ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದ ಪಾಪಿ ನಾಗೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಮಿಳುನಾಡಿನ ಆಶ್ರಮವೊಂದರಲ್ಲಿ ಆ್ಯಸಿಡ್ ನಾಗೇಶ್ ಸೆರೆಯಾಗಿದ್ದಾನೆ.
ಈ ಸಂದರ್ಭದಲ್ಲಿ ನ್ಯೂಸ್ಫಸ್ಟ್ ಜೊತೆ ಆ್ಯಸಿಡ್ ಸಂತ್ರಸ್ತೆಯ ತಂಗಿ ಮಾತನಾಡಿ, ಬಂಧನದ ವಿಚಾರ ಕೇಳಿ ನನಗೆ ಖುಷಿಯಾಗುತ್ತಿದೆ. ಅವನಿಗೆ ಏನೇ ಶಿಕ್ಷೆ ನೀಡಿದರೂ ನನ್ನ ಅಕ್ಕನ ಮುಂದೆಯೇ ನೀಡಬೇಕು ಎಂದು ಕೇಳಿಕೊಳ್ತೇನೆ ಎಂದು ಆಗ್ರಹಿಸಿದರು.
ನನ್ನಕ್ಕ ಎಷ್ಟು ನೋವನ್ನ ಅನುಭವಿಸುತ್ತಿದ್ದಾಳೆ ಎಂದು ನಾವು ನೋಡ್ತಿದ್ದೇವೆ. ಯಾವ ಹುಡುಗಿಯರಿಗೂ ಈ ರೀತಿ ಆಗಬಾರದು. ನನ್ನ ಅಕ್ಕ ಅನುಭವಿಸಿರುವ ನೋವನ್ನು ಅವನು ಕೂಡ ಅನುಭವಿಸಬೇಕು ಎಂದು ಸಂತ್ರಸ್ತೆಯ ತಂಗಿ ಕಣ್ಣೀರಿಟ್ಟಿದ್ದಾಳೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post