ಸದ್ಯ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಟೂರ್ನಿಯಲ್ಲಿ ಆಡಿರೋ 12 ಪಂದ್ಯಗಳಲ್ಲಿ 6 ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಕ್ಕೆ ಡೆಲ್ಲಿ ಇನ್ನುಳಿದ 2 ಮ್ಯಾಚ್ ಗೆಲ್ಲಲೇಬೇಕಿದೆ. ಈ ನಡುವೆ ಡೆಲ್ಲಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಒಂದಿದೆ.
ಹೌದು, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಪೃಥ್ವಿ ಶಾ ತಂಡದಿಂದ ಹೊರಗೆ ಉಳಿದಿದ್ದರು. ಈಗ ಪೃಥ್ವಿ ಶಾ ಆರೋಗ್ಯ ಸುಧಾರಿಸಿಕೊಂಡ ಕಾರಣ ಮತ್ತೆ ತಂಡಕ್ಕೆ ಮರಳಲಿದ್ದಾರೆ. ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯೋ ಪಂದ್ಯಕ್ಕೆ ಪೃಥ್ವಿ ಶಾ ಲಭ್ಯರಾಗಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post