ಮುಕೇಶ್ ಚೌಧರಿ ಮತ್ತು ಸಿಮರ್ಜಿತ್ ಸಿಂಗ್ ಅವರ ಬೌಲಿಂಗ್ ವೈಖರಿಗೆ CSK ನಾಯಕ MS ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಧೋನಿ, ಮುಕೇಶ್ ಚೌಧರಿ ಮತ್ತು ಸಿಮ್ರಾನ್ಜಿತ್ ಬಹಳಷ್ಟು ಧೈರ್ಯಶಾಲಿಗಳಾಗಿದ್ದು, ಇಬ್ಬರಿಗೂ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದಾರೆ.
ಎದುರಾಳಿ ತಂಡ ನೀಡುವ ಎಂಥಹುದ್ದೇ ಸವಾಲನ್ನ ಸ್ವೀಕರಿಸುತ್ತಾರೆ. ಇನ್ನಷ್ಟು ಪಂದ್ಯಗಳನ್ನು ಆಡಿದ್ರೆ ಅವರಲ್ಲಿ ವಿಶ್ವಾಸ ದುಪ್ಪಟ್ಟಾಗಲಿದೆ. ಆ ಮೂಲಕ ತಮ್ಮ ಯೋಜನೆ ಕಾರ್ಯಗತಗೊಳಿಸಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲಿದ್ದಾರೆ ಎಂದು ಎಂಎಸ್ ಧೋನಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಅತ್ಯುತ್ತಮ ಸ್ಪೆಲ್ ಮಾಡಿದ ಮುಖೇಶ್ ಚೌಧರಿ, ಸಿಮ್ರಾನ್ಜಿತ್ ಮೊದಲ 8 ಓವರ್ಗಳಲ್ಲಿ ಚೆನ್ನೈ ತಂಡವನ್ನು 4 ವಿಕೆಟ್ಗೆ 33 ರನ್ಗಳಿಗೆ ಸೀಮಿತ ಗೊಳಿಸಲು ಯಶಸ್ವಿಯಾದ್ರು. ಪಂದ್ಯದಲ್ಲಿ ಮುಖೇಶ್ ಚೌಧರಿ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ 23 ರನ್ ನೀಡಿ 3 ವಿಕೆಟ್ ಪಡೆಯುವುದರೊಂದಿಗೆ ಮಿಂಚಿದರು. ಇತ್ತ ಸಿಮ್ರಾನ್ಜಿತ್ ಕೂಡ 22 ರನ್ ನೀಡಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]ve.com
Discussion about this post