ಕಾಮಿಡಿ ಕಿಲಾಡಿಗಳು ಸೀಸನ್ ಒಂದನ್ನ ವೀಕ್ಷಕರು ಮರ್ತಿಲ್ಲ. ಅಲ್ಲಿ ಜೀವನ ಕಟ್ಟಿಕೊಳ್ಳಲು ಬಂದಂಥ ಸ್ಪರ್ಧಿಗಳಿಗೆ ಆ ವೇದಿಕೆ ನಿಜಕ್ಕೂ ಜೀವನ ಕಟ್ಟಿಕೊಟ್ಟಿತು. ಸೀಸನ್ 1ರ ಜಿಜಿ ಅಲಿಯಾಸ್ ಗೋವಿಂದೇ ಗೌಡ ಆ್ಯಂಡ್ ದಿವ್ಯಾ, ಕಾಮಿಡಿ ಕಿಲಾಡಿಯ ವೇದಿಕೆಯಲ್ಲಿ ಪರಿಚಯ ಆಗಿ.. ಇಬ್ಬರಿಗೂ ಪ್ರೀತಿ ಹುಟ್ಟಿ.. ಅಲ್ಲಿಂದ ಲೈಫ್ ಟೈಮ್ ಬಂಧನಕ್ಕೆ ಕಾಲಿಟ್ಟರು.
ಜಿ ಜಿ ಆ್ಯಂಡ್ ದಿವ್ಯಾ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಗಿದೆ. ಈಗ ಜಿಜಿ ಅ್ಯಂಡ್ ದಿವ್ಯಾ ಅವರಿಗೆ ಒಂದು ಮುದ್ದಾದ ಮಗು ಜನಿಸಿದೆ. ಜೂನಿಯರ್ ಜಿಜಿ ದಿವ್ಯಾ ಅವರ ಮಡಿಲಿನಲ್ಲಿ ತುಂಟಾಟ ಮಾಡ್ತಿದೆ. ಈಗಿನ ಟ್ರೆಡಿನಂತೆ ಬೇಬಿ ಫೋಟೋ ಶೂಟ್ ಮಾಡಿಸಿದ್ದಾರೆ. ಜ್ಯೂನಿಯ ಜಿಜಿಯ ತಂದೆ ತಾಯಿ ಫೋಟೋ ಶೂಟ್ನಲ್ಲಿ ದೃಷ್ಟಿ ಬೀಳುವ ರೀತಿ ಕಾಣ್ತಿದೆ ಈ ಪುಟ್ಟ ಕಂದಮ್ಮ.
ದಿವ್ಯಾರ ಮದರ್ವುಡ್ನ ನಿಜಕ್ಕೂ ಅಕ್ಷರ ಸಹ ಜೀವಿಸ್ತಿದ್ದಾರೆ. ಮುದ್ದಾದ ಕಂದಮ್ಮನ ಜೊತೆ ಈಗ ಸಮಯ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಅಪರಿಚಿತರಾಗಿದ್ದ ಇವರು ರಿಯಾಲಿಟಿ ಶೋ ಮೂಲಕ ಪರಿಚಯಾವಾಗಿ ಲೈಫ್ ಟೈಮ್ ಜೊತೆಯಾಗಿದ್ದಾರೆ. ಈಗ ಈ ಇಬ್ಬರು ಜೂನಿಯರ್ ಜಿಜಿ ಜೊತೆ ಸಮಯ ಕಳೆಯುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post