ಬೆಂಗಳೂರು: ಚುನಾವಣೆ ಹೊತ್ತಲ್ಲೇ ರಾಜ್ಯ ಕೈ ಪಾಳಯದಲ್ಲಿ ಅಂತರ್ಯುದ್ಧ ಶುರುವಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧವೇ ರಮ್ಯಾ ಕೆಂಡದ ಟ್ವೀಟಾಸ್ತ್ರಗಳನ್ನ ಪ್ರಯೋಗಿಸಿದ್ದಾರೆ. ಇತ್ತ ಡಿಕೆಶಿ ಪರ ಅವರ ಪಟ್ಟ ಶಿಷ್ಯ ನಲಪಾಡ್ ಬ್ಯಾಟ್ ಬೀಸಿದ್ರೆ, ಅತ್ತ ರಮ್ಯಾ ಬೆನ್ನಿಗೆ ಯೂಥ್ ಕಾಂಗ್ರೆಸ್ ಮುಖಂಡ ನಿಂತಿದ್ದಾರೆ. ಈ ಎಲ್ಲದರ ಮಧ್ಯೆ ಕೋಲ್ಡ್ವಾರ್ಗೆ ತೆರೆ ಎಳೆಯುವಂತೆ ಖುದ್ದು ಎಂ.ಬಿ ಪಾಟೀಲ್ ಮನವಿ ಮಾಡಿದ್ದಾರೆ.
Whilst the KPCC president himself had asked all to end the discussion. Furthering it is uncalled for and detrimental to Karnataka 2023. I urge all partymen and women to end this here, and focus on the larger mission. Let’s work together. 3/3
— M B Patil (@MBPatil) May 12, 2022
ಅಂತರ್ಯುದ್ಧ.. ರಾಜ್ಯ ಕೈ ಪಾಳಯದಲ್ಲಿ ಅಂತರ್ಯುದ್ಧ. ಡಿಕೆಶಿ ವಿರುದ್ಧ ಮಾಜಿ ಸಂಸದೆ ರಮ್ಯಾ ಟ್ವೀಟಾಸ್ತ್ರ.. ಡಿಕೆಶಿ ಬೆನ್ನಿಗೆ ನಿಂತಿರೋ ಅವರ ಪಟ್ಟ ಶಿಷ್ಯ ನಲಪಾಡ್‌ಗೂ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಮಧ್ಯೆ ಅಂತರ್ಯುದ್ಧಕ್ಕೆ ಯೂಥ್ ಕಾಂಗ್ರೆಸ್ ಮುಖಂಡನ ಎಂಟ್ರಿ ಕೂಡ ಆಗಿದೆ.
ಕನಕಪುರದ ಬಂಡೆ ವಿರುದ್ಧ ರಮ್ಯಾ ಕಿಡಿಕಾರ್ತಿದ್ದಂತೆ, ಡಿಕೆಶಿ ಪಟ್ಟ ಶಿಷ್ಯ ನಲಪಾಡ್ ಕೆರಳಿ ಕೆಂಡವಾಗಿದ್ದಾರೆ. ನೇರಾನೇರ ಅಖಾಡಕ್ಕೆ ಇಳಿದಿರೋ ನಲಪಾಡ್, ರಮ್ಯಾ ಟ್ವೀಟ್ ಬಾಣಗಳ ವಿರುದ್ಧ ಮಾತಿನ ಸಿಡಿ ಮದ್ದುಗಳನ್ನೇ ಸುರಿಸಿದ್ದಾರೆ. ರಮ್ಯಾ ಸಡನ್ನಾಗಿ ಯಾಕೆ ಬಂದ್ರು? ಯಾವುದಾದ್ರೂ ಒಂದು ಕುರ್ಚಿಗೆ ಟವಲ್ ಹಾಕಲು ಬಂದಿದ್ದಾರಾ ಅಂತಾ ವಾಗ್ದಾಳಿಯನ್ನೇ ನಡೆಸಿದ್ದಾರೆ.
ಹೀಗೆ ನಲಪಾಡ್ ವಾಗ್ದಾಳಿ ನಡೆಸಿದ್ದು ನಟಿ ರಮ್ಯಾ ಸಿಟ್ಟಿನ ಕಟ್ಟೆ ಹೊಡೆಯುವಂತೆ ಮಾಡಿತ್ತು. ಬೇಲ್ ಮೇಲಿರುವ ವ್ಯಕ್ತಿ ನನ್ನ ಅಸ್ತಿತ್ವ ಪ್ರಶ್ನಿಸ್ತಿದ್ದಾನೆ, ವ್ಹಾ ಅಂತಾ ಟೀಕಾ ಪ್ರಹಾರ ನಡೆಸಿದ್ರು. ಇದಿಷ್ಟೇ ಅಲ್ಲದೆ ನಲಪಾಡ್ ಮೇಲಿನ ಆರೋಪಗಳ ಪೇಪರ್ ಕಟಿಂಗ್ ಪೋಸ್ಟ್ಗಳನ್ನು ಶೇರ್ ಮಾಡಿ ವ್ಯಂಗ್ಯವಾಡಿದ್ರು.
ನನ್ನ ಅಸ್ತಿತ್ವ ಪ್ರಶ್ನಿಸ್ತಿದ್ದಾನೆ ವ್ಹಾ…
ಈ ಹುಡುಗ ನಲಪಾಡ್, ಯೂತ್ ಕಾಂಗ್ರೆಸ್‌ನ ಕರ್ನಾಟಕದ ಅಧ್ಯಕ್ಷ. ಬೇಲ್ ಮೇಲೆ ಇದ್ದಾನೆ. ಎಂಎಲ್ಎ ಹ್ಯಾರಿಸ್ ಪುತ್ರ. ಈತ ನನ್ನ ಅಸ್ತಿತ್ವವನ್ನೇ ಪ್ರಶ್ನಿಸ್ತಿದ್ದಾನೆ, ವ್ಹಾ.
ರಮ್ಯಾ, ಮಾಜಿ ಸಂಸದೆ
ಇತ್ತ ನಲಪಾಡ್ಗೆ ನಟಿ ರಮ್ಯಾ ಟಾಂಗ್ ಕೊಟ್ರೆ, ಅತ್ತ ನಲಪಾಡ್ ಹೆಸರು ಪ್ರಸ್ತಾಪಿಸದೇ ಯೂಥ್ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ, ರಮ್ಯಾ ಪರ ಟ್ವೀಟ್ ಮಾಡಿ ಬ್ಯಾಟ್ ಬೀಸಿದ್ದಾರೆ.
ಈ ರೀತಿ ಮಾತಾಡೋದು ಸರಿಯಲ್ಲ
ಪಕ್ಷದ ಹಿರಿಯ ನಾಯಕರ ಹೇಳಿಕೆಗಳನ್ನ ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ, ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ.
ರಕ್ಷಾ ರಾಮಯ್ಯ, ಯೂಥ್ ಕಾಂಗ್ರೆಸ್ ಮುಖಂಡ
ಕೇವಲ ಇದಿಷ್ಟೇ ಅಲ್ಲ.. ರಮ್ಯಾ ಪರ ಕಾಂಗ್ರೆಸ್ ಪದಾಧಿಕರಿಗಳು ಕೂಡ ಬ್ಯಾಟ್ ಬೀಸಿದ್ದಾರೆ. ರಮ್ಯಾ ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡುತ್ತಿರುವುದು ಸರಿಯಲ್ಲ ಅಂತಾ ಟ್ವೀಟ್ ಮಾಡಿದ್ದಾರೆ.
ಹೀಗೆ ಸ್ವಪಕ್ಷದಲ್ಲೇ ಇಂಥದ್ದೊಂದು ಅಂತರ್ಯುದ್ಧ ಶುರುವಾಗ್ತಿದ್ದಂತೆ ಈ ಎಲ್ಲಾ ಕದನಕ್ಕೂ ತೆರೆ ಎಳೆಯುವಂತೆ ಖುದ್ದು ಎಂ.ಬಿ.ಪಾಟೀಲ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ಇದನ್ನ ಇಲ್ಲಿಗೆ ಕೊನೆಗೊಳಿಸಿ
ಇದನ್ನ ಮುಂದುವರಿಸುವುದು ಚುನಾವಣೆಯ ದೃಷ್ಟಿಯಿಂದ ಅನಾಹುತಕಾರಿ ಮತ್ತು ಹಾನಿಕಾರಕವಾಗಲಿದೆ. ಇದನ್ನ ಇಲ್ಲಿಗೆ ಕೊನೆಗೊಳಿಸಬೇಕೆಂದು ಪಕ್ಷದ ಎಲ್ಲಾ ನಾಯಕರು ಮತ್ತು ನಾಯಕಿಯರನ್ನು ಕೋರುತ್ತೇನೆ.
ಎಂ.ಬಿ ಪಾಟೀಲ್, ಕಾಂಗ್ರೆಸ್ ಹಿರಿಯ ಶಾಸಕ
ಚುನಾವಣೆ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಂತರ್ಯುದ್ಧ ಶುರುವಾಗಿದೆ. ಟ್ವೀಟ್ ಕಾಳಗದಲ್ಲಿ ಒಬ್ಬರ ಮೇಲೊಬ್ಬರು ಮುಗಿ ಬೀಳ್ತಿದ್ದಾರೆ. ಸದ್ಯ ಈ ಟ್ವೀಟ್ ವಾರ್ನಿಂದ ಕಾಂಗ್ರೆಸ್ಗೆ ಒಂದು ಕಡೆ ಮುಜುಗರ ತಂದಿಟ್ಟಿದ್ರೆ, ಇತ್ತ ರಾಜ್ಯ ಕಮಲ ಪಾಳಯಕ್ಕೆ ಒಂದೊಳ್ಳೆ ಅಸ್ತ್ರ ಸಿಕ್ಕಿರೋದಂತೂ ಸುಳ್ಳಲ್ಲ.
ಪ್ರಖ್ಯಾತ ಬಹುಭಾಷಾ ಚಿತ್ರನಟಿ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷೆ @divyaspandana ರವರು ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಗಳನ್ನು ಮಾಡುತ್ತಿರುವುದು ಸರಿಯಲ್ಲ. @brnaidu1978 ಅವರೇ ನಿಮ್ಮ ಹೋರಾಟ ಬಿಜೆಪಿಯ ಮೇಲಿರಲಿ.#ದಿವ್ಯಸ್ಪಂದನ_ಕರ್ನಾಟಕದಹೆಮ್ಮೆ pic.twitter.com/EY4fH8dMZG
— A N Nataraj Gowda – ಎ.ಎನ್.ನಟರಾಜ್ ಗೌಡ (@annatarajgowda) May 12, 2022
ಪಕ್ಷದ ಆಂತರಿಕ ವಿಷಯ ಅಥವಾ ಪಕ್ಷದ ಹಿರಿಯ ನಾಯಕರ ಹೇಳಿಕೆಗಳನ್ನು ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ನನ್ನ ಸ್ನೇಹಿತರು ಯುವ ಕಾಂಗ್ರೆಸ್ ನವರು ಇದನ್ನ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. @IYCKarnataka https://t.co/OyXIJJoInt
— RR 🇮🇳 (@RakshaRamaiah) May 12, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post