ಚಿಕ್ಕೋಡಿ: ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಪತಿಯೇ ಕೊಲೆ ಮಾಡಿರೋ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದಿದೆ.
ಬಾಳವ್ವ (30) ಮೃತ ದುರ್ದೈವಿಯಾಗಿದ್ದು, ಪತಿ ಮುತ್ತಪ್ಪ ಕೂಡ ಸಾವಿಗೆ ಶರಣನಾಗಿದ್ದಾನೆ. ಕುಡಿದ ನಶೆಯಲ್ಲಿ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮವಾಗಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಂಗಳವಾರ ರಾತ್ರಿ ಹತ್ತು ಗಂಟೆಗೆ ಸಾವನ್ನಪ್ಪಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪತಿ ಮುತ್ತಪ್ಪ ಮನೆಗೆ ಕುಡಿದು ಬಂದು ಆವಾಗ ಆವಾಗ ಜಗಳವಾಡುತ್ತಿದ್ದ. ನನಗೆ ಹಣ ಕೊಡು ಎಂದು ಪತ್ನಿಯನ್ನ ಕಾಡಿಸುತ್ತಿದ್ದನಂತೆ. ಇಬ್ಬರ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಬಾಳವ್ವನನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಇನ್ನು ಕೊಲೆ ಮಾಡಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಇಂದು ಬೆಳಗಿನ ಜಾವ ಗ್ರಾಮದ ಚೌಗಲಾ ತೋಟದಲ್ಲಿ ಮುತ್ತಪ್ಪ ತಾನೂ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post