ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನುಭವಿಸಿದೆ. ಪ್ಲೇ ಆಫ್ ದೃಷ್ಟಿಯಿಂದ ಬೆಂಗಳೂರಿಗೆ ಈ ಪಂದ್ಯದ ಅತ್ಯಂತ ಮಹತ್ವವಾಗಿತ್ತು. ಆದ್ರೆ ಫಲಿತಾಂಶ ನಮ್ಮದಾಗಲಿಲ್ಲ. ಇದರಿಂದ ಆರ್ಸಿಬಿಗೆ ಪ್ಲೇ ಆಫ್ ಕನಸು ಇದೀಗ ಮತ್ತಷ್ಟು ಕಠಿಣ ಎನಿಸಿದೆ.
ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಗ್ಗರಿಸಿದೆ. ಪಂಜಾಬ್ ನೀಡಿದ್ದ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಲು ಸಾಧ್ಯವಾಗದೆ 54 ರನ್ಗಳಿಂದ ಡು ಪ್ಲೆಸಿ ಪಡೆ ಮಂಡಿಯೂರಿದೆ. ಇದ್ರಿಂದ ಮಯಾಂಕ್ ನೇತೃತ್ವದ ಪಂಜಾಬ್ ಪ್ಲೇ ಆಫ್ನತ್ತ ದಿಟ್ಟ ಹೆಜ್ಜೆ ಇಟ್ಟಿದ್ರೆ, ಬೆಂಗಳೂರು ಪ್ಲೇ ಆಫ್ ಕನಸು ಮಾತ್ರ ಮತ್ತಷ್ಟು ಕಠಿಣ ಸ್ಥಿತಿಗೆ ಸಿಲುಕಿರೋದ್ರ ಜೊತೆಗೆ ಮುಂದಿನ ಪಂದ್ಯ ಗೆದ್ದೇ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
RCB ಬೌಲರ್ಗಳಿಗೆ ಬೆಂಡೆತ್ತಿದ ಬೈರ್ಸ್ಟೋ..!
ಟಾಸ್ ಸೋತು ಬ್ಯಾಟಿಂಗ್ಗಿಳಿದ ಪಂಜಾಬ್ ಕಿಂಗ್ಸ್, ನಿರೀಕ್ಷೆಯಂತೆ ಸ್ಫೋಟಕ ಇನ್ನಿಂಗ್ಸ್ ಅನ್ನೇ ಆರಂಭಿಸ್ತು. ಪವರ್ ಪ್ಲೇ ಓವರ್‌ಗಳಲ್ಲೇ ಧಮಾಕ ಸೃಷ್ಟಿಸಿದ ಜಾನಿ ಬೈರ್ಸ್ಟೋ ಮತ್ತು ಶಿಖರ್ ಧವನ್ ಕೇವಲ 4 ಓವರ್‌ಗೆ ಅರ್ಧಶತಕದ ಗಡಿ ಮುಟ್ಟಿದ್ರು. ಆದ್ರೆ ಈ ವೇಳೆ ಧವನ್ ಔಟಾದ್ರೆ, ಬೈರ್ಸ್ಟೋ ಮಾತ್ರ ಅಬ್ಬರಿಸಿ 21 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ ಗಗಕ್ಕೇರಿಸಿದ್ರು. ಇನ್ನ ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ 7 ಭರ್ಜರಿ ಸಿಕ್ಸರ್, 4 ಬೌಂಡರಿಗಳು ಸೇರಿವೆ.
ಬೈರ್ಸ್ಟೋ ಬಳಿಕ ಧೂಳೆಬ್ಬಿಸಿದ ಲಿಯಾಮ್ ಲಿವಿಂಗ್ಸ್ಟೋನ್..!
ಬೈರ್ಸ್ಟೋ ಸಿಡಿಯುತ್ತಿದ್ರೆ ಭಾನುಕ ರಾಜಪಕ್ಸ, ಮಯಾಂಕ್ ಅಗರ್ವಾಲ್ ತಂಡಕ್ಕೆ ಕೊಡುಗೆ ನೀಡುವಲ್ಲಿ ವಿಫಲರಾದ್ರು. ಇದರ ಬೆನ್ನಲ್ಲೇ ಆರ್ಭಟಿಸುತ್ತಿದ್ದ ಬೈರ್ಸ್ಟೋ ಕೂಡ ಔಟಾದ್ರು. ಆಗ ಪಂಜಾಬ್ ತಂಡದ ಮೊತ್ತ ಹಠಾತ್ ಕುಸಿಯಿತು. ಆದ್ರೆ ಈ ವೇಳೆ ಕೇರ್ಫುಲ್ ಆಗಿ ಬ್ಯಾಟ್ ಬೀಸಿದ ಲಿವಿಂಗ್ಸ್ಟೋನ್, ಕೊನೇ ಹಂತದಲ್ಲಿ RCB ಬೌಲರ್ಗಳ ಬೆವರಿಳಿಸಿದ್ರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಸಿಡಿಸಿದ್ರು. 42 ಎಸೆತಗಳಲ್ಲಿ 70 ರನ್ ಸಿಡಿಸಿ ಬೆಂಗಳೂರು ಬೌಲರ್ಗಳ ಪಾಲಿಗೆ ವಿಲನ್ ಆಗಿ ಪರಿಣಮಿಸಿದ್ರು.
ಬೆಂಕಿ ಬ್ಯಾಟಿಂಗ್ ನಡುವೆಯೂ ಮಿಂಚಿದ ಹರ್ಷಲ್..!
ಬೇರ್ ಸ್ಟೋ, ಲಿವಿಂಗ್ ಸ್ಟೋನ್ ಅವರ ಅಬ್ಬರದ ಬ್ಯಾಟಿಂಗ್ ನಡುವೆಯೂ ಹರ್ಷಲ್ ಪಟೇಲ್ ಮಿಂಚಿನ ದಾಳಿ ನಡೆಸಿದ್ರು. ಲಿವಿಂಗ್ಸ್ಟೋನ್, ಮಯಾಂಕ್, ಹಪ್ರೀತ್ಬ್ರಾರ್ ಮತ್ತು ರಿಷಿಧವನ್ ವಿಕೆಟ್ ಕಬಳಿಸಿದ್ರು. ಆದ್ರೆ ಅದಾಗಲೇ ಪಂಜಾಬ್ ಬೃಹತ್ ಮೊತ್ತವನ್ನೇ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಪ್ರತೀ ಓವರ್‌ಗೆ ತಲಾ 10ಕ್ಕೂ ಹೆಚ್ಚು ರನ್ ಕಲೆ ಹಾಕಿದ ಪಂಜಾಬ್, RCB ಗೆಲುವಿಗೆ 210 ರನ್ ಗುರಿ ನೀಡ್ತು.
ಪಂಜಾಬ್ ಬೌಲರ್ಗಳ ದಂಡಯಾತ್ರೆಗೆ ಮಂಕಾದ RCB ಬ್ಯಾಟರ್ಸ್.!
ಬೃಹತ್ ಟಾರ್ಗೆಟ್ ಬೆನ್ನತ್ತಿದ RCB ಬಿರುಸಿನ ಆರಂಭ ಒದಗಿಸೋ ಮುನ್ಸೂಚನೆ ನೀಡ್ತು. ಆದ್ರೆ ಓಪನರ್ಗಳಾದ ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೋಮ್ರೋರ್ ಪವರ್ ಪ್ಲೇನಲ್ಲಿ ವಿಕೆಟ್ ಒಪ್ಪಿಸಿ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ರು. ಈ ವೇಳೆ ರಜತ್ ಪಟಿದಾರ್-ಗ್ಲೇನ್ ಮ್ಯಾಕ್ಸ್ವೆಲ್ ಕುಸಿದ ತಂಡಕ್ಕೆ ಅರ್ಧಶತಕದ ಜೊತೆಯಾಟವಾಡಿ ಜೀವ ತುಂಬಿದ್ರು. ಆದ್ರೆ ಪ್ರಯೋಜನ ಆಗಲಿಲ್ಲ. ಪಟಿದಾರ್ 26, ಮ್ಯಾಕ್ಸ್ವೆಲ್ 35 ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು.
ಸತತ ವಿಕೆಟ್ ಕಳೆದುಕೊಂಡಿದ್ದ ಬೆಂಗಳೂರಿಗೆ ದಿನೇಶ್ ಕಾರ್ತಿಕ್ ನೆರವಾಗ್ತಾರೆ ಎಂದೇ ಭಾವಿಸಲಾಗಿತ್ತು. ಆದ್ರೆ ಅವರ ಆಟ ಕೂಡ 11 ರನ್ಗೆ ಅಂತ್ಯವಾಯ್ತು. ಪಂಜಾಬ್ ಬೌಲರ್ಗಳಾದ ರಬಾಡ, ರಿಷಿ ಧವನ್, ಚಹರ್ ದಂಡಯಾತ್ರೆಗೆ ಶಹಬಾಜ್, ಹಸರಂಗ, ಹರ್ಷಲ್ ಪಟೇಲ್ ಹೀಗೆ ಆರ್ಸಿಬಿ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ರು ಪೆವಿಲಿಯನ್ ಸೇರಿದ್ರು. ಅಂತಿಮವಾಗಿ RCB 54 ರನ್ಗಳ ಸೋಲನುಭವಿಸ್ತು.
After Match No. 6⃣0⃣ of the #TATAIPL 2022, here's how the Points Table looks 🔽 #RCBvPBKS pic.twitter.com/tCYVb2Z47g
— IndianPremierLeague (@IPL) May 13, 2022
ಆರ್ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ..!
ಪಂಜಾಬ್ ವಿರುದ್ಧ ಸೋತಿರುವ RCB, ಈ ಪಂದ್ಯ ಗೆದ್ದಿದ್ರೆ, ಪ್ಲೇ ಆಫ್ ಹಾದಿ ಸುಗಮವಾಗಿರುತ್ತಿತ್ತು. ಆದ್ರೆ ಸೋತ ಕಾರಣ ಮುಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಜೊತೆಗೆ ಪ್ಲೇ ಆಫ್ ರೇಸ್ನಲ್ಲಿ ಡೆಲ್ಲಿ, ಸನ್ರೈಸರ್ಸ್, ಪಂಜಾಬ್ ತಂಡಗಳು ತೀವ್ರ ಪೈಪೋಟಿ ನೀಡಲಿವೆ.
ಸದ್ಯ RCBಗೆ ಒಂದು ಪಂದ್ಯ ಬಾಕಿ ಇದ್ರೆ, ಡೆಲ್ಲಿ, ಪಂಜಾಬ್ಗೆ ತಲಾ 2, SRHಗೆ 3 ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ RCB ಉಳಿದ ಪಂದ್ಯ ಗೆದ್ದು ನೆಟ್ ರನ್ರೇಟ್ ಪಾಸಿಟಿವ್ ಮಾಡಿಕೊಳ್ಳಬೇಕು. ಒಂದ್ವೇಳೆ ಡೆಲ್ಲಿ, ಪಂಜಾಬ್, SRH ಉಳಿದೆಲ್ಲಾ ಪಂದ್ಯಗಳನ್ನ ಗೆದ್ರೆ, RCB ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗೋದು ಖಚಿತ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post