನಾಗಿ.
ಮೊದಲ ಸಿನಿಮಾದಲ್ಲೇ ನಯನತಾರಾ ಮೇಲೆ ಮಾಹಿ ಕಣ್ಣು..!
ಧೋನಿ ನಿರ್ಮಾಣದ ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್.!
ಮಾಹೀ ಬಂಡವಾಳ ಹೂಡ್ತಿರೋ ಮೊದಲ ಸಿನಿಮಾಗೇ ಸೆಲೆಕ್ಟ್ ಆಗಿರೋ ನಟಿ ಲೇಡಿ ಸೂಪರ್ ಸ್ಟಾರ್ ನಯನತಾರಾ..! ತಮಿಳು ಚಿತ್ರರಂಗದ ಬಹುಬೇಡಿಕೆ ನಟಿ ನಯನತಾರಾರ ಕಾಲ್ಶೀಟ್ಗಾಗಿ ದೊಡ್ಡ ಪ್ರೊಡ್ಯೂಸರ್ಗಳೇ ಕಾದು ಕುಳಿತಿದ್ದಾರೆ. ಆದ್ರೆ, ಧೋನಿಯ ಮೊದಲ ಪ್ರಯತ್ನಕ್ಕೆ ನಯನತಾರಾ, ಕಾಲ್ಶೀಟ್ ನೀಡಿದ್ದಾರಂತೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಅವರೇ ಈ ಸಿನೆಮಾಗೆ ಆಕ್ಷನ್ ಕಟ್ ಹೇಳ್ತಿರೋದಂತೆ.
ಲೇಡಿ ಓರಿಯಂಟೆಡ್ ಸಿನಿಮಾಗೆ ಕೈ ಹಾಕಿದ ಕೂಲ್ ಕ್ಯಾಪ್ಟನ್..!
ಸಿನಿಮಾ ನಿರ್ಮಾಣದ ಜವಾಬ್ದಾರಿ ರಜನಿಕಾಂತ್ ಆಪ್ತನ ಹೆಗಲಿದೆ.!
ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಪಳಗಿದ್ದ ಸಂಜಯ್ ಎಂಬವರನ್ನ ಸಿನಿಮಾ ನಿರ್ಮಾಣದ ಕೆಲಸಗಳಿಗೆ ಧೋನಿ ನೇಮಿಸಿಕೊಂಡಿದ್ದಾರಂತೆ. ಈ ಸಿನಿಮಾಗೆ ನಾಯಕಿ ಆಗಲಿರೋ ನಯನತಾರಾ ಅವರೇ ಲೀಡ್ ಕ್ಯಾರೆಕ್ಟರ್ ಮಾಡ್ತಿದ್ದು, ಇದನ್ನ ಲೇಡಿ ಓರಿಯೆಂಟೆಡ್ ಸಿನೆಮಾ ಎನ್ನಲಾಗ್ತಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ಆರಂಭವಾಗಿದ್ದು, ಶೀಘ್ರದಲ್ಲೇ ಚಿತ್ರ ತಂಡ ಎಲ್ಲಾ ಮಾಹಿತಿಯನ್ನ ಅನೌನ್ಸ್ ಮಾಡಲಿದ್ಯಂತೆ.
ಕಾಲಿವುಡ್ನಲ್ಲೇ ಸಿನಿಮಾ ಮಾಡಲು ಹೊರಟಿದ್ದೇಕೆ ಧೋನಿ..?
ಧೋನಿ ಹುಟ್ಟಿ ಬೆಳೆದಿದ್ದೆಲ್ಲಾ ಜಾರ್ಖಾಂಡ್ನ ರಾಂಚಿಯಲ್ಲಿ. ಆದ್ರೆ, ರಾಂಚಿಗಿಂತ ಚೆನ್ನೈನಲ್ಲೇ ಮಾಹಿಗೆ ಅಭಿಮಾನಿಗಳು ಜಾಸ್ತಿ..! ಇದಕ್ಕೆ ಕಾರಣ ಚೆನ್ನೈ ಸೂಪರ್ ಕಿಂಗ್ಸ್.2008ರಿಂದ ಚೆನ್ನೈ ಪರ ಆಡ್ತಿರೋ ಧೋನಿ 4 ಟ್ರೋಫಿಗಳನ್ನೂ ಗೆದ್ದುಕೊಂಡಿದ್ದಾರೆ. ಹೀಗಾಗಿಯೇ ಅಭಿಮಾನಿಗಳ ನೆಚ್ಚಿನ ತಲಾ ಆಗಿರೋ, ಧೋನಿಗೂ ಚೆನ್ನೈ ಮೇಲೆ ವಿಶೇಷ ಅಭಿಮಾನವಿದೆ. ಹೀಗಾಗಿಯೇ ಧೋನಿ ಕಾಲಿವುಡ್ನಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿರೋದು.
ಧೋನಿಗೆ ಸಿನಿಮಾ ರಂಗ ಹೊಸದೇನಲ್ಲ..!
ಧೋನಿ ಬಣ್ಣದ ಲೋಕದ ಬಹಳಷ್ಟು ಮಂದಿ ಚಿರಪರಿಚಿತರೇ. ಬಾಲಿವುಡ್ನಲ್ಲಂತೂ ಧೋನಿಯದ್ದೇ, ಬಯೋಪಿಕ್ ಬೆಳ್ಳಿ ತೆರೆಗೆ ಅಪ್ಪಳಿಸಿ ಸಂಚಲನ ಸೃಷ್ಟಿಸಿದೆ. ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದರು. ತಮ್ಮ ಜೀವನಾಧಾರಿತ MS ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾದ ಪ್ರಮೋಷನ್ಗಾಗಿ ಸ್ವತಃ ಧೋನಿಯೇ ಹೋಗಿದ್ರು. ಹಾಗೇ ನೋಡಿದ್ರೆ ಧೋನಿಗೆ ಸಿನಿಮಾ ಫೀಲ್ಡ್ ಹೊಸದೇನಲ್ಲ.
ಒಟ್ನಲ್ಲಿ ತಮಿಳುನಾಡಲ್ಲಿ ತಲಾ ಎಂದೇ ಖ್ಯಾತಿ ಪಡೆದಿರೋ ಧೋನಿ, ಈಗ ಸಿನಿಮಾ ನಿರ್ಮಾಣದ ಮೂಲಕ ಅದೃಷ್ಠ ಪರೀಕ್ಷೆಗೆ ಹೊರಟಿದ್ದಾರೆ. ಫ್ಯಾನ್ಸ್ ತಲಾ ಕೈ ಹಿಡೀತಾರಾ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post